‘ಬಿಜೆಪಿ ಅಧಿಕಾರದಲ್ಲಿರೋದ್ರಿಂದ ಯುವತಿಯಿಂದ ಏನು ಬೇಕಾದ್ರೂ ಹೇಳಿಕೆ ಕೊಡಿಸಲಿ. ಐ ಡೋಂಟ್‌ ಕೇರ್‌’-ಡಿಕೆಎಸ್‌

ಕಲಬುರಗಿ: ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಿಡಿ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ. ಈ ಸಂಬಂಧ ಬಸವಕಲ್ಯಾಣದ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯೆ ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರದಲ್ಲಿ ನಾನು ಏನೂ ಮಾತನಾಡುವುದಿಲ್ಲ. ಏನು ಹೇಳಿಕೆ ನೀಡಬೇಕಾಗಿತ್ತು. ಈಗಾಗಲೇ ನನ್ನ ಹೇಳಿಕೆ ನೀಡಿದ್ದೇನೆ. ಬಿಜೆಪಿ ಅಧಿಕಾರದಲ್ಲಿರುವುದರಿಂದ ವಾಸ್ತವವಾಗಿ ಯುವತಿಯ ಕುಟುಂಬದವರಿಂದ ಅಥವಾ ಯುವತಿಯಿಂದ ಏನು ಬೇಕಾದರೂ ಹೇಳಿಕೆ ಕೊಡಿಸಬಹುದು ಐ ಡೋಂಟ್ ಕೇರ್ ಎಂದು ಪ್ರತಿಕ್ರಿಯಿಸಿದರು. ಸಿ.ಡಿ ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿರುವುದಕ್ಕೆ ಹೆಚ್ಚೇನೂ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಎಸ್‌ಐಟಿಯಿಂದ ಸರಿಯಾಗಿ ತನಿಖೆಯಾಗಿ ಯುವತಿಗೆ ನ್ಯಾಯ ಸಿಗಬೇಕು ಎಂದರು. ಯುವತಿಯ ಕುಟುಂಬದವರು ಡಿಕೆಶಿ ವಿರುದ್ಧ ಆರೋಪ ಮಾಡುತ್ತಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಈ ಪ್ರಶ್ನೆಗೆ ನಾನು ಉತ್ತರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇನ್ನು ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಮತಗಳ ವಿಭಜನೆಯ ಬಳಿಕವೂ ನಾವು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಸಹಜವಾಗಿಯೇ ಮತದಾರರ ಮೇಲೆ ಒತ್ತಡ ಹೇರುವ ಅಥವಾ ಸಾಂಪ್ರದಾಯಿಕ ಮತಗಳ ಸೆಳೆಯುವ ಎಲ್ಲ ರೀತಿಯ ಪ್ರಯತ್ನ ಮಾಡುತ್ತದೆ. ಆ ನಿಟ್ಟಿನಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೂಡ ತನ್ನ ತಂತ್ರ ಹೆಣೆಯಲಿದೆ ಎಂದರು.


from India & World News in Kannada | VK Polls https://ift.tt/3djOv1X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...