ಚೀನಾದ ಕ್ಷಿಪಣಿಯಿಂದ ರಷ್ಯಾದ ಸ್ಪುಟ್ನಿಕ್‌ ನೀಡಿದ್ದ ಆಘಾತದ ಅನುಭವ:ಯುಎಸ್ ಜನರಲ್!

ವಾಷಿಂಗ್ಟನ್: ಭೂಮಿಯನ್ನು ಒಂದು ಸುತ್ತು ಸುತ್ತಬಲ್ಲ ಚೀನಾದ ಹೈಪರ್‌ಸಾನಿಕ್ ಪರಮಾಣು ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು, ಪೆಂಟಗನ್‌ನ ಹಿರಿಯ ಸೇನಾಧಿಕಾರಿಯೊಬ್ಬರು ರಷ್ಯಾದ ಸ್ಪುಟ್ನಿಕ್ ಉಪಗ್ರಹದ ಉಡಾವಣೆಯ ಕ್ಷಣಗಳಿಗೆ ಹೋಲಿಕೆ ಮಾಡಿದ್ದಾರೆ. 1957ರಲ್ಲಿ ರಷ್ಯಾ ಸ್ಪುಟ್ನಿಕ್ ಹೆಸರಿನ ಜಗತ್ತಿನ ಮೊಟ್ಟ ಮೊದಲ ಮಾನವ ನಿರ್ಮಿತ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ಇದು ಜಗತ್ತಿನ ಎರಡು ಮಹಾಶಕ್ತಿಗಳ ನಡುವನ ಬಾಹ್ಯಾಕಾಶ ಸ್ಪರ್ಧೆಗೆ ಮುನ್ನುಡಿ ಬರೆದಿತ್ತು. ಸ್ಪುಟ್ನಿಕ್ ಕಕ್ಷೆಗೆ ಸೇರಿದಾಗ ನಮಗೆ ಆಗಿದ್ದ ಆಘಾತ ಮತ್ತು ಅಚ್ಚರಿಯ ಅನುಭವವೇ, ಚೀನಾದ ಹೈಪರ್‌ಸಾನಿಕ್ ಪರಮಾಣು ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಕೂಡ ನೀಡಿದೆ ಎಂದು ಪೆಂಟಗನ್‌ನ ಹೇಳಿದ್ದಾರೆ. ಆಗ ನಮಗೆ ಆಗಿದ್ದ ಆಘಾತ ಮತ್ತು ಅಚ್ಚರಿಯ ಅನುಭವ ಈಗಲೂ ಆಗುತ್ತಿದೆ. ಅತ್ಯಂತ ರಹಸ್ಯವಾಗಿ ಹೈಪರ್‌ಸಾನಿಕ್ ಪರಮಾಣು ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯನ್ನ ಯಶಸ್ವಿಯಾಗಿ ಪೂರೈಸಿದೆ. ಇದು ಖಂಡಿತವಾಗಿ ಅಮೆರಿಕಕ್ಕೆ ಆತಂಕಕಾರಿ ಸಂಗತಿ ಎಂದು ಜನರಲ್ ಮಿಲ್ಲೇ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು, ಚೀನಾ ಹೈಪರ್‌ಸಾನಿಕ್ ಪರಮಾಣು ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಕುರಿತು, ಕಳೆದ ಅಕ್ಟೋಬರ್ 16ರಂದು ಫೈನಾನ್ಶಿಯಲ್ ಟೈಮ್ಸ್‌ನಲ್ಲಿ ಪ್ರಕಟವಾಗಿದ್ದ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೆರಿಕ ನಿರಾಕರಿಸಿತ್ತು. ಇದೀಗ ಜನರಲ್ ಮಿಲ್ಲೇ ಈ ಪರೀಕ್ಷೆ ಅಮೆರಿಕವನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ. ಚೀನಾ ಲೋ ಅರ್ಥ್ ಆರ್ಬಿಟ್‌ನಲ್ಲಿ ಶಬ್ಧಕ್ಕಿಂತ ಐದು ಪಟ್ಟು ವೇಗವಾಗಿ ಚಲಿಸಬಲ್ಲ ಹೈಪರ್‌ಸಾನಿಕ್ ಪರಮಾಣು ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಫೈನಾನ್ಶಿಯಲ್ ಟೈಮ್ಸ್‌ ವರದಿ ಪ್ರಕಟಿಸಿತ್ತು. ಆದರೆ ಈ ವರದಿಯನ್ನು ತಳ್ಳಿ ಹಾಕಿದ್ದ ಚೀನಾ, ಅದೊಂದು ಬಾಹ್ಯಾಕಾಶ ನೌಕೆಯ ಉಡಾವಣಾ ಪರೀಕ್ಷೆ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಜನರಲ್ ಮಿಲ್ಲೇ ಈ ಪರೀಕ್ಷೆಯನ್ನು ರಷ್ಯದ ಸ್ಪುಟ್ನಿಕ್ ಉಪಗ್ರಹದ ಯಶಸ್ವಿ ಉಡಾವಣೆಗೆ ಹೋಲಿಸಿದ್ದು, ಚೀನಾ ತನ್ನ ಪರಮಾಣು ಸಾಮರ್ಥ್ಯವನ್ನು ವೃದ್ಧಿಸಿಕೊಂಡಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3pZzlXZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...