ಶೃಂಗೇರಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ತಾಯಿಯೇ ಇಲ್ಲಿ ವಿಲನ್‌, ಹೇಗೆ?

ಆರಗ ರವಿ ಚಿಕ್ಕಮಗಳೂರುಶೃಂಗೇರಿ: ಕಾಯುವ ಕೈಗಳೇ ಕೊಂದು ಹಾಕಿದರೆ ಒಮ್ಮೆಗೇ ಜೀವವಾದರೂ ಹೋಗಿಬಿಡುತ್ತದೆ. ಆದರೆ, ಹೆತ್ತಮ್ಮನೇ ಮಗಳ ಬಾಳಿಗೆ ಘಟ ಸರ್ಪವಾಗಿ ಕಾಡಿದರೆ? ತಾಲೂಕಿನ ಗ್ರಾಮವೊಂದರಲ್ಲಿಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿಂದೆ ಇಂತಹ ಕ್ರೂರ ಕತೆ ಇದೆ. ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣದ ಬಗ್ಗೆ 2021 ಜನವರಿ 30ರಂದು ವಿಜಯ ಕರ್ನಾಟಕ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅದೇ ದಿನ ಎಫ್‌ಐಆರ್‌ ದಾಖಲಿಸಿದ ತನಿಖೆ ನಡೆಸುತ್ತ ಸಾಗಿದಂತೆ ಬೆಚ್ಚಿಬೀಳುವ ಸಂಗತಿಗಳು ಹೊರಬರುತ್ತಿವೆ. 30ಕ್ಕೂ ಹೆಚ್ಚು ದುರುಳರು 15 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿತ್ತು. 2020 ಸೆಪ್ಟಂಬರ್‌ 1ರಿಂದ 2021 ಜನವರಿ 27ರವರೆಗೆ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿದ್ದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಳು. ದೈಹಿಕವಾಗಿಯೂ ಕೃಶವಾಗಿರುವ, ಚಿಕ್ಕ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ 30 ಆರೋಪಿಗಳು ಸೇರಿದಂತೆ ಒಟ್ಟು 32 ಮಂದಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೆತ್ತಮ್ಮನೆಂಬ ಹೆಮ್ಮಾರಿ!ತಾಯಿಯೆಂದರೆ ಮಕ್ಕಳಿಗೆ ರಕ್ಷಣಾ ಬೇಲಿ ಇದ್ದಂತೆ. ಆದರೆ, ಈ ಪ್ರಕರಣದಲ್ಲಿ ಜನ್ಮಕೊಟ್ಟ ತಾಯಿಯೇ ಮಗಳ ಪಾಲಿನ ವಿಲನ್‌. ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಲು ಆಕೆಯ ತಾಯಿಯೇ ಅವಕಾಶ ಮಾಡಿ ಕೊಟ್ಟ ಆಘಾತಕಾರಿ ಮಾಹಿತಿ ತನಿಖೆ ಸಂದರ್ಭ ಹೊರಬಿದ್ದಿದೆ. ಚಿಕ್ಕಮ್ಮ ಎಂದು ಹೇಳಿಕೊಂಡಿದ್ದ ಮಹಿಳೆ ಆ ಬಾಲಕಿಯ ನಿಜವಾದ ತಾಯಿ ಎಂಬ ಅಂಶ ಹೊರಬಿದ್ದಾಗ ತನಿಖೆ ನಡೆಸುತ್ತಿರುವ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಯೊಂದರ ಆ ಮಹಿಳೆಗೆ ಅಲ್ಲಿಯೇ ಒಬ್ಬರೊಂದಿಗೆ ಮದುವೆ ಆಗಿ ಮಗಳು ಜನಿಸಿದ್ದಳು. ನಂತರ ಶೃಂಗೇರಿ ತಾಲೂಕಿನ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾದ ಈಕೆ ಕೆಲ ದಿನಗಳ ನಂತರ ಮಗಳನ್ನು ಶೃಂಗೇರಿಗೆ ಕರೆಸಿಕೊಂಡು ತನ್ನ ಅಕ್ಕನ ಮಗಳು ಎಂದು ಹೇಳಿಕೊಂಡಿದ್ದಳು ಎನ್ನಲಾಗಿದೆ. ಎರಡನೇ ಗಂಡನಿಂದಲೂ ದೂರವಾದ ಮಹಿಳೆ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇದೇ ಸಂದರ್ಭ ಮಗಳನ್ನು ಅನೈತಿಕ ದಾರಿಗೆ ಎಳೆದು ನಿರಂತರ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾಳೆ ಎಂಬ ಅಂಶ ತನಿಖೆ ಸಂದರ್ಭ ಗೊತ್ತಾಗಿದೆ.


from India & World News in Kannada | VK Polls https://ift.tt/2PiiJKy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...