ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರಬಾಧೆ! ಆಸ್ಪತ್ರೆಗಳಲ್ಲಿ ಕ್ಯೂ, ಪಾಲಕರಿಗೆ ಆತಂಕ!

ನಾಗರಾಜ್‌ ನವೀಮನೆ ಜಿಲ್ಲೆಯಲ್ಲಿ ಕೊರೊನಾ ಭೀತಿ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದ್ದರೂ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ. ಜಿಲ್ಲೆಯಲ್ಲಿ ಬದಲಾದ ವಾತಾವರಣ ಹಾಗೂ ಅಕಾಲಿಕ ಮಳೆಯಿಂದಾಗಿ ಇನ್‌ಫ್ಲ್ಯೂಯೆಂಜಾ ಎ ವೈರಸ್‌ ಬಾಧಿಸುತ್ತಿದ್ದು, ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದರಿಂದ 20 ವರ್ಷದೊಳಗಿನ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳೇ ಹೆಚ್ಚು ಸೋಂಕಿಗೆ ಒಳಗಾಗುತ್ತಿರುವುದು ಭೀತಿ ಮೂಡಿಸಿದೆ. ಅಲ್ಲದೆ, ಮಹಿಳೆಯರು ಹಾಗೂ ಹಿರಿಯರು ಕೆಮ್ಮು, ಕಫ, , ಮೈಕೈ ನೋವಿನಿಂದ ಬಳಲುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು, ಕಫದ ಲಕ್ಷಣಗಳು ಉಲ್ಬಣಗೊಂಡು ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ 131 ಜನರಿಗೆ ಡೆಂಗೆ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 26 ಪಾಸಿಟಿವ್‌ ಕೇಸ್‌ ಬಂದಿತ್ತು. ಅಕ್ಟೋಬರ್‌ನಲ್ಲಿ 154 ಪರೀಕ್ಷೆ ಮಾಡಲಾಗಿದ್ದು, 36 ಪಾಸಿಟಿವ್‌ ಬಂದಿದೆ. ಜನವರಿಯಿಂದ ಇಲ್ಲಿಯವರೆಗೆ 79 ಪಾಸಿಟಿವ್‌ ಕೇಸು ದಾಖಲಾಗಿದೆ. ಒಟ್ಟು 407 ಪರೀಕ್ಷೆ ನಡೆಸಲಾಗಿದೆ. ಮಲೇರಿಯಾ ಶೂನ್ಯವಿದ್ದು, ಚಿಕನ್‌ಗುನ್ಯಾ ಅಕ್ಟೋಬರ್‌ನಲ್ಲಿ 10, ಸೆಪ್ಟೆಂಬರ್‌ನಲ್ಲಿ9 ಪ್ರಕರಣ ಕಂಡು ಬಂದಿದೆ. 407 ಪರೀಕ್ಷೆ ನಡೆಸಲಾಗಿದೆ. ಕೊರೊನಾ ಸೋಂಕು ಇಲ್ಲ: ''ಮಳೆಗಾಲ, ಚಳಿಗಾಲದಲ್ಲಿ ಮಕ್ಕಳು ಸಹಜವಾಗಿ ಸಾಮಾನ್ಯ ರೋಗಗಳಿಂದ ಬಳಲುತ್ತಾರೆ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದು ಕೊರೊನಾ ಲಕ್ಷಣ ಅಲ್ಲ. ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳಲ್ಲಿಕೆಮ್ಮು, ಜ್ವರ ಸಾಮಾನ್ಯವಾಗಿದೆ. ಬದಲಾದ ಹವಾಮಾನ, ಅನಿರೀಕ್ಷಿತ ಮಳೆ ಕೆಮ್ಮು, ನೆಗಡಿ, ಕಫ ಹಾಗೂ ಉಸಿರಾಟದ ಸಮಸ್ಯೆ ಕಂಡ ಬರಲು ಮುಖ್ಯ ಕಾರಣವಾಗಿದೆ. ಹೀಗೆ ಕೊರೊನಾ ಲಕ್ಷಣಗಳಿರುವ ಮಕ್ಕಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಯಾರೊಬ್ಬರಲ್ಲಿಯೂ ಕೊರೊನಾ ಪಾಸಿಟಿವ್‌ ದೃಢಪಟ್ಟಿಲ್ಲ,'' ಎನ್ನುತ್ತಾರೆ ವೈದ್ಯರು. ಆಸ್ಪತ್ರೆಗಳಲ್ಲಿ ರಶ್‌: ನಗರದಲ್ಲಿ ಕ್ಲಿನಿಕ್‌ಗಳು, ಖಾಸಗಿ ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ಬಹುತೇಕ ಮಕ್ಕಳು ವೈರಲ್‌ ಫೀವರ್‌ನಿಂದ ಬಳಲುತ್ತಿದ್ದಾರೆ. ಕೆಲ ಮಕ್ಕಳು