ಜಾತಿ ಆಧಾರಿತ ನಿಗಮಗಳಿಗೆ ಹಣದ ಹೊಳೆ; 16 ನಿಗಮ ಮಂಡಳಿಗಳ ಖರ್ಚು ವೆಚ್ಚ ವಿವರ ಹೈಕೋರ್ಟ್‌ಗೆ!

ಬೆಂಗಳೂರು: ರಾಜ್ಯದಲ್ಲಿ 1975ರಿಂದ 2021ರವರೆಗೆ ಜಾತಿ ಆಧಾರದ ಮೇಲೆ ರಚನೆ ಮಾಡಿರುವ 16 ನಿಗಮ ಮಂಡಳಿಗಳಿಗೆ ಮಂಜೂರು ಮಾಡಿರುವ ಮತ್ತು ಖರ್ಚು ಮಾಡಿರುವ ಅನುದಾನದ ವಿವರಗಳನ್ನು ಸರಕಾರ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿತು. ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸೇರಿ ನಾನಾ ಜಾತಿ ಆಧರಿತ ನಿಗಮ-ಮಂಡಳಿ ರಚನೆ ಪ್ರಶ್ನಿಸಿ ವಕೀಲ ಎಸ್‌. ಬಸವರಾಜ್‌ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸೇರಿ ಮತ್ತಿತರರು ಸಲ್ಲಿಸಿರುವ ಪಿಐಎಲ್‌ಗಳು ಸಿಜೆ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. 2021ರ ಅ.21ರಂದು ನೀಡಿದ ನಿರ್ದೇಶನದಂತೆ ಸರಕಾರಿ ವಕೀಲರು, ಒಟ್ಟು 16 ಮಂಡಳಿಗೆ ಮಂಜೂರು ಮಾಡಿದ, ಪಾವತಿಸಿದ ಒಟ್ಟು ಮತ್ತು ವ್ಯಯ ಮಾಡಿಸಿರುವ ಹಣದ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪರ ವಕೀಲರು, ಬಿ.ಎಸ್‌.ಯಡಿಯೂರಪ್ಪ ಸಿಎಂ ಹುದ್ದೆ ರಾಜೀನಾಮೆಗೂ ಮುನ್ನ ಜ.19ರಂದು ರಾಜ್ಯದಲ್ಲಿ ಶೇ.13ರಷ್ಟು ಮತ ಪ್ರಮಾಣ ಹೊಂದಿರುವ ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಮಂಡಳಿ ರಚಿಸಿ ಆದೇಶಿಸಿದ್ದರು. ಜಾತಿ ಆಧಾರಿತ ನಿಗಮ ಮಂಡಳಿಗಳನ್ನು ರಚಿಸಿ ಅವುಗಳಿಗೆ ಅನುದಾನ ನೀಡುವ ಕ್ರಿಯೆ ನಡೆಯುತ್ತಿದೆ. ಆ ಮಂಡಳಿಗಳ ಅಧ್ಯಕ್ಷ ಸ್ಥಾನ ಮತ್ತು ಸಿಬ್ಬಂದಿಯನ್ನಾಗಿ ತಮ್ಮ (ರಾಜಕಾರಣಿಗಳ) ಸಂಬಂಧಿ ಮತ್ತು ಬೆಂಬಲಿಗರನ್ನು ನೇಮಕ ಮಾಡಲಾಗುತ್ತಿದೆ, ಎಂದು ತಿಳಿಸಿದರು. ನಿಗಮ ಮಂಡಳಿಗಳ ಅನುದಾನ ವಿವರ (ಕೋಟಿಗಳಲ್ಲಿ) ನಿಗಮ-ಮಂಡಳಿ -ಹಂಚಿಕೆಯಾದ ಹಣ- ಪಾವತಿಯಾದ ಹಣ-ವ್ಯಯಿಸಿದ ಹಣ
  • ಅಂಬೇಡ್ಕರ್‌ ನಿಗಮ- 3,372.66- 3,330.41 -3,018.05
  • ವಾಲ್ಮೀಕಿ ಪ. ಪಂಗಡ ಅಭಿವೃದ್ಧಿ ನಿಗಮ -1,430- 1,430- 1,430
  • ಡಿ.ದೇವರಾಜು ಅರಸು ನಿಗಮ- 2,940- 2,660- 2,846
  • ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ -1,661.97- 1,512.91-1,517.67
  • ತಾಂಡಾ ಅಭಿವೃದ್ಧಿ ನಿಗಮ 862.67 -808.35 -808.08
  • ವಿಶ್ವಕರ್ಮ ಅಭಿವೃದ್ಧಿ ನಿಗಮ 139- 119- 103.45
  • ಉಪ್ಪಾರ ಅಭಿವೃದ್ಧಿ ನಿಗಮ 22.79- 22.79- 16.54
  • ಅಂಬಿಗರ ಚೌಡಯ್ಯ ನಿಗಮ 42.5- 32 -28.80
  • ಮಡಿವಾಳ ಮಾಚಿದೇವ ನಿಗವ 30 -26.25 -23.94
  • ಸವಿತಾ ಸಮಾಜ ಅಭಿವೃದ್ಧಿ ನಿಗಮ 7 -3.25- 1.98
  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ 500- 100- 0.72
  • ಭೋವಿ ಅಭಿವೃದ್ಧಿ ನಿಗಮ 339.150 -260.650 -227
  • ಆದಿಜಾಂಬವ ಅಭಿವೃದ್ಧಿ ನಿಗಮ 213.05 -175.55 -138.14
  • ಅಲೆಮಾರಿ ಅಭಿವೃದ್ಧಿ ನಿಗಮ 30.58 -25.29 -18.19
  • ಬ್ರಾಹ್ಮಣ ಅಭಿವೃದ್ಧಿ ಮಂಡಳಿ 36.29 -28- 3.31
  • ಆರ್ಯ ವೈಶ್ಯ ಅಭಿವೃದ್ಧಿ ನಿಗಮ 16- 16- 15.91


from India & World News in Kannada | VK Polls https://ift.tt/3nW3ODF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...