ರೈಲ್ವೆ ಡಿವಿಷನ್‌ಗೆ ಒಪ್ಪಿಗೆ ನೀಡಿ ಕೈ ಬಿಟ್ಟ ಕೇಂದ್ರ! ಕಲಬುರಗಿ ಜನರ ಬಹುಕಾಲದ ಕನಸಿಗೆ ಕೊಳ್ಳಿ ಇಟ್ಟ ಮೋದಿ ಸರ್ಕಾರ

ವೆಂಕಟೇಶ ಏಗನೂರು ಕಲಬುರಗಿ: ರೈಲ್ವೆ ಡಿವಿಷನ್‌ ಬಗ್ಗೆ ಮತ್ತೊಂದು ಸತ್ಯಾಂಶ ಬಯಲಿಗೆ ಬಂದಿದೆ. ನಿಯಮ ಬದ್ಧವಾಗಿ ಕಲಬುರಗಿ ರೈಲ್ವೆ ಡಿವಿಷನ್‌ ಘೋಷಿಸಿ ಕಾನೂನು ಪ್ರಕಾರ ಸರಕಾರಿ ಪ್ರಕ್ರಿಯೆ ಕೈಗೊಂಡ ಬಳಿಕವೂ ಯೋಜನೆ ಕೈ ಬಿಟ್ಟಿರುವುದು ಕೇಂದ್ರದ ಮುಖವಾಡ ಕಳಚಿದಂತಾಗಿದೆ. ಯೋಜನೆಗೆ ರೈಲ್ವೆ ಅನುಮೋದನೆ ನೀಡಿ, ಕಟ್ಟಡಕ್ಕಾಗಿ ಟೆಂಡರ್‌ ಕರೆದು ಬಳಿಕ ಕೈ ಬಿಟ್ಟಿರುವುದು ಒಂದೆಡೆಯಾದರೆ, ಡಿವಿಷನ್‌ಗೆ ಯಾವ ಯಾವ ಭಾಗಗಳನ್ನು ಸೇರಿಸಬೇಕು ಎಂದು ನಿರ್ಧರಿಸಿ ವ್ಯಾಪ್ತಿ ಕೂಡ ಫಿಕ್ಸ್‌ ಮಾಡಲಾಗಿತ್ತು. ಇಷ್ಟಾದ ಬಳಿಕವೂ ಯೋಜನೆ ಕೈ ಬಿಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ರೈಲ್ವೆ ವಿಭಾಗ ಯೋಜನೆ ರದ್ದುಗೊಳಿಸಿರುವುದಕ್ಕೆ ಈಗಾಗಲೇ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನುಮೋದನೆ ನೀಡಿ, ವ್ಯಾಪ್ತಿಯ ನೀಲನಕ್ಷೆ ತಯಾರಿಸಿ, ಭೂಮಿ ಮಂಜೂರು ಮಾಡಿಯೂ ಸದ್ಯಕ್ಕೆ ಕೈ ಬಿಟ್ಟಿರುವುದು ರೈಲ್ವೆ ಬೋರ್ಡ್‌ ಒಪ್ಪಿಕೊಂಡಿದ್ದು, ಈ ಯೋಜನೆ ಮತ್ತೆ ಚಿಗುರೊಡೆಯಲು ಪಕ್ಷಾತೀತ ಹೋರಾಟ ಅನಿವಾರ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಕಲಬುರಗಿ ರೈಲ್ವೆ ವಿಭಾಗ ಆರಂಭವಾಗಬೇಕು ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯಂತೆ ಕೇಂದ್ರ ಸರಕಾರ 2014ರಲ್ಲಿ ರೈಲ್ವೆ ವಿಭಾಗ ಮಂಜೂರಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಈ ಯೋಜನೆ ಕೈ ಬಿಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ತಿಳಿಸಿದ್ದರಿಂದ ಈ ಭಾಗದಲ್ಲಿ ಆಕ್ರೋಶ ವ್ಯಕ್ತವಾಗಿದೆ. ವ್ಯಾಪ್ತಿ ಹೇಗಿತ್ತು ?2014ರಲ್ಲಿ ಅನುಮೋದನೆ ನೀಡಿದ ನೀಲನಕ್ಷೆಯಲ್ಲಿ ವಾಡಿ-ವಿಕಾರಬಾದ್‌, ವಾಡಿ-ರಾಯಚೂರು, ವಾಡಿ-ಹೊಟಗಿ, ಹೊಟಗಿ- ಬಾಗಲಕೋಟ ಮತ್ತು ಹೊಸ ಲೈನ್‌ಗಳ ಸೇರ್ಪಡೆ ರಾಯಚೂರು -ಗಿಣಗೇರಾ, ವಾಡಿ-ಗದಗ, ಕಲಬುರಗಿ- ಖಾನಾಪುರ ರೂಟ್‌ಗಳನ್ನು ಈ ರೈಲ್ವೆ ವಿಭಾಗಕ್ಕೆ ಸೇರಿಸಲಾಗಿತ್ತು. ಹೊಸ ಯೋಜನೆಗಳನ್ನು ಮಾತ್ರ ಅನುಮೋದನೆ ಪಡೆಯುವುದು ಬಾಕಿಯಿತ್ತು. ರೈಲ್ವೆ ವಿಭಾಗಕ್ಕಾಗಿಯೇ ರಾಜ್ಯ ಸರಕಾರ 43 ಎಕರೆಯನ್ನು ಒದಗಿಸಿದೆ. ಆದರೂ ಯೋಜನೆಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ. ಮೂರು ವಿಭಾಗಗಳಲ್ಲಿ ಹಂಚಿಕೆ ಕಲ್ಯಾಣ ಕರ್ನಾಟಕ ಪ್ರದೇಶವು ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯೆ ರೈಲ್ವೆ ಹಾಗೂ ಸೆಂಟ್ರಲ್‌ ವೆಸ್ಟರ್ನ್‌ ರೈಲ್ವೆಯ ಮೂರು ವಲಯಗಳಲ್ಲಿ ವಿಭಜನೆಯಾಗಿರುವುದರಿಂದ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ವಿಶಾಖಪಟ್ಟಂ ಹೊಸ ವಲಯ ನಿರ್ವಹಿಸಿದರೆ ಮತ್ತಷ್ಟು ತೊಂದರೆ ಈ ಭಾಗದ ಜನರು ಅನುಭವಿಸಲಿದ್ದಾರೆ. ಅಭಿವೃದ್ಧಿಗೆ ಪಕ್ಷಾತೀತವಾಗಿ ಒಂದಾಗಿ ರೈಲ್ವೆ ವಿಭಾಗ ಕಚೇರಿ ಕಲಬುರಗಿಯಲ್ಲಿ ಆರಂಭಿಸುವುದನ್ನು ಕೇಂದ್ರ ರೈಲ್ವೆ ಸಚಿವಾಲಯ ಸದ್ಯಕ್ಕೆ ಕೈ ಬಿಡಲಾಗಿದೆ ಎಂದು ತಿಳಿಸಿರುವುದು, ಯೋಜನೆಗೆ ಜೀವಂತೆ ಇರುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಐದು ಸಂಸದರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಸೇರಿ ಪಕ್ಷಾತೀತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ನಿಯೋಗ ತೆರಳಿದರೆ ಯೋಜನೆ ಕೈ ಬಿಟ್ಟು ಹೋಗಲ್ಲಎಂಬುದು ಈ ಭಾಗದ ಸಾರ್ವಜನಿಕರ ಒತ್ತಾಯ.


from India & World News in Kannada | VK Polls https://ift.tt/3cY1BSE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...