
ಚಂಡೀಗಢ: ಕೇಂದ್ರ ಕೃಷಿ ಕಾಯಿದೆಗಳ ವಿರುದ್ಧದ ರೈತ ಪ್ರತಿಭಟನೆಯ ಬಿಸಿ ಪಂಜಾಬ್‌ನಲ್ಲಿಇನ್ನಷ್ಟು ತೀವ್ರಗೊಂಡಿದೆ. ಮುಕ್ತಸರ್ ಜಿಲ್ಲೆಯ ಮಾಲೌಟ್‌ನಲ್ಲಿ ರೈತರ ಗುಂಪೊಂದು ಶನಿವಾರ ಬಿಜೆಪಿ ಶಾಸಕರೊಬ್ಬರ ಮೇಲೆ ಹಲ್ಲೆನಡೆಸಿ, ಬಟ್ಟೆ ಹರಿದು ಹಾಕಿದೆ. ಕಳೆದ ಹಲವು ತಿಂಗಳುಗಳಿಂದ ಬಿಜೆಪಿ ನಾಯಕರ ವಿರುದ್ಧ ರಾಜ್ಯದಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದ ನಾಯಕರ ಯಾವುದೇ ಕಾರ್ಯಕ್ರಮಕ್ಕೂ ಪ್ರತಿಭಟನಾಕಾರರು ಅವಕಾಶ ನೀಡುತ್ತಿಲ್ಲ. ಈ ವ್ಯತಿರಿಕ್ತ ಸನ್ನಿವೇಶದ ನಡುವೆಯೇ ಸುದ್ದಿಗೋಷ್ಠಿ ನಡೆಸಲು ಸ್ಥಳೀಯ ಮುಖಂಡರ ಜತೆ ಮಾಲೌಟ್‌ಗೆ ಬಂದ ಅಬೋಹರ್ ಕ್ಷೇತ್ರದ ಅವರ ಮೇಲೆ ಮುಗಿಬಿದ್ದರು. ಅವರ ಮೇಲೆ ಕಪ್ಪು ಮಸಿ ಸುರಿದು ಪ್ರತಿಭಟಿಸಿದರು. ನೂಕುನುಗ್ಗಾಟದಲ್ಲಿ ಶಾಸಕರ ಬಟ್ಟೆ ಹರಿದು ಹೋಗಿದ್ದು ಕಾರು ಕೂಡ ಜಖಂಗೊಂಡಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು, ತೀವ್ರ ಕಸರತ್ತು ನಡೆಸಿ ಶಾಸಕರನ್ನು ಪಾರು ಮಾಡಿದರು. ಸ್ಥಳೀಯ ಅಂಗಡಿಯೊಂದಕ್ಕೆ ಅವರನ್ನು ಕರೆದೊಯ್ದು ರಕ್ಷಣೆ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಯಕ್ತ ಕಿಸಾನ್ ಮೋರ್ಚಾವು ಘಟನೆಯನ್ನ ಖಂಡಿಸಿದ್ದು, ರೈತರು ತಾಳ್ಮೆ ಕಳೆದುಕೊಳ್ಳದೆ ಸಹನೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದೆ.
from India & World News in Kannada | VK Polls https://ift.tt/3tZ9m1p