ಮಂಗಳೂರು ಐಷಾರಾಮಿ ಕಾರು ಮಾರಾಟ ಪ್ರಕರಣ: ಮತ್ತಿಬ್ಬರು ಪೊಲೀಸರು ಸಸ್ಪೆಂಡ್‌

ಮಂಗಳೂರು: ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿದ ಪ್ರಕರಣದ ಆರೋಪದಲ್ಲಿ ಮತ್ತಿಬ್ಬರು ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿದ್ದು, ಈ ಮೂಲಕ ಅಮಾನತುಗೊಂಡವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಕಾರು ಮಾರಾಟ ಪ್ರಕರಣದಲ್ಲಿ ನಾರ್ಕೋಟಿಕ್‌ ಆ್ಯಂಡ್‌ ಎಕಾನಮಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಮತ್ತು ಪ್ರಸ್ತುತ ಚಿಕ್ಕಮಗಳೂರು ಡಿಸಿಆರ್‌ಬಿ ಎಸ್‌ಐ ಕಬ್ಬಾಳ್‌ರಾಜ್‌ ಅವರನ್ನು ಫೆ.27ರಂದು ಅಮಾನತುಗೊಳಿಸಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಆದೇಶ ಮಾಡಿದ್ದರು. ಈ ಆದೇಶದ ಆಧಾರದಲ್ಲೇ ಮಂಗಳೂರು ಪೊಲೀಸ್‌ ಕಮಿನಷರ್‌ ಎನ್‌. ಶಶಿಕುಮಾರ್‌ ಅವರು ಕಳಂಕಿತರಾದ ಆಶಿತ್‌ ಡಿಸೋಜ ಮತ್ತು ರಾಜಾ ಎಂಬವರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ಅಮಾನತುಗೊಂಡ ಆರೋಪಿಗಳು ಕಾರು ಮಾರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಂಗಳೂರು ನಗರ ಡಿಸಿಪಿ ವಿನಯ್‌ ಗಾಂವ್ಕರ್‌ ನೀಡಿದ ಆಂತರಿಕ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಬೆಂಗಳೂರಿನಲ್ಲಿವಿಚಾರಣೆ!ಅಮಾನತುಗೊಂಡ ಆರೋಪಿಗಳಾದ ಕಬ್ಬಾಳ್‌ರಾಜ್‌, ರಾಮಕೃಷ್ಣ, ಆಶಿತ್‌ ಡಿಸೋಜ, ರಾಜಾ ಹಾಗೂ ಮಧ್ಯವರ್ತಿ ದಿವ್ಯ ದರ್ಶನ್‌ಗೆ ರಾಜ್ಯ ಸಿಐಡಿ(ಕೇಂದ್ರ ತನಿಖಾ ದಳ) ನೋಟಿಸ್‌ ನೀಡಿದ್ದು, ನಾಲ್ವರಿಗೂ ವಿಚಾರಣೆಗೆ ಬೆಂಗಳೂರು ಸಿಐಡಿ ಕಚೇರಿಗೆ ತೆರಳಬೇಕಿದೆ. ತನಿಖಾಧಿಕಾರಿ ಇಂದು ನಗರಕ್ಕೆ! ಕಾರು ಮಾರಾಟ ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿಎಸ್ಪಿ ರೋಹಿಣಿ ಕಟೋಚ್‌ ನೇತೃತ್ವದ ತಂಡ ಇಂದು ಮಂಗಳೂರಿಗೆ ಆಗಮಿಸಿ ತನಿಖೆ ನಡೆಸುವ ಸಾಧ್ಯತೆಯಿದೆ. ಬಳಿಕ ತನಿಖಾಧಿಕಾರಿ ಸಮಗ್ರ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಲಿದ್ದು, ಅದನ್ನು ರಾಜ್ಯ ಡಿಜಿಪಿ ಪ್ರವೀಣ್‌ ಸೂದ್‌ ಅವರಿಗೆ ಸಲ್ಲಿಕೆಯಾಗಲಿದೆ.


from India & World News in Kannada | VK Polls https://ift.tt/303SsC0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...