ಬೆಳಗಾವಿ: ಎಷ್ಟೇ ಒತ್ತಾಯಿಸಿದರು ಮದುವೆಯಾಗಲು ಒಪ್ಪದ ಸಹೋದರಿಯರಿಗೆ ಚೂರಿ ಇರಿದ ತಮ್ಮ, ಒಬ್ಬರು ಸಾವು!

ಘಟಪ್ರಭಾ: ಸಹೋದರನ ಚೂರಿ ಇರಿತದಿಂದ ಗಾಯಗೊಂಡು 14 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಸಹೋದರಿ ಚಿಕಿತ್ಸೆ ಫಲಿಸಿದೆ ಗುರುವಾರ ಮೃತಪಟ್ಟಿದ್ದಾರೆ. ಅರಬಾವಿ ಗ್ರಾಮದ ಶಿವಲೀಲಾ ಮಾರುತಿ ಪೂಜೇರಿ (41) ಮೃತ ಮಹಿಳೆ. ಘಟನೆಯ ಹಿನ್ನೆಲೆ! ಅರಬಾವಿ ಗ್ರಾಮದ ಶಿವಲೀಲಾ ಮತ್ತು ಸವಿತಾ ಅವರಿಗೆ ಆಗಿರಲಿಲ್ಲ. ಮದುವೆ ಮಾಡಿಕೊಳ್ಳುವಂತೆ ತಮ್ಮ ಇಬ್ಬರು ಅಕ್ಕಂದಿರಿಗೆ ಸಹೋದರ ಶಂಕರ ಮಾರುತಿ ಪೂಜೇರಿ ಒತ್ತಾಯಿಸುತ್ತಿದ್ದ. ಆದರೂ, ಅವರು ಮದುವೆ ಆಗಿರಲಿಲ್ಲಎನ್ನಲಾಗಿದೆ. ಇದೇ ಕಾರಣಕ್ಕೆ ಮಾ.11ರಂದು ಶಂಕರ ಇಬ್ಬರೂ ಅಕ್ಕಂದಿರಿಗೆ ಚಾಕುವಿನಿಂದ ಇರಿದಿದ್ದ. ಗಾಯಗೊಂಡ ಅವರನ್ನು ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶಿವಲೀಲಾ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸವಿತಾ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಂಕರ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಶೋಧ ಕಾರ‍್ಯ ಆರಂಭಿಸಲಾಗಿದೆ ಎಂದು ಘಟಪ್ರಭಾ ಪಿಐ ಶ್ರೀಶೈಲ ಬ್ಯಾಕೂಡ ತಿಳಿಸಿದ್ದಾರೆ.


from India & World News in Kannada | VK Polls https://ift.tt/3fh8otg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...