ಕೊರೊನಾ ಲಸಿಕೆ 2ನೇ ಡೋಸ್‌ಗೆ ಜನರ ನಿರಾಸಕ್ತಿ: ಬುಧವಾರ ರಾಜ್ಯಗಳ ಜೊತೆ ಕೇಂದ್ರ ಆರೋಗ್ಯ ಸಚಿವರ ಸಭೆ

: ನಿರೋಧಕ ಲಸಿಕೆಯ ನೂರು ಕೋಟಿಗೂ ಅಧಿಕ ಡೋಸ್‌ ನೀಡಿದ ಸಾಧನೆ ಸಂಭ್ರಮದಲ್ಲಿ ದೇಶ ಇರುವಾಗಲೇ, ಬಹಳಷ್ಟು ಜನರು ಎರಡನೇ ಡೋಸ್‌ ಪಡೆಯಲು ನಿರಾಸಕ್ತಿ ತೋರಿಸುತ್ತಿರುವ ಸಂಗತಿಯೂ ಬೆಳಕಿಗೆ ಬಂದಿದೆ. ನಿಗದಿತ ಅಂತರದಲ್ಲಿ ಎರಡೂ ಡೋಸ್‌ ಪಡೆದ ಬಳಿಕವಷ್ಟೇ ಆ ವ್ಯಕ್ತಿಯ ಪಡೆಯುವ ಪ್ರಕ್ರಿಯೆ ಪೂರ್ಣವಾಗುತ್ತದೆ ಮತ್ತು ಲಸಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆದರೆ ದೇಶಾದ್ಯಂತ 11 ಕೋಟಿಗೂ ಅಧಿಕ ಜನ ಎರಡನೇ ಡೋಸ್‌ ಪಡೆಯಲು ಅರ್ಹರಾಗಿದ್ದಾರೆ. ಆಯಾ ರಾಜ್ಯಗಳಲ್ಲಿ ಹೇರಳವಾಗಿ ಲಸಿಕೆ ಲಭ್ಯವಿದೆ. ಹೀಗಿದ್ದರೂ ಜನರೇಕೆ ಎರಡನೇ ಡೋಸ್‌ ಪಡೆದಿಲ್ಲ ಎನ್ನುವುದು ಕೇಂದ್ರ ಸರಕಾರಕ್ಕೆ ತಲೆನೋವಾಗಿದೆ. ಈ ಕುರಿತು ಸಮಗ್ರವಾಗಿ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ಅವರು ಬುಧವಾರ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದ್ದಾರೆ. ಎಲ್ಲ ರಾಜ್ಯಗಳು ಲಸಿಕೆ ವಿತರಣೆಯನ್ನು ಮತ್ತೆ ಅಭಿಯಾನದ ರೀತಿಯಲ್ಲಿ ಮುಂದುವರಿಸಬೇಕು. ಮೊದಲ ಡೋಸ್‌ ಪಡೆದವರು ಎರಡನೇ ಡೋಸ್‌ ಸಹ ಪಡೆಯುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಈಗಾಗಲೇ ರಾಜ್ಯಗಳಿಗೆ ಸೂಚನೆ ರವಾನಿಸಿದೆ. ದೇಶದ ಜನಸಂಖ್ಯೆಯ ಶೇ.75ರಷ್ಟು ಜನ ಮೊದಲ ಡೋಸ್‌ ಪಡೆದಿದ್ದು, ಶೇ.31ರಷ್ಟು ಜನ ಮಾತ್ರ ಎರಡೂ ಡೋಸ್‌ ಪಡೆದಿದ್ದಾರೆ. ಇದೀಗ ದೇಶದಲ್ಲಿ ಕೊರೊನಾ 3ನೇ ಅಲೆಯ ಭೀತಿ ಶುರುವಾಗಿದೆ. ರಷ್ಯಾ ಹಾಗೂ ಚೀನಾ ದೇಶದಲ್ಲಿ ಕೊರೊನಾ ಸ್ಫೋಟವಾಗಿದ್ದು, ಆ ದೇಶಗಳಲ್ಲಿ ಸದ್ಯ ಎದುರಾಗಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಭಾರತಕ್ಕೂ ಕಾದಿದೆಯೇ ಎಂಬ ಆತಂಕವಿದೆ. ಇದರ ಬೆನ್ನಲ್ಲೇ ಕೊರೊನಾ ಲಸಿಕೆ ಪಡೆಯಲು ಜನರು ನಿರಾಸಕ್ತಿ ವಹಿಸುತ್ತಿರೋದು ಸರ್ಕಾರಕ್ಕೆ ತಲೆ ಬಿಸಿ ತಂದಿದೆ. ಹೊಸ ರೂಪಾಂತರಿ ಕೊರೊನಾ ಕುರಿತು ಅಧ್ಯಯನ 'ಡೆಲ್ಟಾ ಹೊಸ ರೂಪಾಂತರಿಯಾದ ಎವೈ. 4.2 ಕುರಿತು ತಜ್ಞರ ತಂಡವು ಅಧ್ಯಯನ ಮಾಡುತ್ತಿದೆ' ಎಂದು ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ. 'ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್ ಮಧ್ಯ ಪ್ರದೇಶದ ಏಳು ಜನರಲ್ಲಿ ಕಾಣಿಸಿಕೊಂಡಿದೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ತಜ್ಞರು ಅಧ್ಯಯನ ಮಾಡುತ್ತಿದ್ದಾರೆ' ಎಂದು ಸಚಿವರು ಮಾಹಿತಿ ನೀಡಿದ್ದಾರೆ. 'ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸುವ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯು ಪರಿಶೀಲನೆ ನಡೆಸುತ್ತಿದ್ದು, 24 ಗಂಟೆಯಲ್ಲಿ ಸಮ್ಮತಿ ಸಿಗುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆ ವಕ್ತಾರೆ ಮಾರ್ಗರೇಟ್‌ ಹ್ಯಾರಿಸ್‌ ಹೇಳಿದ್ದಾರೆ. ಡಬ್ಲ್ಯೂಎಚ್‌ಒ ತುರ್ತು ಬಳಕೆ ಪಟ್ಟಿಗೆ ಸೇರಿಸದ ಕಾರಣ ಕೊವ್ಯಾಕ್ಸಿನ್‌ ಲಸಿಕೆಯ ಎರಡೂ ಡೋಸ್‌ ಪಡೆದಿರುವ ಭಾರತದ ಕೋಟ್ಯಂತರ ಜನ ವಿದೇಶಕ್ಕೆ ತೆರಳಲು ಆಗುತ್ತಿಲ್ಲ. ಚೀನಾ ನಗರದಲ್ಲಿ ಲಾಕ್‌ಡೌನ್‌ ಚೀನಾದಲ್ಲಿ ಡೆಲ್ಟಾ ರೂಪಾಂತರಿಯು ಮಾರಕವಾಗಿ ಪರಿಣಮಿಸುತ್ತಿದ್ದು, ಮಂಗಳವಾರ ಲಾಂಝೌ ನಗರದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಲಾಂಝೌ ನಗರದಲ್ಲಿ 40 ಲಕ್ಷಕ್ಕೂ ಅಧಿಕ ಜನರಿದ್ದು, ಸಾಮೂಹಿಕವಾಗಿ ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.


from India & World News in Kannada | VK Polls https://ift.tt/3nuJits

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...