ಹಣ ಮಾಡುವ ದಂಧೆಯಲ್ಲಿ ಬಿಜೆಪಿ ನಿರತ, ಕಾಂಗ್ರೆಸ್ ಸತ್ತು ಹೋಗಿದೆ: ಎಚ್‌. ಡಿ. ರೇವಣ್ಣ ಆರೋಪ

: ಸರಕಾರ ಹಣ ಮಾಡುವ ದಂಧೆಯಲ್ಲಿ ನಿರತವಾಗಿದೆ, ರಾಜ್ಯದಲ್ಲಿ ಕಾಂಗ್ರೆಸ್‌ ಸತ್ತು ಹೋಗಿದೆ. ಬುಡುಬುಡುಕೆ ಹೇಳಲು ಶಾಸಕ ಜಮೀರ್‌ ಅಹಮ್ಮದ್‌ ಅಂತವರನ್ನು ಇಟ್ಟುಕೊಂಡಿದ್ದಾರೆ ಎಂದು ಶಾಸಕ ಎಚ್‌. ಡಿ. ಆಕ್ರೋಶ ವ್ಯಕ್ತಪಡಿಸಿದರು. 'ಬುಡಬುಡುಕೆ ಅಂಥವರನ್ನು ದೂರವಿಡಲಿ ಎಂದು ಸಲಹೆ ನೀಡುತ್ತೇನೆ. ಕುಮಾರಸ್ವಾಮಿ ಸರಕಾರ ತೆಗೆದಿದ್ದು ಕಾಂಗ್ರೆಸ್‌. ಅಧಿಕಾರ ಬಂದರೆ ರೈತರ ಪರ ಕೆಲಸ ಮಾಡುತ್ತೇವೆ. ಇಲ್ಲವಾದರೆ ವಿರೋಧ ಪಕ್ಷದಲ್ಲಿರುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಮತ್ತು ಬಿಜೆಪಿ ಜತೆ ಕೈ ಜೋಡಿಸುವುದಿಲ್ಲ. ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಕತೆ ಮುಗಿದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಕತೆ ಕೊನೆಯಾಗುತ್ತದೆ' ಎಂದು ರೇವಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. 'ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರ ಮತ್ತು ಚಪ್ಪೆ ರೋಗದಿಂದ ಜಾನುವಾರುಗಳು ಸಾಯುತ್ತಿದ್ದರೂ ಪಶು ಸಂಗೋಪನೆ ಇಲಾಖೆ ಸಚಿವ ಗಮನ ಹರಿಸಿಲ್ಲ. ಎರಡು ವರ್ಷದಿಂದ ಜಿಲ್ಲೆಯ ಜಾನುವಾರುಗಳಿಗೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡಿಲ್ಲ. ಇದರಲ್ಲಿಯೂ ಹಣ ಹೊಡೆಯುಲು ಸಂಚು ಮಾಡಿದರೆ ಬಿಜೆಪಿ ಅವರಿಗೆ ಗೋ ಮಾತೆಯ ಶಾಪ ತಟ್ಟದೇ ಇರುವುದಿಲ್ಲ. ಕಾಣೆಯಾಗಿರುವ ಸಚಿವರನ್ನು ಹುಡುಕಿ ಕೊಡಿ ಎಂದು ಡಿ.ಜಿ.ಪಿಗೆ ದೂರು ನೀಡುವೆ' ಎಂದು ಎಚ್‌. ಡಿ. ರೇವಣ್ಣ ಹೇಳಿದರು. 'ಸರಕಾರ ಇದೆಯೋ ಅಥವಾ ಇಲ್ಲವೋ ತಿಳಿದಿಲ್ಲ. ಚುನಾವಣೆ ನಡೆಸುವುದನ್ನು ಬಿಟ್ಟು ರೈತರ ಕಡೆ ಗಮನ ಕೊಡಿ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಒಟ್ಟು 6.56 ಲಕ್ಷ ಜಾನುವಾರುಗಳಿವೆ. ಈ ಪೈಕಿ ಜಿಲ್ಲಾ ಪಂಚಾಯಿತಿ ಮತ್ತು ಕೆಎಂಎಫ್‌ ವತಿಯಿಂದ 1.28 ಲಕ್ಷ ಜಾನುವಾರುಗಳಿಗೆ ಮಾತ್ರ ಲಸಿಕೆ ನೀಡಲಾಗಿದೆ. 5.77 ಲಕ್ಷ ಜಾನುವಾರುಗಳಿಗೆ ಇನ್ನೂ ಲಸಿಕೆ ನೀಡಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಲಸಿಕೆಗೆ ಒಂದು ಬಿಡಿಗಾಸೂ ನೀಡಿಲ್ಲ. ಚಪ್ಪೆ ರೋಗ ಮತ್ತು ಕಾಲು ಬಾಯಿ ಜ್ವರದಿಂದ ಹಸುಗಳು ಸಾಯುತ್ತಿವೆ. ಸಾಂಕ್ರಾಮಿಕ ರೋಗವಾಗಿರುವುದರಿಂದ ಇತರೆ ಜಾನುವಾರುಗಳಿಗೂ ಹರಡುವ ಭೀತಿ ಇದೆ. ಇಂತಹ ಸ್ಥಿತಿ ಇದ್ದರೂ ಪಶು ಸಂಗೋಪನೆ ಇಲಾಖೆ ಸಚಿವ ಗಮನ ಹರಿಸಿಲ್ಲ ಎಂದು ರೇವಣ್ಣ ಆರೋಪಿಸಿದರು. ರಾಜ್ಯದಲ್ಲಿರುವುದು ಮಧ್ಯವರ್ತಿಗಳ ಪರವಾದ ಸರಕಾರ. ರಾಜ್ಯದಲ್ಲಿ ಈಗ ಜೋಳದ ಸುಗ್ಗಿ. ಮಧ್ಯವರ್ತಿಗಳು ರೈತರಿಂದ ಕ್ವಿಂಟಾಲ್‌ಗೆ 1,200 ರೂ.ಗೆ ಖರೀದಿಸಿ ಕೆ.ಎಂ.ಎಫ್‌ ಗೆ 1,700ಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸರಕಾರ ಈ ಬಗ್ಗೆ ಗಮನ ಹರಿಸಿ ಕೆಎಂಎಫ್‌ ಅವರು ನೇರವಾಗಿ ರೈತರಿಂದಲೇ ಬೆಂಬಲ ಬೆಲೆಗೆ ಜೋಳ ಖರೀದಿಸಲು ಆದೇಶಿಸಬೇಕು ಎಂದು ಆಗ್ರಹಿಸಿದರು. ವರ್ಷದಲ್ಲಿ ಬಿಜೆಪಿ ಸರಕಾರವನ್ನು ರಾಜ್ಯದ ಜನರು ಮನೆಗೆ ಕಳುಹಿಸಲಿದ್ದಾರೆ. ಕಾಲು ಬಾಯಿ ಜ್ವರದ ಲಸಿಕೆ ಖರೀದಿಗೂ ಇವರ ಬಳಿ ಹಣ ಇಲ್ಲ. ಪಶು ಸಂಗೋಪನೆ ಇಲಾಖೆಯ ಆಸ್ಪತ್ರೆ ಬಾಗಿಲನ್ನು ತೆಗೆಯುವವರೇ ಇಲ್ಲ. ಬಹುತೇಕ ಕಡೆ ಪಶು ವೈದ್ಯರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/2Y2Kz2g

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...