ಹಾಸನ: ಬಸ್‌ ನಿಲ್ಧಾಣದಲ್ಲಿ ಪೋಷಕರೊಂದಿಗೆ ಮಲಗಿದ್ದ 5 ವರ್ಷದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ

ಹಾಸನ: ಪೋಷಕರೊಂದಿಗೆ ಮಲಗಿದ್ದ ಐದು ವರ್ಷದ ಅಪ್ರಾಪ್ತ ಬಾಲಕಿಯನ್ನು ಹೆಗಲ ಮೇಲೆ ಹೊತ್ತೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ದುಷ್ಕೃತ್ಯ ನಗರದ ಹೊಸ ಬಸ್‌ನಿಲ್ದಾಣದಲ್ಲಿ ಶನಿವಾರ ರಾತ್ರಿ ನಡೆದಿದೆ. ರಾಮನಗರಕ್ಕೆ ತೆರಳಲು ಬಂದ ಭಿಕ್ಷುಕ ದಂಪತಿಗಳು ರಾತ್ರಿಯಾದ್ದರಿಂದ ಬಸ್‌ ಸಿಗದೆ ಮಗುವನ್ನು ಮಲಗಿಸಿಕೊಂಡು ಮಲಗಿದ್ದರು. ಆ ವೇಳೆ ಆಗಮಿಸಿದ ಕಾಮುಕ ಮಗುವನ್ನು ಹೊತ್ತೊಯ್ದು ನೀಚಕೃತ್ಯ ಎಸಗಿದ್ದಾನೆ ಎಂದು ಎಎಸ್‌ಪಿ ನಂದಿನಿ ತಿಳಿಸಿದರು. ನಿದ್ರೆಯಿಂದ ಎಚ್ಚೆತ್ತ ಪೋಷಕರು ಮಗುವಿಗಾಗಿ ಹುಡುಕಾಡಿದ ವೇಳೆ ಅಳುತ್ತಿದ್ದ ಮಗು ಪತ್ತೆಯಾಗಿದೆ. ಹೆಗಲ ಮೇಲೆ ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/3fmj21T

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...