IND vs ENG Live Score: ನಟರಾಜನ್‌ ಕಣಕ್ಕಿಳಿಸಿದ ಭಾರತ!

ಅಹ್ಮದಾಬಾದ್: ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಸತತ ಮೂರನೇ ಬಾರಿ ಟಾಸ್‌ ಸೋತಿದ್ದಾರೆ. ಪರಿಣಾಮ ಮೂರನೇ ಹಾಗೂ ಸರಣಿ ನಿರ್ಣಾಯಕ ಮಹತ್ವ ಪಡೆದಿರುವ ಕೊನೆಯ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್‌ ಮಾಡುವಂತ್ತಾಗಿದೆ. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಭಾರತ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತ್ತಾಯಿತು. ಅನುಭವಿ ಓಪನರ್‌ಗಳಾದ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ಇನಿಂಗ್ಸ್‌ ಆರಂಭಿಸಿದರು. 5 ಓವರ್‌ಗಳ ಮುಕ್ತಾಯಕ್ಕೆ ಭಾರತ ವಿಕೆಟ್‌ ನಷ್ಟವಿಲ್ಲದೆ 36 ರನ್‌ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಭಾರತ ತಂಡದಲ್ಲಿ 1 ಬದಲಾವಣೆಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ನಿರ್ಣಾಯಕ ಮಹತ್ವ ಪಡೆದಿರುವ ಅಂತಿಮ ಹಣಾಹಣಿಯಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತ್ತಾದ ಭಾರತ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಕಳೆದ ಎರಡು ಪಂದ್ಯಗಳಲ್ಲಿ ದುಬಾರಿ ಎನಿಸಿದ್ದ ಚೈನಾಮನ್ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರನ್ನು ಕೈಬಿಟ್ಟು ಡೆತ್‌ ಓವರ್‌ಗಳಲ್ಲಿ ಇಂಗ್ಲೆಂಡ್‌ ರನ್‌ ದಾಹಕ್ಕೆ ಕಡಿವಾಣ ಹಾಕಲು ಎಡಗೈ ವೇಗಿ ಟಿ ನಟರಾಜನ್ ಅವರನ್ನು ಆಡಿಸಲಾಯಿತು. ಇಂಗ್ಲೆಂಡ್‌ ಕೂಡ ಒಂದು ಬದಲಾವಣೆ ತಂದು ಆಲ್‌ರೌಂಡರ್‌ ಟಾಮ್ ಕರ್ರನ್ ಬದಲಿಗೆ ವೇಗಿ ಮಾರ್ಕ್ ವುಡ್‌ ಅವರನ್ನು ಆಡಿಸಿದೆ. ಭಾರತ-ಇಂಗ್ಲೆಂಡ್‌ ನಡುವಣ 3ನೇ ಒಡಿಐ ಪಂದ್ಯದ ಇತ್ತಂಡಗಳ ಪ್ಲೇಯಿಂಗ್‌ ಇಲೆವೆನ್ ಹೀಗಿದೆ ಟೀಮ್ ಇಂಡಿಯಾ: ರೋಹಿತ್ ಶರ್ಮಾ, ಶಿಖರ್ ಧವನ್, (ನಾಯಕ), ಕೆ.ಎಲ್. ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ಕ್ರುಣಾಲ್ ಪಾಂಡ್ಯ, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ಪ್ರಸಿಧ್ ಕೃಷ್ಣ, ಟಿ. ನಟರಾಜನ್ : ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಡಾವಿಡ್ ಮಲನ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್‌ / ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಆದಿಲ್ ರಶೀದ್, ರೀಸ್ ಟಾಪ್ಲೀ, ಮಾರ್ಕ್ ವುಡ್. ಸಮಬಲದ ಹೋರಾಟ: ಸರಣಿಯ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದರೂ ಕೂಡ ಭಾರತ ತಂಡ 317 ರನ್‌ ದಾಖಲಿಸಿ ಎದುರಾಳಿಯನ್ನು 251ಕ್ಕೆ ಆಲ್ಔಟ್‌ ಮಾಡುವ ಮೂಲಕ 66 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದಕ್ಕೆ ಅದ್ಭುತವಾಗೇ ತಿರುಗೇಟು ನೀಡಿದ ಇಂಗ್ಲೆಂಡ್, ಎರಡನೇ ಪಂದ್ಯದಲ್ಲಿ ಭಾರತ ತಂಡ ನೀಡಿದ 337 ರನ್‌ಗಳ ಗುರುಯನ್ನು ಕೇವಲ 43.3 ಓವರ್‌ಗಳಲ್ಲಿ ಮೆಟ್ಟಿನಿಂತು 6 ವಿಕೆಟ್‌ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wgEP18

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...