ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಎಸ್‌ಐಟಿ ಯಾರ ಒತ್ತಡ, ಪ್ರಭಾವಕ್ಕೆ ತಲೆಕೆಡಿಸಿಕೊಳ್ಳದೆ ತನಿಖೆ ನಡೆಸುತ್ತದೆ ಎಂದು ಗೃಹ ಸಚಿವ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಸರಣಿಯಾಗಿ ಬಿಡುಗಡೆಗೊಂಡ ವಿಡಿಯೋ, ಆಡಿಯೋ ಹಾಗೂ ಸಿಡಿ ಇಟ್ಟುಕೊಂಡು ಎಸ್‌ಐಟಿ ಪರಿಶೀಲನೆ ನಡೆಸಲಿದೆ. ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಸಮಗ್ರವಾಗಿ ತನಿಖೆ ನಡೆಸಲಿದೆ ಎಂದು ತಿಳಿಸಿದರು. ಯಾವುದೇ ರೀತಿಯ ಒತ್ತಡ ಪ್ರಭಾವಕ್ಕೆ ಮಣಿದು ದಾರಿ ತಪ್ಪಿಸುವ ಕೆಲಸ ಎಸ್‌ಐಟಿಯಿಂದ ಆಗಲ್ಲ, ಕಾನೂನು ಬದ್ಧವಾಗಿ ಎಸ್‌ಐಟಿ ತನಿಖೆ ಮಾಡುತ್ತದೆ. ಸತ್ಯಾಸತ್ಯತೆ ತಿಳಿದುಕೊಂಡು ಈ ಪ್ರಕರಣದ ತನಿಖೆ ನಡೆಯಲಿದೆ ಎಂದರು. ಒತ್ತಡಕ್ಕೆ ವಿಶೇಷ ತನಿಖಾ ತಂಡ ತಲೆಕೆಡಿಸಕೊಳ್ಳುವುದಿಲ್ಲ, ನಿಷ್ಠುರವಾಗಿ ಸತ್ಯವನ್ನು ಕಂಡು ಹಿಡಿಯಲು ಎಸ್‌ಐಟಿ ಕ್ರಮ ಕೈಗೊಳ್ಳಲಿದೆ ಎಂದರು. ಸಿ.ಡಿ ಪ್ರಕರಣ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದ್ದು ಯುವತಿ ರಮೇಶ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದೀಗ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದಾರೆ.
from India & World News in Kannada | VK Polls https://ift.tt/3lZqami