ಬಹು ಬೇಗ ಚೇತರಿಸಿಕೊಳ್ಳುತ್ತಿದ್ದರೆ, ಕೆಲವರು ನಿಧಾನಕ್ಕೆ ಗುಣವಾಗುತ್ತಿದ್ದಾರೆ. ಒಂದು ವರ್ಷದಿಂದ ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಹೆಚ್ಚು ಬಾಧಿಸುತ್ತಿದ್ದು, ಟಾನಿಕ್‌ಗೆ ಗುಣಮುಖವಾಗುತ್ತಿಲ್ಲ. ನೆಬ್ಯೂಲೈಜರ್‌ ಚಿಕಿತ್ಸೆ ಹೆಚ್ಚು ಬಳಕೆಯಲ್ಲಿದೆ. ಪೋಷಕರು ಆತಂಕಕ್ಕೆ ಒಳಗಾಗದೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಬಿಸಿ ನೀರು ಕುಡಿಯುವುದು ಸಹಿತ ರೋಗ ನಿಯಂತ್ರಣಕ್ಕೆ ಕೈಗೊಳ್ಳಲಾಗುವ ನಿಯಮಗಳನ್ನೇ ಪಾಲನೆ ಮಾಡಬೇಕು ಎಂಬುದು ವೈದ್ಯರ ಅಭಿಮತ. ಸಾರ್ವಜನಿಕರು ಏನು ಮಾಡಬೇಕು?
  • 1. ನೆಗಡಿ, ಕೆಮ್ಮು ಇರುವವರಿಂದ ದೂರ ಇರಿ. ಕಡ್ಡಾಯವಾಗಿ ಮಾಸ್ಕ್‌ ಧರಿಸಿ.
  • 2. ಕಣ್ಣು, ಬಾಯಿ, ಮೂಗು ಮುಟ್ಟುವ ಮೊದಲು ಕೈ ತೊಳೆದುಕೊಳ್ಳಿ.
  • 3. ಫಿಲ್ಟರ್‌ ನೀರು ಬೇಡ. ನೀರನ್ನು ಕುದಿಸಿ ಆರಿಸಿ ಕುಡಿಯಿರಿ.
  • 4. ಮಳೆ, ಚಳಿ ಇರುವುದರಿಂದ ಮೈಕೈ ಮುಚ್ಚುವ ಬೆಚ್ಚನೆ ಉಡುಪು ಧರಿಸಿ.
  • 5. ಚಿಕಿತ್ಸೆ ಪಡೆಯದೆ ಸುಮ್ಮನೆ ಮೆಡಿಕಲ್‌ನಲ್ಲಿ ಮಾತ್ರೆ ತೆಗೆದುಕೊಳ್ಳಬೇಡಿ.
  • 6. ಸೊಳ್ಳೆ ಉತ್ಪತ್ತಿಗೆ ಅವಕಾಶ ಕೊಡಬೇಡಿ. ನೀರು ನಿಲ್ಲುವ ಜಾಗ ಶುಚಿಯಾಗಿರಲಿ.
"ಮೂರು ದಿನವಾದರೂ ಜ್ವರ ವಾಸಿಯಾಗದೆ ಇದ್ದರೆ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಅರ್ಹರಲ್ಲದ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ ಕೊಡಿಸಬಾರದು. ಸಾಮಾನ್ಯ ಜ್ವರ, ಕೆಮ್ಮು ಎಂಬ ನಿರ್ಲಕ್ಷ್ಯ ಬೇಡ. ದೇಹವನ್ನು ಹಾಳು ಮಾಡಿಕೊಂಡು ಕೊನೆ ಕ್ಷಣದಲ್ಲಿ ಬರುವುದಕ್ಕಿಂತ ಸೂಕ್ತ ವೈದ್ಯರಿಗೆ ಬೇಗನೆ ತೋರಿಸಿ ಚಿಕಿತ್ಸೆ ಪಡೆದರೆ ಕಾಯಿಲೆಯಿಂದ ಗುಣಮುಖರಾಗಬಹುದು." - ಡಾ.ಎಸ್‌.ಚಿದಂಬರ್‌, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಇದು ಹೊಸ ಸಾಂಕ್ರಾಮಿಕ ಕಾಯಿಲೆಯಂತೆ ಕಾಣುತ್ತಿದೆ. ಈ ವೈರಸ್‌ ವರ್ಷದಿಂದ ವರ್ಷಕ್ಕೆ ರೂಪಾಂತರಗೊಳ್ಳುತ್ತಿದ್ದು, ಅದರ ಪರಿಣಾಮವೂ ಬದಲಾಗುತ್ತಿರುತ್ತದೆ. ಈವರೆಗೆ ಕೆಮ್ಮು, ಜ್ವರ ಬಂದು ಹೋಗುತ್ತಿತ್ತು. ಆದರೆ, ಈ ಬಾರಿ ಮಕ್ಕಳಿಗೆ ಟಾನಿಕ್‌ ಕೊಟ್ಟರೂ ಕೆಮ್ಮು ಹೋಗುತ್ತಿಲ್ಲ. ನೆಬ್ಯೂಲೈಜರ್‌ ಚಿಕಿತ್ಸೆ ಕೊಡಬೇಕಿದೆ. ರೋಗ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಕೊಡಿಸಬೇಕಿದೆ. - ಡಾ.ಪ್ರಶಾಂತ್‌ ಎಂ., ಇಂಟೆನ್ಸಿವಿಸ್ಟ್‌, ಡಿಆರ್‌ಎಂ ಆಸ್ಪತ್ರೆ


from India & World News in Kannada | VK Polls https://ift.tt/3pKwy4I

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...