ಸತೀಶ್‌ ಜಾರಕಿಹೊಳಿ ₹123 ಕೋಟಿ ಒಡೆಯ; ಒಂದೂವರೆ ವರ್ಷದಲ್ಲಿ ಇಬ್ಬರು ಮಕ್ಕಳು ಕೂಡ ಕೋಟ್ಯಧೀಶರು!

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸತೀಶ್‌ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದ್ದು, ಜಾರಕಿಹೊಳಿ ತನ್ನ ಆಸ್ತಿವಿವರವನ್ನು ಬಹಿರಂಗಗೊಳಿಸಿದ್ದಾರೆ. ಸತೀಶ್‌ ಜಾರಕಿಹೊಳಿ ಅವರ ಮಕ್ಕಳು ಒಂದೂವರೆ ವರ್ಷದಲ್ಲಿಯೇ ಕೋಟ್ಯಧೀಶರಾಗಿದ್ದಾರೆ. 2019ರಲ್ಲಿ ನಡೆದ ಗೋಕಾಕ್‌ ಕ್ಷೇತ್ರದ ಉಪಚುನಾವಣೆಯಲ್ಲಿ ಕಿರಿಯ ಸಹೋದರ ಲಖನ್‌ ಜಾರಕಿಹೊಳಿಗೆ ಪರ್ಯಾಯವಾಗಿ ಸತೀಶ್‌ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಸಿದ್ದಾಗ ಪುತ್ರ ರಾಹುಲ್‌ ಚರಾಸ್ತಿ 10.19 ಲಕ್ಷ ರೂ. ಹಾಗೂ ಪುತ್ರಿ ಪ್ರಿಯಾಂಕಾ ಚರಾಸ್ತಿ 80.74 ಲಕ್ಷ ರೂ. ಎಂದು ತೋರಿಸಿದ್ದರು. ಆದರೆ ಈಗ ಪುತ್ರ ರಾಹುಲ್‌ 1.89 ಕೋಟಿ ರೂ. ಹಾಗೂ ಪುತ್ರಿ ಪ್ರಿಯಾಂಕಾ 3.13 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಜತೆಗೆ ಪ್ರಿಯಾಂಕಾ ಹೆಸರಿನಲ್ಲಿ 48.46 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ರಾಹುಲ್‌ ಹೆಸರಿನಲ್ಲಿ 2.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ತೋರಿಸಿದ್ದಾರೆ. ಇನ್ನು, ಪತ್ನಿ ಶಕುಂತಲಾ ಅವರ ಚರಾಸ್ತಿ 6.13 ಕೋಟಿ ರೂ.ಗಳಿಂದ ಒಂದೂವರೆ ವರ್ಷದಲ್ಲಿ 6.70 ಕೋಟಿ ರೂಗಳಿಗೇರಿದೆ ಸ್ವತಃ ಸತೀಶ್‌ ಜಾರಕಿಹೊಳಿ ಅವರ ಚರಾಸ್ತಿ 11.75 ಕೋಟಿ ರೂ.ಗಳಿಂದ 13.62 ಕೋಟಿ ರೂ.ಗೆ ಏರಿದೆ. ಸತೀಶ್‌ ಜಾರಕಿಹೊಳಿ ಅವರ ಒಟ್ಟು ಸ್ಥಿರಾಸ್ತಿ ಮೊತ್ತ 123 ಕೋಟಿ ರೂ. ಎಂದು ಘೋಷಿಸಿದ್ದಾರೆ. ತಂದೆ, ತಾಯಿಯಿಂದ ಸಾಲ ಪಡೆದ ಸತೀಶ್‌ ಜಾರಕಿಹೊಳಿ ಅವರು ಪತ್ನಿ ಮತ್ತು ಮಕ್ಕಳು ಸೇರಿ ತಾವು ಒಟ್ಟು 15.41 ಕೋಟಿ ರೂ. ಸಾಲ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. ಅದರಲ್ಲಿ ತಂದೆ, ತಾಯಿಯೇ ಮಕ್ಕಳಿಗೆ ಕೋಟ್ಯಂತರ ರೂ. ಸಾಲ ನೀಡಿದ್ದಾರೆ. ಅಂದರೆ, ಸತೀಶ್‌ ಮತ್ತು ಅವರ ಪತ್ನಿ ಶಕುಂತಲಾ ಅವರು ಮಗಳು ಪ್ರಿಯಾಂಕಾಗೆ 2.34 ಕೋಟಿ ರೂ. ಮತ್ತು ಪುತ್ರ ರಾಹುಲ್‌ಗೆ 1.83 ಕೋಟಿ ರೂ. ಸಾಲ ನೀಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತೋರಿಸಲಾಗಿದೆ.


from India & World News in Kannada | VK Polls https://ift.tt/2PaVtP6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...