ಸಿ.ಡಿ ಯುವತಿ ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗುತ್ತಾರೆ: ವಕೀಲ ಜಗದೀಶ್‌

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ಗಳು ಪಡೆಯುತ್ತಿದೆ. ಇದೀಗ ನಾಳೆ(ಸೋಮವಾರ) ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ ಎಂದು ಆಕೆಯ ಪರ ಫೇಸ್‌ಬುಕ್‌ ಮೂಲಕ ತಿಳಿಸಿದ್ದಾರೆ. ಸಿಡಿ ಲೇಡಿ ಪೋಷಕರು ತಮ್ಮ ಮಗಳ ಪರವಾಗಿ ನಿಲ್ಲಬೇಕು. ಮಗಳಿಗೆ ಅನ್ಯಾಯವಾಗಿದೆ. ಹೀಗಾಗಿ ಆಕೆ ಪರವಾಗಿ ನಿಲ್ಲಬೇಕು. ನಾವು ಅಂದುಕೊಂಡಂತೆ ಆದರೆ ನಾಳೆ ಆಕೆ ಕೋರ್ಟ್‌ಗೆ ಹಾಜರಾಗಲಿದ್ದಾರೆ ಎಂದು ಜಗದೀಶ್ ಹೇಳಿದ್ರು. ಈ ಪ್ರಕರಣ ದಾಖಲಾದ ನಂತರ ನಿನ್ನೆ ಪೋಷಕರಿಗೆ ಸೆಕ್ಯೂರಿಟಿ ಕೊಡಿ ಅಂದ್ರೆ ಯಾರನ್ನೂ ಬೇಟಿ ಮಾಡದೇ ಎಸ್ಐಟಿ ಪೊಲೀಸರು ವಾಪಸ್ ಕಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಯುತವಾದ ತನಿಖೆ ಆಗಿಲ್ಲ. ಪೊಲೀಸರು ರಾಜಕಾರಣಿಗಳಿಗೆ ತಮ್ಮ ತಲೆ ಬಗ್ಗಿಸಿದ್ದಾರೆ ಅನಿಸ್ತಿದೆ. ಅತ್ಯಾಚಾರದ ಪ್ರಕರಣ ಹಾಗೂ ಸುಲಿಗೆ ಕೇಸ್ ಎಫ್ಐಆರ್ ಇದೆ. ಎರಡು ಎಫ್ಐಆರ್ ಒಂದೇ ಇನ್ವೆಸ್ಟಿಗೇಶನ್ ಏಜನ್ಸಿ ಮಾಡಿದಾಗ ಎಲ್ಲೋ ಒಂದು ಕಡೆ ತಾರತಮ್ಯ ಆಗಬಹುದು. ಸ್ಟೇಟ್ ಮೆಂಟ್ ರೆಕಾರ್ಡ್ ಮಾಡಿ ತದನಂತರ ಪೊಲೀಸರಿಗೆ ಪ್ರೊಡ್ಯೂಸ್ ಮಾಡೋ ಪ್ಲಾನ್ ಮಾಡ್ತಿದ್ದೀವಿ. ಶನಿವಾರ, ಭಾನುವಾರ ಕೋರ್ಟ್ ರಜೆ ಇದೆ. ಸೋಮವಾರ ನಾಳೆ ಕೋರ್ಟಿನ ಮುಂದೆ ಹಾಜರಾಗೋ ಸಾಧ್ಯತೆ ಹೆಚ್ಚಾಗಿದೆ. ಯುವತಿಯೇ ವಿಡಿಯೋದಲ್ಲಿ ಹೇಳೋ ಪ್ರಕಾರ ಪೋಷಕರ ಮೇಲೆ ಪ್ರಭಾವಿ ವ್ಯಕ್ತಿ ಒತ್ತಡ ಹೇರಿ ಸ್ಟೇಟ್ ಮೆಂಟ್ ಕೊಡಿಸಿರೋ ಸಾಧ್ಯತೆಯೂ ತುಂಬಾ ಇದೆ. ಒಂದು ವೇಳೆ ಇದು ನಿಜವಾದ್ರೂ ಈ ಪ್ರಕರಣದಲ್ಲಿ ಹೆಣ್ಣು ಮಗಳ ಹೇಳಿಕೆ ತುಂಬಾ ಇಂಪಾರ್ಟೆಂಟ್ ಆಗುತ್ತೆ. ನೊಂದಿರೋಳು ಹೆಣ್ಣು ಮಗಳು ಆಕೆ ಸಹಾಯ ಬೇಡ್ತಿರೋದು ಸಮಾಜಕ್ಕೆ. ತಂದೆ ತಾಯಿ ಸಂತ್ರಸ್ತೆ ಮಗಳ ಪರವಾಗಿ ನಿಲ್ಲಬೇಕು. ಜಾತಿ ಬಣ್ಣ, ರಾಜಕೀಯ ಬಣ್ಣ ಆಗ್ತಿದೆ ಆದಷ್ಟು ಬೇಗ ನ್ಯಾಯಾಲಯದ ಮುಂದೆ ಹಾಜರುಪಡಿಸೋದು ತುಂಬಾ ಇಂಪಾರ್ಟೆಂಟ್ ಆಗಿದೆ ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.


from India & World News in Kannada | VK Polls https://ift.tt/3u0QmQe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...