ಮೈಸೂರು ದಸರಾ ಉದ್ಘಾಟನೆಗೆ ಕೌಂಟ್‌ಡೌನ್‌; ನಾಡದೇವಿಗೆ ಪೂಜಾ ಕೈಂಕರ್ಯ ಆರಂಭ

ಮೈಸೂರು: ರಾಜ್ಯದ ಮಹಾ ಸಾಂಸ್ಕೃತಿಕ ಹಬ್ಬ ಕೋವಿಡ್‌ ಕಾರಣದಿಂದ ಈ ಬಾರಿಯೂ ಸರಳವಾಗಿ ಆಚರಣೆಯಾಗುತ್ತಿದೆ. ಇಂದಿನಿಂದ ಮೈಸೂರಿನಲ್ಲಿ ದಸರಾ ಆರಂಭವಾಗಿದ್ದು, ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈ ಬಾರಿಯ ದಸರಾ ಉದ್ಘಾಟಕರಾದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಮೈಸೂರಿಗೆ ಈಗಾಗಲೇ ಆಗಮಿಸಿದ್ದು, ಇಂದು(ಗುರುವಾರ) ಮೈಸೂರು ದಸರಾಗೆ ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 7.45ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ದಸರೆ ಉದ್ಘಾಟಿಸಲಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಳಗ್ಗೆ 8.15 ರಿಂದ 8.45ರ ವೇಳೆ 2021ನೇ ಸಾಲಿನ ನಾಡಹಬ್ಬ ದಸರಾಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಇನ್ನು ಸಂಜೆ 6ಕ್ಕೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಇದೇ ವೇಳೆ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನವೂ ನಡೆಯಲಿದೆ. ರಂಗಾಯಣದಲ್ಲಿ ದಸರಾ ರಂಗೋತ್ಸವನಗರದ ರಂಗಾಯಣದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ 'ದಸರಾ ರಂಗೋತ್ಸವ' ಕಾರ್ಯಕ್ರಮ ನಡೆಯಲಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಅ.7 ರಂದು ಸಂಜೆ 6ಕ್ಕೆ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್‌ ಜವಳಿ ಪಾಲ್ಗೊಳ್ಳುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಹಿಸಲಿದ್ದು, ಜಂಟಿ ನಿರ್ದೇಶಕ ವಿ.ಎಸ್‌.ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿರುವರು. ಈ ಸಂದರ್ಭ ರಂಗಕರ್ಮಿ ರಾಮೇಶ್ವರಿ ವರ್ಮಾ ಅವರಿಗೆ 'ದಸರಾ ರಂಗ ಗೌರವ' ಪುರಸ್ಕಾರ ಪ್ರದಾನ ಮಾಡಲಾಗುವುದು. ಸಂಜೆ 6.30ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ವಿದುರಾಶ್ವತ್ಥದ ವೀರಗಾಥೆ, 'ಹತ್ಯಾಕಾಂಡ' ನಾಟಕ ಪ್ರದರ್ಶನಗೊಳ್ಳಲಿದೆ. ಡಾ. ಬೇಲೂರು ರಘುನಂದನ್‌ ಅವರ ರಚನೆಯ ಈ ರಂಗರೂಪಕ್ಕೆ ಕೃಷ್ಣಮೂರ್ತಿ ಕವತ್ತಾರೆ ಸಂಗೀತ ನೀಡಿ ನಿರ್ದೇಶನ ಮಾಡಿದ್ದಾರೆ. ಶಿವಮೊಗ್ಗ ರಂಗಾಯಣ ತಂಡ ನಾಟಕ ಪ್ರದರ್ಶನ ನೀಡಲಿದೆ. 