ಬೆಳಗಾವಿ: ಸಣ್ಣ ಅಪಸ್ವರವೂ ಇಲ್ಕದ ಪ್ರಬಲ ನಾಯಕನಿಗೆ ಟಿಕೆಟ್ ನೀಡಿರುವುದು ಪಕ್ಷ ಶಿಸ್ತಿಗೆ ಸ್ಪಷ್ಟ ಸಾಕ್ಷಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಸೋಮವಾರ ಬೆಳಗ್ಗೆ ಇಲ್ಲಿನ ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು, ಮಹಿಳೆಯರು ಮತ್ತು ಎಲ್ಲ ವರ್ಗದ ಜನ ಕಾಂಗ್ರಸ್ ಪಕ್ಷದ ಆಸ್ತಿ ಎಂದ ಅವರು, ಸತೀಶ್ ಜಾರಕಿಹೊಳಿ ನನ್ನ ಬಳಿ ಕೇಳಿದ್ದು ಒಂದೇ ಒಂದು. ನಮ್ಮ ಕ್ಷೇತ್ರದ ಜನತೆಗೆ ಟ್ರೇನ್ ಕೊಡಬೇಕು ಎಂದು'. ಟ್ರೇನಿಂಗ್ ಅಂದರೆ ಶಿಸ್ತು, ಜವಾಬ್ದಾರಿಗಳನ್ನು ತಿಳಿ ಹೇಳುವುದು. ಆ ಕೆಲಸ ನಾನು ಮಾಡುತ್ತೇನೆ ಎಂದರು. ಅಶೋಕ ಪೂಜಾರಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವಿಚಾರವಾಗಿ ಸ್ಥಳೀಯ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಆಕ್ಟೀವ್ ಆಗಿದ್ದು, ಕೆಲ ಮುಖಂಡರು ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ. ಈಗಾಗಲೇ ಮುಖಂಡರ ಮಟ್ಟದ ಸಭೆಗಳೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
from India & World News in Kannada | VK Polls https://ift.tt/3rx9T9g