ಶನಿವಾರ ಸಂಜೆ ರಮೇಶ್ ಜಾರಕಿಹೊಳಿ ಸ್ಫೋಟಿಸ್ತಾರಂತೆ ಹೊಸ ಬಾಂಬ್! ಕುತೂಹಲ ಕೆರಳಿಸಿದ ಸಾಹುಕಾರ್ ನಡೆ

ಬೆಂಗಳೂರು: ಸಿ.ಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಸಿ.ಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ಶುಕ್ರವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಕೀಲರ ಮೂಲಕ ದೂರನ್ನು ನೀಡಿದ್ದು ಇದರ ಬೆನ್ನಲ್ಲೇ ಶನಿವಾರ ಹೊಸ ಬಾಂಬ್ ಸಿಡಿಸುವುದಾಗಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಯುವತಿ ದೂರು ನೀಡಿದ ಬೆನ್ನಲ್ಲೇ ಆಕೆ ಆಕೆಯ ಪೋಷಕರ ಜೊತೆ ಮಾತನಾಡಿರುವ ಆಡಿಯೋ ಬಿಡುಗಡೆ ಆಗಿದೆ. ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಈ ನಡುವೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್ ಇದು ಟ್ರಯಲ್ ಅಷ್ಟೇ, ಶನಿವಾರ ದೊಡ್ಡ ಸುದ್ದಿ ಕೊಡುತ್ತೇನೆ ಎಂದಿದ್ದಾರೆ. ಈ ನಡುವೆ ಸಿ.ಡಿ ಯುವತಿಯ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಯುವತಿ ರಮೇಶ್ ಜಾರಕಿಹೊಳಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನನಗೆ ಬದುಕ ಬೇಕಾ ಸಾಯಬೇಕೋ ಒಂದು ಗೊತ್ತಾಗುತ್ತಿಲ್ಲ, ಮಾರ್ಚ್ 2 ರಂದು ನಮ್ಮ ಸಿಡಿ ಬಿಡುಗಡೆ ಆಗುತ್ತದೆ. ಆಗ ನಾನು ತುಂಬಾ ಹೆದರಿದ್ದೆ. ನನಗೆ ಪತ್ರಕರ್ತರಲ್ಲಿ ನರೇಶ್ ಮಾತ್ರನೇ ಪರಿಚಯವಿದ್ದದ್ದು. ನೀವು ನನಗೆ ನ್ಯಾಯ ಕೊಡಿಸ್ತೀನಿ ಅಂದಿದ್ರಿ. ಆದರೆ ಈಗ ಸಿ.ಡಿ ರಿಲೀಸ್ ಆಗಿದೆ ಎಂದು ಹೇಳಿಕೊಂಡಿದ್ದೆ. ಅದಕ್ಕೆ ನರೇಶ್, ಇಂತಹ ವಿಚಾರದಲ್ಲಿ ನಾನಿನ್ನು ಚಿಕ್ಕವನು.ರಾಜಕೀಯ ಸಪೋರ್ಟ್ ಬೇಕಾಗುತ್ತೆ. ಡಿಕೆ ಶಿವಕುಮಾರ್ , ಸಿದ್ಧರಾಮಯ್ಯ ಅವರ ಸಪೋರ್ಟ್ ಕೇಳೋಣ ಅಂದಿದ್ದರು. ಅಲ್ಲದೆ ಡಿ.ಕೆ ಶಿವಕುಮಾರ್ ಮನೆಗೆ ಹೋಗಿದ್ದಿವಿ ಆದರೆ ಅವರು ಸಿಕ್ಕಿರಲಿಲ್ಲ. ಈ 24 ದಿನದಿಂದ ನನಗೆ ಅದೆಷ್ಟು ಟಾರ್ಚರ್‌ ಆಗ್ತಿದೆ ಅಂದ್ರೆ ನಾನು ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ ನಾಲ್ಕನೇ ವಿಡಿಯೋಗೆ ರಮೇಶ್ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಶನಿವಾರ ಸಂಜೆ ದೊಡ್ಡ ಮಟ್ಟದ ಸುದ್ದಿ ಕೊಡುತ್ತೇನೆ ಎಂದು ಹೇಳಿರುವುದರಿಂದ ಅವರ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಒಂದು ಕಡೆಯಲ್ಲಿ ಎಸ್‌ಐಟಿ ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿದೆ. ಮತ್ತೊಂದು ಕಡೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಯುವತಿ ಕಡೆಯಿಂದ ವಿಡಿಯೋ ,ಆಡಿಯೋ ಬಿಡುಗಡೆ ಸದ್ದು ಜೋರಾಗುತ್ತಿದೆ. ಅಲ್ಲದೆ ದಿನದಿಂದ ದಿನಕ್ಕೆ ಈ ಪ್ರಕರಣ ನಾನಾ ರೀತಿಯ ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಿದೆ. ಒಟ್ನಲ್ಲಿ ರಮೇಶ್ ಶನಿವಾರ ಸಂಜೆ ಬಿಡುಗಡೆ ಮಾಡುವ ದೊಡ್ಡ ಸುದ್ದಿಯತ್ತ ಎಲ್ಲರ ಚಿತ್ತ ಇದೆ.


from India & World News in Kannada | VK Polls https://ift.tt/3lZmbWS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...