'ನಾವು ನಿರ್ಧಾರ ತೆಗೆದುಕೊಳ್ಳುವವರಲ್ಲ' : 3ನೇ ಅಂಪೈರ್‌ ವಿರುದ್ಧ ಕೃಷ್ಣ ಬೇಸರ!

ಪುಣೆ: ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಓಡಿಐ ಸರಣಿಯ ಎರಡನೇ ಹಣಾಹಣಿಯಲ್ಲಿ ರನ್‌ಔಟ್‌ ಆಗಿದ್ದರೂ ಮೂರನೇ ಅಂಪೈರ್‌ ನಾಟ್‌ಔಟ್‌ ನೀಡಿದ್ದ ಬಗ್ಗೆ ಯುವ ವೇಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ರನ್‌ಔಟ್‌ ಆಗಿದ್ದರು. ಆದರೆ, ಮೂರನೇ ಅಂಪೈರ್‌ ನಾಟ್‌ಔಟ್‌ ಎಂದೇ ತೀರ್ಪು ಹೊರಡಿಸಿದರು. ನಿಯಮಗಳ ಪ್ರಕಾರ ಬ್ಯಾಟ್ ಕ್ರೀಸ್‌ನ ಒಳಗೆ ಕೊಂಚವಾದರೂ ಇರಬೇಕು. ಬೇಲ್ಸ್‌ ಹಾರಿಸಿದ ಸಂದರ್ಭದಲ್ಲಿ ಗೆರೆಯ ಮೇಲೆ ಬ್ಯಾಟ್‌ ಇದ್ದರೂ ಕೂಡ ಅದನ್ನು ಔಟ್‌ ಎಂದೇ ತೀರ್ಮಾನಿಸಲಾಗುತ್ತದೆ. ಸ್ಟಂಪಿಂಗ್ ವಿಚಾರದಲ್ಲಿ ಅದೆಷ್ಟೋ ಬಾರಿ ಬ್ಯಾಟ್ಸ್‌ಮನ್‌ಗಳು ಗೆರೆ ಮೇಲೆ ಕಾಲಿಟ್ಟಿದ್ದರೂ ಔಟ್‌ ತೀರ್ಪನ್ನೇ ನೀಡಲಾಗಿದೆ. ಆದರೆ, ರನ್‌ಔಟ್‌ ವಿಚಾರದಲ್ಲಿ ಈಗ ಸ್ಟೋಕ್ಸ್‌ ಬ್ಯಾಟ್‌ ಗೆರೆ ಮೇಲಷ್ಟೇ ಇದ್ದರೂ ನಾಟ್‌ಔಟ್‌ ನೀಡಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇನಿಂಗ್ಸ್‌ನ 26ನೇ ಓವರ್‌ನಲ್ಲಿ ಆದ ಘಟನೆಯದು. ಡೀಪ್‌ ಮಿಡ್‌ವಿಕೆಟ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಕುಲ್ದೀಪ್‌ ಯಾದವ್‌ ವಿಕೆಟ್‌ಗೆ ನೇರವಾಗಿ ಚೆಂಡನ್ನು ಹೊಡೆದಿದ್ದರು. ಟೀಮ್ ಇಂಡಿಯಾ ಆಟಗಾರರ ಮನವಿ ಮೇರೆಗೆ ರನ್‌ಔಟ್‌ ಪರಿಶೀಲಿಸಲು ಆನ್‌ಫೀಲ್ಡ್‌ ಅಂಪೈರ್‌ ಮೂರನೇ ಅಂಪೈರ್‌ ನೆರವು ತೆಗೆದುಕೊಂಡರು. ಟಲಿವಿಷನ್ ರೀ-ಪ್ಲೇಗಳಲ್ಲಿ ಸ್ಟೋಕ್ಸ್‌ ಗೆರೆ ದಾಟದೇ ಇರುವುದು ಸ್ಪಷ್ಟವಾಗಿತ್ತು. ಆದರೆ ಮೂರನೇ ಅಂಪೈರ್‌ ನಾಟ್‌ಔಟ್‌ ಎಂದೇ ಸೂಚಿಸಿದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಸಿಧ್‌ ಕೃಷ್ಣ, "ನಾವು ಇಲ್ಲಿ ನಿರ್ಧಾರ ತೆಗೆದುಕೊಳ್ಳುವವರಲ್ಲ, ಇದಕ್ಕೆ ಸೂಕ್ತ ವ್ಯಕ್ತಿ ಅಲ್ಲಿ ಕುಳಿತಿದ್ದು, ಅವರಿಗೆ ಅನಿಸಿದ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ನಾವು