
ಬೆಂಗಳೂರು: ಟೂರ್ನಿಯಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ಸೂಪರ್ 12 ಹಂತದ ಎರಡನೇ ಗುಂಪಿನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಅಂಡ್ ಕಂಪನಿ ನಂಬಲು ಸಾಧ್ಯವಾಗದ ರೀತಿಯಲ್ಲಿ 10 ವಿಕೆಟ್‌ಗಳ ಹೀನಾಯ ಸೋಲುಂಡಿತ್ತು. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಎಡಗೈ ವೇಗದ ಬೌಲರ್ , ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯ ಬೇಕಾದರೆ ಮುಂದಿನ ನಾಲ್ಕು ಪಂದ್ಯಗಳು ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಕೆಚ್ಚೆದೆಯ ಹೋರಾಟಕ್ಕೆ ಹೆಸರುವಾಸಿಯಾದ ತಂಡದ ಎದುರು ಟೀಮ್ ಇಂಡಿಯಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಜಹೀರ್ ವಾರ್ನಿಂಗ್ ಕೊಟ್ಟಿದ್ದಾರೆ. ಭಾರತ ತಂಡ ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ. ಅಂದಹಾಗೆ ಕಿವೀಸ್ ಪಡೆ ತನ್ನ ಮೊದಲ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟದ ನಡುವೆ ಪಾಕಿಸ್ತಾನ ಎದುರು 5 ವಿಕೆಟ್‌ಗಳ ಸೋಲುಂಡಿದ್ದು, ಭಾರತ ತಂಡದಂತೆ ಕಮ್‌ಬ್ಯಾಕ್ ಸಲುವಾಗಿ ಹಾತೊರೆಯುತ್ತಿದೆ. ವಿಶ್ವದ ಯಾವುದೇ ತಂಡಕ್ಕೆ ಸೋಲುಣಿಸಬಲ್ಲ ಅತ್ಯಂತ ಅಪಾಯಕಾರಿ ತಂಡ ನ್ಯೂಜಿಲೆಂಡ್ ಆಗಿದೆ. 2019ರ ಒಡಿಐ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಕೇನ್ ವಿಲಿಯಮ್ಸನ್ ಬಳಗ ಭಾರತ ತಂಡದ ಕನಸನ್ನು ನುಚ್ಚು ನೂರು ಮಾಡಿತ್ತು. "ಒಂದಂತೂ ಖಾತ್ರಿಯಾಗಿದೆ. ನ್ಯೂಜಿಲೆಂಡ್ ತಂಡ ತಾನು ಆಡುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕೆಂಬ ಹಠದಲ್ಲಿದೆ. ಅವರಲ್ಲಿನ ಉತ್ಸಾಹ ನಿಜಕ್ಕೂ ಅದ್ಭುತ. ಹೌದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫಲಿತಾಂಶ ನ್ಯೂಜಿಲೆಂಡ್ ಕೈ ಹಿಡಿಯಲಿಲ್ಲ. ಆದರೆ, ತಂಡ ನಡೆಸಿದ ಹೋರಾಟ ಮಾತ್ರ ಅದ್ಭುತ. ಮೊದಲು ಬ್ಯಾಟ್ ಮಾಡಿ ಹೇಳಿಕೊಳ್ಳುವಷ್ಟು ರನ್‌ಗಳನ್ನು ಗಳಿಸದೇ ಇದ್ದರೂ, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ವಿಶ್ವ ದರ್ಜೆಯ ಆಟವಾಡಿ ಗೆಲ್ಲುವ ಆತ್ಮವಿಶ್ವಾಸ ಕಾಯ್ದುಕೊಂಡಿತ್ತು. ಹೀಗಾಗಿ ಈ ತಂಡದ ಎದುರು ಟೀಮ್ ಇಂಡಿಯಾ ಬಹಳಾ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ," ಎಂದು ಜಹೀರ್ ಖಾನ್ ಹೇಳಿದ್ದಾರೆ. ಟೂರ್ನಿಯಲ್ಲಿ ಭಾರತ ತಂಡ ಸುಲಭವಾಗಿ ಸೆಮಿಫೈನಲ್ಸ್ ಹಂತಕ್ಕೆ ಕಾಲಿಡಬೇಕಾದರೆ, ತನ್ನ ಮುಂದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್, ಅಫಘಾನಿಸ್ತಾನ, ನಮಿಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಜಯ ದಾಖಲಿಸಲೇ ಬೇಕಾದ ಒತ್ತಡದಲ್ಲಿದೆ. "ಟೀಮ್ ಇಮಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ದೇ ಆದರೆ ವಿಶ್ವದ ಯಾವುದೇ ತಂಡ ಕೂಡ ನಮಗೆ ಸಾಟಿಯಾಗದು. ಹೀಗಾಗಿ ಸಾಧ್ಯವಾದಷ್ಟು ಬೇಗೆ ಗೆಲುವಿನ ಹಳಿ ಹಿಡಿಯುವ ಅಗತ್ಯವಿದೆ. ಅದರಲ್ಲೂ ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಇದು ಮುಖ್ಯ. ಮೊದಲ ಪಂದ್ಯವನ್ನು ಸೋತಾಗಿದೆ. ಇನ್ನು ತಡ ಮಾಡುವ ಅಗತ್ಯವಿಲ್ಲ. ಬೇಗ ಗೆಲುವಿನ ಹಾದಿ ಕಂಡುಕೊಳ್ಳಬೇಕಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೆ ಮಡಿ ಮಹತ್ವ ಪಡೆದುಕೊಂಡಿದೆ," ಎಂದು ಜಹೀರ್ ವಿವರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ಇಲೆವೆನ್ ಹೀಗಿದೆ1. ರೋಹಿತ್ ಶರ್ಮಾ (ಓಪನರ್) 2. ಕೆಎಲ್ ರಾಹುಲ್ (ಓಪನರ್) 3. ವಿರಾಟ್ ಕೊಹ್ಲಿ (ನಾಯಕ/ಬ್ಯಾಟ್ಸ್‌ಮನ್) 4. ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್‌ಮನ್) 5. ರಿಷಭ್ ಪಂತ್ (ವಿಕೆಟ್‌ಕೀಪರ್/ಬ್ಯಾಟ್ಸ್‌ಮನ್) 6. ಇಶಾನ್ ಕಿಶನ್ (ಬ್ಯಾಟ್ಸ್‌ಮನ್) 7. ರವೀಂದ್ರ ಜಡೇಜಾ (ಆಲ್‌ರೌಂಡರ್) 8. ಶಾರ್ದುಲ್ ಠಾಕೂರ್ (ಆಲ್‌ರೌಂಡರ್) 9. ಆರ್ ಅಶ್ವಿನ್ (ಆಫ್ ಸ್ಪಿನ್ನರ್) 10. ಮೊಹಮ್ಮದ್ ಶಮಿ (ಬಲಗೈ ವೇಗಿ) 11. ಜಸ್‌ಪ್ರೀತ್ ಬುಮ್ರಾ (ಬಲಗೈ ವೇಗಿ)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3nxjXip