ರಾಮನಗರ: ವಿರೋಧಿಸಿ ಭಾನುವಾರ ಮೇಕೆದಾಟು ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಕೆಲವರು ನಡೆಸಲು ಮುಂದಾಗಿದ್ದರು. ತಮಿಳುನಾಡಿನ ಕಾವೇರಿ ರೈತರ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಾಂಡೇಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಸಿದ್ದಂತೆಗಳು ನಡೆದಿದ್ದವು. ಆದರೆ, ತಮಿಳುನಾಡಿನ ತಾಂಜಾವೂರಿನಲ್ಲಿ ತಮಿಳುನಾಡು ಪೊಲೀಸರೆ ಪಾಂಡೇಯನ್ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದಿದ್ದಾರೆ. ಆದರೂ, ಮುನ್ನೆಚರಿಕಾ ಕ್ರಮವಾಗಿ ಕೋಡಿಹಳ್ಳಿ ಹಾಗು ಸಾತನೂರು ಪೊಲೀಸರನ್ನು ಮೇಕೆದಾಟು ಅರಣ್ಯ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಹೀಗಾಗಿ , ಅರಣ್ಯ ಪ್ರದೇಶಕ್ಕೆ ಏಂಟ್ರಿ ಆಗಲು ಪ್ರವಾಸಿಗರು ಪರದಾಡುತ್ತಿದ್ದಾರೆ. ಪ್ರತಿ ವಾಹನವನ್ನು ತಪಾಸಣೆ ನಡೆಸಲಾಗುತ್ತಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಕೋಟ್.. ಪಾಂಡೇಯನ್ ಸೇರಿದಂತೆ 6 ಟೋಂಪೊದಲ್ಲಿ ಆತನ ಬೆಂಬಲಿಗರು ಮೇಕೆದಾಟುವಿನಲ್ಲಿ ಪ್ರತಿಭಟನೆ ನಡೆಸಲು ಬರುತ್ತಿದ್ದರು. ಅವರನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನ್ನೆಚರಿಕಾ ಕ್ರಮವಾಗಿ ಬಿಗಿ ಭಧ್ರತೆ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ರಾಮನಗರದ ಕನಕಪುರ ವೃತ್ತದ ಕೋಡಿಹಳ್ಳಿ ಠಾಣೆ ಸರದಿನಲ್ಲಿ ಕೊಳಗೊಂಡ ಹಳ್ಳಿ, ಹುಣಸನಹಳ್ಳಿ ,ಕಾಡು ಶಿವನಹಳ್ಳಿ, ಸಾತನೂರು ಪೊಲೀಸ್ ಠಾಣೆಯ ಸರಹದ್ದಿನ ದೊಡ್ಡ ಹಾಲಳ್ಳಿ ,ಬೆಂಡ ಗೋಡು ,ಸಂಗಮ, ಮೇಕೆದಾಟು, ಹೊನಗಳ್ಳಿ , ಸೂಕ್ತ ರೀತಿಯ ಬಂದೋಬಸ್ಥ್ ಮಾಡಿಕೊಳ್ಳಲಾಗಿದೆ. ಡಿವೈಎಸ್ಪಿ ಚನ್ನಪಟ್ಟಣ 5 ಮಂದಿ ಇನ್ಸೆಪೆಕ್ಟರ್ 12 ಪಿಎಸ್ಐ 25 ಎಎಸ್ಐ ಹಾಗೂ 106 ಸಿಬ್ಬಂದಿ ಇದ್ದಾರೆ
from India & World News in Kannada | VK Polls https://ift.tt/39lYDGe