ಬೆಂಗಳೂರು: ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಓಪನರ್ , ಬ್ಯಾಟ್ಸ್ಮನ್ಗಳು ಅವರಲ್ಲಿನ ಹೆಚ್ಚುವರಿ ವೇಗದ ಎದುರು ಸಾಟಿಯಾಗಲಾರರು ಎಂಬ ಹೇಳಿಕೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಗಂಟೆಗೆ 130 ಕಿ.ಮೀ ಸರಾಸರಿ ವೇಗದ ಎಸೆತಗಳ ಎದುರಷ್ಟೇ ಹೆಚ್ಚು ಬ್ಯಾಟ್ ಮಾಡಿದ್ದಾರೆ. ಆದರೆ, ಅಫ್ರಿದಿ ಅವರಂತಹ ಬೌಲರ್ನಲ್ಲಿರುವ ಹೆಚ್ಚುವರಿ ವೇಗ ನಿಭಾಯಿಸಿ ಆಡಲು ಭಾರತೀಯ ಬ್ಯಾಟ್ಸ್ಮನ್ಗಳು ಕಷ್ಟ ಪಡುತ್ತಾರೆ ಎಂದಿದ್ದಾರೆ. ಅಕ್ಟೋಬರ್ 24 (ಭಾನುವಾರ) ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಗುಂಪಿನ ಸೂಪರ್ 12 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 6 ರನ್ ಗಳಿಸುವ ಹೊತ್ತಿಗೆ ತನ್ನಿಬ್ಬರೂ ಓಪನರ್ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಯಿತು. ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ, ಮೊದಲ ಓವರ್ನಲ್ಲೇ ರೋಹಿತ್ ಶರ್ಮಾ (0) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರೆ, 2ನೇ ಓವರ್ನ ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ನಂತರ ಅರ್ಧಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಅವರನ್ನೂ ತಮ್ಮ ಕೊನೇ ಓವರ್ನಲ್ಲಿ ಔಟ್ ಮಾಡಿದರು. ವೇಗದ ಜೊತೆಗೆ ಸ್ವಿಂಗ್ ಕೂಡ ತರಬಲ್ಲ ಅಫ್ರಿದಿ ಭಾರತೀಯ ಬ್ಯಾಟ್ಸ್ಮನ್ಗಳಿಗೆ ಕಬ್ಬಿಣದ ಕಡಲೆಯಾಗಿದ್ದಂತೂ ನಿಜ. ಇದೇ ಕಾರಣಕ್ಕೆ ಅವರಿಗೆ ಪಂದ್ಯ ಶ್ರೇಷ್ಠ ಗೌರವವೂ ಒಲಿಯಿತು. "ಭಾರತ ತಂಡದ ಬ್ಯಾಟ್ಸ್ಮನ್ಗಳು ಕಳೆದ ತಿಂಗಳು ಐಪಿಎಲ್ ವೇಳೆ 130 ಕಿ.ಮೀ ವೇಗದ ಎಸೆತಗಳನ್ನು ಮಾತ್ರವೇ ಎದುರಿಸಿದ್ದಾರೆ. ಆದರೆ, ಶಾಹೀನ್ ಶಾ ಅಫ್ರಿದಿ ಅವರಂತಹ ಮಿಂಚಿನ ವೇಗದ ಬೌಲರ್ನ ಎದುರಿಸುವಾಗ ಆಟ ಸಂಪೂರ್ಣ ಬದಲಾಗುತ್ತದೆ. ಅವರೆದುರು ಬ್ಯಾಟ್ ಮಾಡುವುದು ಅಷ್ಟು ಸುಲಭವಲ್ಲ," ಎಂದು ಹೇಡೆನ್ ಹೇಳಿಕೆ ನೀಡಿದ್ದರೆ. ಹೇಡೆನ್ ಹೇಳಿಕೆಯನ್ನು ಈ ನಲ್ಲಿ ವೀಕ್ಷಿಸಬಹುದಾಗಿದೆ. ಇದೇ ವೇಳೆ ಪಂದ್ಯದ ಬಳಿಕ ಎರಡೂ ತಂಡದ ಆಟಗಾರರು ಪ್ರದರ್ಶಿಸಿದ ಕ್ರೀಡಾ ಸ್ಪೂರ್ತಿಗೆ ಹೇಡೆನ್ ಮಾರುಹೋಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಪಾಕ್ ಬ್ಯಾಟ್ಸ್ಮನ್ಗಳನ್ನು ತಬ್ಬಿ ಶುಭ ಹಾರೈಸಿದರೆ, ಟೀಮ್ ಇಂಡಿಯಾ ಮೆಂಟರ್ ಎಂಎಸ್ ಧೋನಿ ಪಾಕ್ ಆಟಗಾರರೊಟ್ಟಿಗೆ ಚರ್ಚಿಸಿ ಸಲಹೆಗಳನ್ನು ನೀಡುವ ಮೂಲಕ ಗಮನ ಸೆಳೆದರು. "ಎರಡೂ ತಂಡದ ಆಟಗಾರರು ಪಂದ್ಯದ ಬಳಿಕ ಪ್ರದರ್ಶಿಸಿದ ಭ್ರಾತೃತ್ವ ಮತ್ತು ಕ್ರೀಡಾಸ್ಪೂರ್ತಿ ಅದ್ಭುತವಾದದ್ದು. ಕ್ರೀಡೆಯ ಪಾತ್ರವೇ ಇದು. ಪಾಕಿಸ್ತಾನದ ಆಟಗಾರರಿಗೆ ಎಂಎಸ್ ಧೋನಿ ಸಲಹೆ ನೀಡುತ್ತಿರುವುದನ್ನು ಕಂಡು ಅದ್ಭುತ ಅನುಭವವಾಯಿತು. ಜಿದ್ದಾಜಿದ್ದಿನ ಪೈಪೋಟಿ ನಂತರ ವಿರಾಟ್ ಕೊಹ್ಲಿ ಪಾಕ್ ಆಟಗಾರರನ್ನು ತುಂಬು ಹೃದಯದಿಂದ ಶುಭ ಹಾರೈಸಿದರು," ಎಂದು ಮೆಚ್ಚುಗೆ ಹೊರಹಾಕಿದ್ದಾರೆ. ಸೂಪರ್ 12 ಹಂತದ ಎರಡನೇ ಗುಂಪಿನಲ್ಲಿ ಪಾಕಿಸ್ತಾನ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಭಾರತ ವಿರುದ್ಧ 10 ವಿಕೆಟ್ಗಳ ಜಯದ ಬಳಿಕ, ಅಪಾಯಕಾರಿ ನ್ಯೂಜಿಲೆಂಡ್ ಎದುರು ಶಾರ್ಜಾದಲ್ಲಿ 5 ವಿಕೆಟ್ಗಳ ಜಯ ದಕ್ಕಿಸಿಕೊಂಡಿದೆ. ಈಗ ಅಕ್ಟೋಬರ್ 29ರಂದು ಮತ್ತೊಂದು ಅಪಾಯಕಾರಿ ತಂಡ ಅಫಘಾನಿಸ್ತಾನ ಎದುರು ಕಾದಾಟ ನಡೆಸಲಿದೆ. ಅಷ್ಟೇ ಅಲ್ಲದೆ ಬ್ಯಾಕ್ ಟು ಬ್ಯಾಕ್ ಭರ್ಜರಿ ಪ್ರದರ್ಶನಗಳೊಂದಿಗೆ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿ ಪಾಕಿಸ್ತಾನ ಹೊರಹೊಮ್ಮಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BqYPPM