
ಹುಬ್ಬಳ್ಳಿ: ಅಶ್ಲೀಲ ಸಿಡಿ ವಿಚಾರವಾಗಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಇದರಿಂದ ಸತ್ಯಾಂಶ ಹೊರಬರಲಿದೆ ಎಂದು ಕೈಗಾರಿಕೆ ಸಚಿವ ಹೇಳಿದರು. ನಗರದಲ್ಲಿ ಇಂದು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ. ತನಿಖೆ ಪೂರ್ಣ ಆಗಿ ಸತ್ಯಾಂಶ ಹೊರಬರಲಿ ಎಂದರು. ಇನ್ನು ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಯಿಂದ ಎಲ್ಲವೂ ಹೊರಬರಲಿದೆ ಎಂದರು. ಇನ್ನು ಸರ್ಕಾರವೇ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಅನ್ನೋ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶೆಟ್ಟರ್ ‘ನೋ ಕಮೆಂಟ್, ನೋಡೋಣ ನೋಡೋಣ ಎಂದು ಮುಂದೆ ನಡೆದರು. ಶನಿವಾರ ಬೆಳಗ್ಗೆ ನಾಲ್ಕನೇ ಸಿ.ಡಿ ಬಿಡುಗಡೆ ಮಾಡಿದ್ದ ಸಿ.ಡಿ ಯುವತಿ, ಸುಮಾರು 4 ನಿಮಿಷ 27 ಸೆಕೆಂಡ್‌ನ ವಿಡಿಯೋದಲ್ಲಿ ‘ನನಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಟಾರ್ಚರ್ ಆಗ್ತಿದೆ. ನನಗೆ ಬದುಕ್ಬೇಕೋ ಸಾಯ್ಬೇಕೋ ಒಂದೂ ಗೊತ್ತಾಗ್ತಿಲ್ಲ. ನನ್ನ ತಂದೆ ತಾಯಿ ಅಜ್ಜಿ ತಮ್ಮಂದಿರು ಇರುವ ಕಡೆ ರಕ್ಷಣೆ ಬೇಡ. ಅವರನ್ನು ಬೆಂಗಳೂರಿಗೆ ಕರೆತಂದು ರಕ್ಷಣೆ ಕೊಡಿ ಎಂದು ಅಳಲು ತೋಡಿಕೊಂಡಿದ್ದಳು.
from India & World News in Kannada | VK Polls https://ift.tt/3d6MeHs