ಬೆಳಗಾವಿ/ : ಕನ್ನಡಿಗರ ಕಣ್ಮಣಿಯಾಗಿದ್ದ ನಟ ಇಡೀ ರಾಜ್ಯದ ಜನತೆಯಲ್ಲಿ, ದೇಶದ ಸಿನಿಮಾ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಪುನೀತ್ ಅವರ ಅಕಾಲಿಕ ಅಗಲುವಿಕೆಯಿಂದ ಅನೇಕರು ಅಸ್ವಸ್ಥರಾದ ಘಟನೆ ನಡುವೆಯೇ, ಅವರ ಅಗಲುವಿಕೆಯ ನೋವನ್ನು ಸಹಿಸದೆ ಜೀವ ಕಳೆದುಕೊಳ್ಳುವ ಆತುರಕ್ಕೆ ಮುಂದಾಗುತ್ತಿದ್ದಾರೆ. ತಮ್ಮ ನೆಚ್ಚಿನ ನಟ ಪುನೀತ್ ನಿಧನದಿಂದ ಮನನೊಂದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಭಿಮಾನಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಅಥಣಿ ಪಟ್ಟಣದ ರಾಹುಲ್ ಗಾಡಿವಡ್ಡರ (26), ಅವರ ನಿಧನದಿಂದ ಉಂಟಾದ ತೀವ್ರ ದುಃಖದಿಂದ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುಂಚೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದ ರಾಹುಲ್, ಅವರ ಸಾವಿನಿಂದ ಮನನೊಂದಿದ್ದರು ಎನ್ನಲಾಗಿದೆ. ತಾಲೂಕಿನ ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಹನುಮಂತ ದೇಮಣ್ಣವರ (34) ಶುಕ್ರವಾರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಹನುಮಂತ, ಅವರ ಸಹೋದರ ನಟ ಶಿವರಾಜಕುಮಾರ ಅಭಿಮಾನಿಗಳ ಸಂಘದ ಸದಸ್ಯರೂ ಆಗಿದ್ದರು. ಪುನೀತ್ ರಾಜಕುಮಾರ್ ಅವರ ಸಾವಿನ ಸುದ್ದಿ ಕೇಳಿ ಬಹಳ ನೊಂದಿದ್ದ ಅವರು ಶುಕ್ರವಾರ ಇಡೀ ದಿನ ಶೋಕಿಸಿದ್ದರು. ಅವರು ರಾತ್ರಿ ಮಲಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನು ಹನುಮಂತ ಅಗಲಿದ್ದಾರೆ. ರಾಯಚೂರಿನಲ್ಲಿ ಆತ್ಮಹತ್ಯೆಗೆ ಯತ್ನನಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ನೊಂದ ಅಭಿಮಾನಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಂಧನೂರು ತಾಲೂಕಿನ ಅರಾಪುರದ ಬಸನಗೌಡ (22) ಹಾಗೂ ಯಾಪಲಪರ್ವಿಯ ಮೊಹಮ್ಮದ್ ರಫಿ (25) ಶುಕ್ರವಾರ ರಾತ್ರಿ ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇಬ್ಬರನ್ನು ಸಿಂಧನೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೂರಿನಲ್ಲಿ ವ್ಯಕ್ತಿ ಸಾವುಪುನೀತ್ ರಾಜ್ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ವರದಿಯಾಗಿತ್ತು. ಪೊನ್ನಾಚಿ ಸಮೀಪದ ಮರೂರು ಗ್ರಾಮದ ಮುನಿಯಪ್ಪ (30) ಎಂಬುವವರು ಮೃತಪಟ್ಟ ದುರ್ದೈವಿ. ಚಿಕ್ಕಂದಿನಿಂದಲೂ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದ ಮುನಿಯಪ್ಪ, ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಪೊನ್ನಾಚಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಅವರಿಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣುಮಗು ಇದೆ. ಕಾಲುವೆಗೆ ಬಿದ್ದು ಸಾವುಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಶುಕ್ರವಾರ ಸಂಜೆ ಪುನೀತ್ ರಾಜ್ಕುಮಾರ್ ಅಭಿಮಾನಿಯೊಬ್ಬರು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಮಲಾಪುರ 16ನೇ ವಾರ್ಡ್ ಬಂಡಿಕೇರಿ ನಿವಾಸಿ ಸಾದಪ್ಪ (40) ಪೊಲೀಸ್ ಕ್ವಾಟ್ರರ್ಸ್ ಸಮೀಪದ ಕಾಲುವೆಗೆ ಜಿಗಿದಿದ್ದಾರೆ.
from India & World News in Kannada | VK Polls https://ift.tt/2ZyGy66