ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಜೈಕಾದಿಂದ 3,717 ಕೋಟಿ ರೂ. ಸಾಲ ಮಂಜೂರು

ಬೆಂಗಳೂರು: 'ನಮ್ಮ ಮೆಟ್ರೋ' ಹಂತ-2ರ ಅಭಿವೃದ್ಧಿ ಯೋಜನೆಗಳಿಗೆ ಜಪಾನ್‌ ಇಂಟರ್‌ನ್ಯಾಷನಲ್‌ ಕೋ-ಆಪರೇಷನ್‌ ಏಜೆನ್ಸಿ () 3,717 ಕೋಟಿ ರೂ. ಸಾಲ ಮಂಜೂರು ಮಾಡಿದೆ. ನಾಗವಾರ -ಗೊಟ್ಟಿಗೆರೆಯ 22 ಕಿ.ಮೀ, ಸಿಲ್‌್ಕ ಬೋರ್ಡ್‌- ಕೆಆರ್‌.ಪುರಂನ 20 ಕಿ.ಮೀ. ಹಾಗೂ ಕೆ.ಆರ್‌.ಪುರಂ - ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 38 ಕಿ.ಮೀ. ಯೋಜನೆಗೆ ಈ ಸಾಲದ ಹಣ ಬಳಕೆಯಾಗಲಿದೆ. ಜಪಾನ್‌ನ ರಾಯಭಾರಿ ಸುಜುಕಿ ಸಟೋಶಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಿ.ಎಸ್‌.ಮಹಾಪಾತ್ರ ಅವರು ಮಾ. 26ರಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬೆಂಗಳೂರು ಮೆಟ್ರೋ ಹಂತ- 2 ಅನ್ನು ಕೇಂದ್ರೀಯ ವ್ಯವಹಾರಗಳ ಜಿಲ್ಲಾಪ್ರದೇಶ, ವಸತಿ ಪ್ರದೇಶ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತರಿಸಲು ಸುಮಾರು 3,717 ಕೋಟಿ ಸಾಲ ನೀಡಿದೆ. 'ಬೆಂಗಳೂರಿನ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಜೈಕಾ ಉತ್ತೇಜಿಸುತ್ತದೆ. ಇದು ನಿರಂತರ ಬೆಳವಣಿಗೆಗೆ ಅನುಕೂಲವಾಗಿದೆ. ಭಾರತ ಮತ್ತು ಜಪಾನ್‌ನ ಸಂಬಂಧ ವೃದ್ಧಿಗೂ ಸಹಾಯವಾಗಲಿದೆ. ಇಂಗಾಲ (ಸಿಒ2) ಹೊರಸೂಸುವಿಕೆಯಲ್ಲಿ ದಿಲ್ಲಿ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಈ ಯೋಜನೆಗಳಿಂದ ಇಂಗಾಲ ಹೊರಸೂಸುವಿಕೆ ಕಡಿಮೆಯಾಗುವ ನಿರೀಕ್ಷೆಯಿದೆ. ರೈಲು ಯೋಜನೆಯು ಸಮಯಪ್ರಜ್ಞೆ, ಸುರಕ್ಷಿತ, ಆರಾಮದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ' ಎಂದು ಜೈಕಾ ಪ್ರತಿಪಾದಿಸಿದೆ.


from India & World News in Kannada | VK Polls https://ift.tt/31mmhhs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...