ಬೆಂಗಳೂರು: ನಟ ಅವರ ಅಭಿಮಾನಿಗಳು, ಒಡನಾಡಿಗಳು, ಅವರನ್ನು ಬಲ್ಲವರು ಅತೀವ ದುಃಖದಲ್ಲಿದ್ದಾರೆ. ಪ್ರಜ್ವಲಿಸುತ್ತಿದ್ದ ತಾರೆಯೊಂದು ಇದ್ದಕ್ಕಿದ್ದಂತೆ ಮರೆಯಾಗಿದೆ. ಅದು ನೀಡಿರುವ ಆಘಾತ ಸಣ್ಣದಲ್ಲ. ಪುನೀತ್ ಅವರ ಹಠಾತ್ ಅಗಲುವಿಕೆಗೆ ಪ್ಯಾರಾ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಬೆಳ್ಳಿ ಪದಲ ವಿಜೇತ, ನೋಯ್ಡಾದಲ್ಲಿ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಕಂಬನಿ ಮಿಡಿದಿದ್ದಾರೆ. ತಮ್ಮ ಹಾಗೂ ಪುನೀತ್ ರಾಜ್ಕುಮಾರ್ ಅವರ ನಡುವೆ 27 ದಿನಗಳ ಹಿಂದೆ ನಡೆದ ಭೇಟಿಯನ್ನು ಅವರು ಸ್ಮರಿಸಿದ್ದಾರೆ. ಸುಹಾಸ್ ಯತಿರಾಜ್ ಅವರು ಉತ್ತರ ಪ್ರದೇಶ ಕೇಡರ್ನ 2007ನೇ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಇದೇ ವರ್ಷ ಜಪಾನ್ನ ಟೋಕಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಗೌತಮ ಬುದ್ಧ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಯತಿರಾಜ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದರು. ಈ ನೆನಪನ್ನು ಹಂಚಿಕೊಂಡಿರುವ ಸುಹಾಸ್ ಯತಿರಾಜ್, ಪುನೀತ್ ರಾಜ್ಕುಮಾರ್ ಅವರಿಗೆ ಭಾವುಕ ಪತ್ರ ಬರೆದಿದ್ದಾರೆ. ಪ್ರಿಯ ಅಪ್ಪು, ಜೀವನದ ಪ್ರಯಾಣದಲ್ಲಿ ನನ್ನ ಪ್ರೀತಿಯ ಗೆಳೆಯನಿಗೆ ಇನ್ನು ಬೇಗ ವಿದಾಯ ಹೇಳುತ್ತೇನೆ ಎಂದು ಕನಸಿನಲ್ಲೂ ನನೆದಿರಲಿಲ್ಲ. ಅಣ್ಣಾವ್ರು ಹೇಳಿದ ಹಾಗೆ "ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿದ, ಕಂಬನಿ ಧಾರೆ ಹರಿಸಲು ನನ್ನ ಜೀವ ಉಳಿಸಿದ" ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ, ಕರುನಾಡ ಜನರ ಕಣ್ಮಣಿಯಾಗಿ, ತಂದೆಗೆ ತಕ್ಕ ಮಗನಾಗಿ, ಕರುಣಾಮಯಿಯಾಗಿ, ಸಹೃದಯಿಯಾಗಿ ಸರ್ವೋತ್ತಮನಾದ ನಿನಗೆ ವಿಧಿಯು ಅಂತಿಮ ಕಾಲಕ್ಕೆ ಕರೆದೊಯ್ದಿದೆ. ಇಪ್ಪತ್ತೇಳು ದಿನಗಳ ಹಿಂದೆ 2ನೇ ಅಕ್ಟೋಬರ್ರಂದು ನಿಮ್ಮ ಜೊತೆ ಮೂರು ಗಂಟೆಗೂ ಹೆಚ್ಚು ಸಮಯ ಕಳೆಯುವ ಸೌಭಾಗ್ಯ ಕೊಟ್ಟಿರಿ. ಪ್ರೀತಿ ಮತ್ತು ಸನ್ಮಾನ ಎರಡನ್ನು ಕೊಟ್ಟಿರಿ. ಜೊತೆಗೆ ದೆಹಲಿಗೆ ಬಂದಾಗ ಸಿಗುವ ಎಂದು ಮಾತು ಕೊಟ್ಟಿರಿ. ಆ ಮಾತೆ ನೆನಪಾಗಿದೆ. ಸ್ವಯಂ ಸಾಧಕರಾದ ನೀವು ಪ್ಯಾರ ಒಲಿಂಪಿಕ್ಸ್ ಸಾಧನೆಯ ಬಗ್ಗೆ ಆಸಕ್ತಿಯಿಂದ ವಿಚಾರಿಸಿದಿರಿ. ಇಷ್ಟು ಸಾಧನೆ ಮಾಡಿನೂ ಹೇಗೆ ಅನ್ನು ಸರಳವಾಗಿ ಇದ್ದೀರಾ ಎಂದು ನಾನು ನಿಮ್ಮನ್ನು ಕೇಳಿದೆ ನೀವು ನಕ್ಕು ಬಿಟ್ರಿ. ಆ ನಗುವೇ ನೆನಪಾಗಿದೆ. ಕರುನಾಡ ಸಿರಿನುಡಿಯ ನಂದಾದೀಪವಾಗಿ ನೀ ಎಂದೆಂದೂ ಬಾಳಲಿ ಎಂದು ನನ್ನಂತ ಕೋಟಿ ಕನ್ನಡಿಗರು ಪ್ರಾರ್ಥಿಸಿದ್ದಾರೆ. ಕೋಟಿ ಹೃದಯ ಗೆದ ನಿನ್ನ ಹೃದಯಕ್ಕೆ, ಎಲ್ಲಾ ಹೃದಯಗಳ ಶಕ್ತಿ ಕೊಟ್ಟು ಆ ದೇವರು ಕಾಪಾಡಲಿ ಎಂದು ಪ್ರಾರ್ಥಿಸಿದೆ. ಆ ಪ್ರಾರ್ಥನೆಯ ನೆನಪಾಗಿದೆ. ನಿನ್ನ ನುಡಿಯನ್ನು, ನಿನ್ನ ನಗುವನ್ನು ಹೃದಯದ ಒಂದು ಮೂಲೆಯಲ್ಲಿ ಸದಾ ಬಚ್ಚಿಟ್ಟುಕೊಂಡು ಕಾಪಾಡುವೆ. ನಿನ್ನ ಒಲವನ್ನು ನಿನ್ನ ಗುಣವನ್ನು ಪ್ರತಿದಿನವೂ ಮೆರೆದಾಡುವೆ ನೀ ಹೋಗಿ ಬಾ ಗೆಳೆಯಾ ಎಂದು ಸುಹಾಸ್ ಯತಿರಾಜ್ ಅವರು ತಮ್ಮ ಹಾಗೂ ಪುನೀತ್ ರಾಜ್ಕುಮಾರ್ ಭೇಟಿಯ ಕ್ಷಣವನ್ನು ಸ್ಮರಿಸಿಕೊಂಡು ಭಾವುಕರಾಗಿ ಬರೆದಿದ್ದಾರೆ.
from India & World News in Kannada | VK Polls https://ift.tt/3bmThvl