4ಕೆ ಸ್ಟ್ರೈಯ್ಕೆರ್ ಅರ್ಥಾಸ್ಕಾಪಿಕ್‌ ಸಾಧನ ಬಳಸಿ ಮುರಿದಿದ್ದ ಯುವಕನ ಭುಜ ಕೂಡಿಸಿದ ಬೆಂಗಳೂರಿನ ಆಸ್ಪತ್ರೆ

ಬೆಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ (4K stryker arthroscopic system) ಸಾಧನ ಬಳಸಿ ಮುರಿದಿದ್ದ ಭುಜವನ್ನ ಕೂಡಿಸಿರುವ ಘಟನೆ ಬೆಂಗಳೂರಿನ ಎಸಿಇ ಸುಹಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಘಟನೆ ಹಿನ್ನೆಲೆ!ಜಿಗಣಿಯ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿರುವ 25ರ ಯುವಕ ರಾಜಪ್ಪ (ಹೆಸರು ಬದಲಿಸಿದೆ ) 2 ತಿಂಗಳ ಕೆಳಗೆ ಕಾರ್ಖಾನೆಯಲ್ಲಿ ಬಿದ್ದು ತನ್ನ ಭುಜಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದ, ತದನಂತರ ಸರಿಯಾದ ಚಿಕಿತ್ಸೆ ಪಡೆಯದೆ ನೋವು ಬಹಳ ಉಲ್ಬಾಣಗೊಂಡು ನಗರದ ಎಸಿಇ ಸುಹಾಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗೆ ಬಂದಾಗ, ವೈದ್ಯರು ಕೂಡಲೇ MRI ಮಾಡಿಸಿ, ಮಾಂಸಖಂಡ, ಸ್ನಾಯುಗಳು ಹಾಗೂ ಸೂಕ್ಷ್ಮ ಆಗಾಂಶಗಳು ಹರಿದ್ದದನ್ನ ಕಂಡು ಕೊಂಡರು. ಇದರಿಂದಾಗಿ ಯುವಕನ ಭುಜದ ಮೂಳೆಗಳು ಪದೆ ಪದೆ ಸರಿದು ಗಾಯ ಉಲ್ಬಣವಾಗಿತ್ತು. ಇಡೀ ಕುಟುಂಬದ ತುತ್ತಿನ ಚೀಲ ತುಂಬಬೇಕಿದ್ದ ವ್ಯಕ್ತಿಗೆ ಈ ಅಘಾತ ಮಾನಸಿಕವಾಗಿ ಜರ್ಜರಿತಗೊಳಿಸಿತ್ತು, ದುಡಿದು ತಿನ್ನುವ ಕೈಗಳೇ ಇಲ್ಲವಾದಂತಹ ಪರಿಸ್ಥಿತಿ ಎದುರಾದಾಗ ವೈದ್ಯಲೋಕದ ಹೊಸ ಆವಿಷ್ಕಾರ 25 ರ ಯುವಕನ ಜೀವನದಲ್ಲಿ ಮರುಹುಟ್ಟನ್ನು ಕೊಟ್ಟಿದೆ. ನೆನ್ನೆ ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಎಸಿಇ ಸುಹಾಸ್ ಆಸ್ಪತ್ರೆಯ ಡಾ ಜಗದೀಶ್ ಹಿರೇಮಠ್ ಹಾಗೂ ಆಸ್ಪತ್ರೆಯ ಮೂಳೆ ತಜ್ಞರ ತಂಡ ಯುವಕನ ಮುರಿದಿದ್ದ ಭುಜವನ್ನ ಅತ್ಯುನ್ಯತಾ ಸಾಧನವಾದ 4ಕೆ ಸ್ಟ್ರೈಯ್ಕೆರ್ ಅರ್ಥಾಸ್ಕಾಪಿಕ್ ಬಳಸಿ ಗುಣಪಡಿಸಿದ್ದಾರೆ. ಈ ಸಾಧನವು ಪ್ರಸ್ತುತ ಜಗತ್ತಿನ ಅತ್ಯುತ್ತಮ ಸಾಧನವಾಗಿದ್ದು ಮೂಳೆ, ಆಗಾಂಶ, ಸ್ನಾಯುಗಳ ಜೋಡಣೆಗೆ, ಕ್ಲಿಷ್ಟಕರ ಹಾಗೂ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನ ಮಾಡಬಹುದು. ಸರಿಸುಮಾರು 1ಕೋಟಿಗಿಂತ ಹೆಚ್ಚಿನ ಬೆಲೆ ಬಾಳುವ ವೈದ್ಯ ಸಾಧನವಾಗಿದೆ. ಸಂದುವಾತಗಳಿಂದ ಬಳಲುತ್ತಿರುವರಿಗೆ ಇದು ವರದಾನವಾಗಿದೆ. ಈ ಪ್ರಕ್ರಿಯಿಗೆ ಸುಮಾರು 2.5 ಲಕ್ಷ ತಗಲುವುದು, ಇನ್ಶೂರೆನ್ಸ್ ಮೂಲಕ ಇದನ್ನ ಪಾವತಿ ಮಾಡಲಾಗಿದೆ. ಇನ್ನು ಯುವಕ 3 ವಾರದಲ್ಲಿ ಮರಳಿ ಕೆಲಸಕ್ಕೆ ಹೋಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದು ರಾಜಪ್ಪನ ಜೀವನದಲ್ಲಿ ಹೊಸ ಆಶಾಕಿರಣವನ್ನ ಮೂಡಿಸಿದೆ.


from India & World News in Kannada | VK Polls https://ift.tt/3s9gibN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...