ಹೆಚ್ಚಾಗಿ ಕಾಮೆಂಟ್‌ ಮಾಡುವುದಿಲ್ಲ," ಎಂದು ಹೇಳಿದರು. ಸ್ಟೋಕ್ಸ್ ರನ್‌ಔಟ್‌ ನಾಟ್‌ಔಟ್‌ ಕೊಟ್ಟಿದ್ದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್‌ ಆಗಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ಅವರು ಕೇವಲ 52 ಎಸೆತಗಳಲ್ಲಿ 190.38ರ ಸ್ಟ್ರೈಕ್‌ರೇಟ್‌ನೊಂದಿಗೆ 10 ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ ಒಟ್ಟು 99 ರನ್‌ ಸಿಡಿಸಿದ್ದರು. ಆ ಮೂಲಕ ಇಂಗ್ಲೆಂಡ್‌ ಬಹುಬೇಗ ಗುರಿ ಮುಟ್ಟಲು ಸಾಧ್ಯವಾಗಿತ್ತು. "ನಾವು ಉತ್ತಮವಾಗಿ ಬೌಲಿಂಗ್‌ ಮಾಡಬಹುದಿತ್ತು, ಈ ಸತ್ಯವನ್ನು ನಿರಾಕರಿಸುತ್ತಿಲ್ಲ ಆದರೆ ಅವರು ಆಡಿದ ರೀತಿಗೆ ನಾವು ಮನ್ನಣೆ ನೀಡಬೇಕಾಗಿದೆ. ನಮ್ಮ ಮೇಲೆ ಅವರು ನಡೆಸಿದ ಹಲ್ಲೆ ತುಂಬಾ ಕೆಟ್ಟದಾಗಿತ್ತು," ಎಂದ ಕೃಷ್ಣ, "ಎರಡನೇ ಪವರ್‌ಪ್ಲೇನಲ್ಲಿ ಕೇವಲ ನಾಲ್ಕು ಫೀಲ್ಡರ್‌ಗಳು ಸರ್ಕಲ್‌ನಿಂದ ಹೊರಗಡೆ ಇದ್ದ ಕಾರಣ, ಇಂತಹ ಪ್ಲ್ಯಾಟ್ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ತಡೆ ಹಿಡಿಯುವುದು ತುಂಬಾ ಕಷ್ಟ," ಎಂದು ಹೇಳಿದರು. "ಇವತ್ತಿನ ವೈಟ್‌ ಬಾಲ್ ಕ್ರಿಕೆಟ್‌ ಈ ರೀತಿ ಇದೆ. 11 ರಿಂದ 40 ಓವರ್‌ಗಳವರೆಗೆ ನಾಲ್ಕು ಪೀಲ್ಡರ್‌ಗಳು ಮಾತ್ರ ಹೊಡಗಡೆ ಇದ್ದಾಗ ಇಂತಹ ಘಟನೆಗಳು ಸಂಭವಿಸುತ್ತವೆ. ಬ್ಯಾಟಿಂಗ್‌ಗೆ ಈ ಪಿಚ್‌ ತುಂಬಾ ಚನ್ನಾಗಿತ್ತು, ಇದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂ ತಂಡಗಳು ಗಳಿಸಿರುವ ರನ್‌ ಇದಕ್ಕೆ ಸಾಕ್ಷಿ. ನಾವು 330ಕ್ಕೂ ಹೆಚ್ಚಿನ ರನ್‌ಗಳನ್ನು ಗಳಿಸಿದ್ದೆವು ಹಾಗೂ ಅವರು 44ನೇ ಓವರ್‌ನಲ್ಲಿ ಪಂದ್ಯ ಮುಗಿಸಿದರು. ಇದು ಪ್ಲ್ಯಾಟ್‌ ವಿಕೆಟ್ ಆಗಿರುವ ಹಿನ್ನೆಲೆಯಲ್ಲಿ ಬೌಲರ್‌ಗಳಿಗೆ ಸವಾಲುದಾಯಕವಾಗಿರುತ್ತದೆ," ಎಂದು ಪ್ರಸಿದ್ಧ ಕೃಷ್ಣ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3snvIcx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...