10ರಂದು ಸೂರ್ಯೋದಯದಿಂದ; ಸೂರ್ಯಾಸ್ತದವರೆಗೆ ಕಾರ್ಯಕ್ರಮದಸರಾ-2021ರ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಅ. 10 ರಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 6ಕ್ಕೆ ಚಂದ್ರು ಅವರಿಂದ ಅಷ್ಟೋತ್ತರ ಶತ ನಾದಸ್ವರ ವಾದನ (108 ಮಂದಿ) ಉದಯರಾಗ, ಬೆಳಗ್ಗೆ 6.45ಕ್ಕೆ ಮೈಸೂರಿನ ರಾಘವೇಂದ್ರ ರಾಗಾಲಯ ಸಂಗೀತ ಬಳಗದಿಂದ ಜಯ ಚಾಮರಾಜೇಂದ್ರ ಒಡೆಯರ್‌ ಕೃತಿಗಳ ಗಾಯನ, ಬೆಳಗ್ಗೆ 7.30ಕ್ಕೆ ಮೈಸೂರಿನ (ಕೃಷ್ಣಪ್ರಸಾದ್‌) ಬಾಲ ಪ್ರತಿಭೋತ್ಸವದಿಂದ ವಿಶೇಷ ಕಾರ್ಯಕ್ರಮ, ಬೆಳಗ್ಗೆ 8.15ಕ್ಕೆ ಬಾಗಲಕೋಟೆ ಶ್ರೇಯಾ ಪ್ರಹ್ಲಾದ್‌ ಕುಲಕರ್ಣಿ ಅವರಿಂದ ಭರತನಾಟ್ಯ, ಬೆಳಗ್ಗೆ 9ಕ್ಕೆ ಶಿವಮೊಗ್ಗದ ದೀಪಿಕಾ ಶ್ರೀಕಾಂತ್‌ ಮತ್ತು ತಂಡದಿಂದ ಸುಗಮ ಸಂಗೀತ, ಬೆಳಗ್ಗೆ 9.45ಕ್ಕೆ ಉಡುಪಿಯ ಪೂರ್ಣಿಮಾ ಸುರೇಶ್‌ ಮತ್ತು ತಂಡದಿಂದ ಏಕ ವ್ಯಕ್ತಿರಂಗ ಪ್ರಯೋಗ, ಬೆಳಗ್ಗೆ 10.30ಕ್ಕೆ ಬೆಂಗಳೂರು ಚಿನ್ಮಯ ಆತ್ರೇಯಾಸ್‌ ಅವರಿಂದ ಭಾವಗೀತೆ, ಬೆಳಗ್ಗೆ 11.15ಕ್ಕೆ ಬೆಂಗಳೂರು ನಟನಂ ಚಾರಿಟಬಲ್‌ ಟ್ರಸ್ಟ್‌ನಿಂದ ಭರತನಾಟ್ಯ, ಮಧ್ಯಾಹ್ನ 12ಕ್ಕೆ ಬೆಂಗಳೂರು ದರ್ಶಿನಿ ಮಂಜುನಾಥ್‌ ಮತ್ತು ತಂಡದಿಂದ ನೃತ್ಯರೂಪಕ ನಡೆಯಲಿದೆ. ಮಧ್ಯಾಹ್ನ 12.45ಕ್ಕೆ ಬೆಂಗಳೂರು ಸಮಯ ಫೌಂಡೇಷನ್‌ ವತಿಯಿಂದ ಭಕ್ತಿಗೀತೆಗಳು, ಮಧ್ಯಾಹ್ನ 1.30ಕ್ಕೆ ಮೈಸೂರು ನಾದನರ್ತನಂ ಸಂಗೀತ ಮತ್ತು ನೃತ್ಯ ಶಾಲೆ ವತಿಯಿಂದ ಭಾವ ಸಂಗಮ, ಮಧ್ಯಾಹ್ನ 2.15ಕ್ಕೆ ಮೈಸೂರು ಸಂಗೀತ ಮತ್ತು ತಂಡದಿಂದ ರಂಗಗೀತೆ, ಮಧ್ಯಾಹ್ನ 3ಕ್ಕೆ ಮೈಸೂರು ಶ್ರೀನಾಥ್‌ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 3.45ಕ್ಕೆ ಮೈಸೂರು ಜಹೀದುಲ್ಲಾ ಖಾನ್‌ ಮತ್ತು ತಂಡದಿಂದ ಸೂಫಿ ಗಾಯನ, ಸಂಜೆ 4.30 ಕ್ಕೆ ಬೆಂಗಳೂರು ಸವಿಗಾನ ಲಹರಿ ಸುಗಮ ಸಂಗೀತ ತಂಡದಿಂದ ನಾಡಹಬ್ಬದ ಗೀತೆಗಳ ಕಾರ್ಯಕ್ರಮ ನಡೆಯಲಿದೆ.


from India & World News in Kannada | VK Polls https://ift.tt/3FqzicU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...