ಯುವತಿಯನ್ನು ನಗ್ನಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ₹25 ಲಕ್ಷಕ್ಕೆ ಬೇಡಿಕೆ ಇಟ್ಟ ಆಟೋ ಚಾಲಕ!

ಹುಬ್ಬಳ್ಳಿ: ಆಟೋ ಚಾಲಕನೊಬ್ಬ ಯುವತಿಯೊಬ್ಬಳನ್ನು ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ವೈರಲ್‌ ಮಾಡುವುದಾಗಿ ಮಾಡುತ್ತಾ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಹಳೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯೊಬ್ಬಳನ್ನು ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಬ್ಲಾಕ್‌ಮೇಲ್‌ ಮಾಡುತ್ತಾ ಆಕೆಯ ಚಿನ್ನಾಭರಣ ಕಿತ್ತುಕೊಂಡಿದ್ದು ಮಾತ್ರವಲ್ಲದೇ 25ಲಕ್ಷ ರೂ. ಕೊಡುವಂತೆ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ. ಹಳೆ ಹುಬ್ಬಳ್ಳಿ ರಾಜೇಂದ್ರ ನಗರದ ನಿವಾಸಿ ಅನಿಲರಾಜ ಡೊಂಗರೆ ಆರೋಪಿಯಾಗಿದ್ದು, ಆಟೋ ಚಾಲಕನಾದ ಈತ ಯುವತಿಯ ತಾಯಿಯನ್ನು ಅವರ ಕಚೇರಿಗೆ ನಿತ್ಯ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದ. ಜ.21ರಂದು ಬೆಳಗ್ಗೆ ಅವರು ಕೆಲಸಕ್ಕೆ ಹೋದಾಗ ಮನೆಗೆ ಬಂದ ಆರೋಪಿ ನಿಮ್ಮ ತಾಯಿ ಅಕ್ಕಿ ಪ್ಯಾಕೆಟ್‌ ಕೊಟ್ಟಿದ್ದಾರೆ. ಬಾಗಿಲು ತೆಗಿ ಎಂದು ಹೇಳಿ ಯುವತಿಯಿಂದ ಬಾಗಿಲು ತೆಗೆಸಿ ಮನೆಯೊಳಗೆ ಬಂದಿದ್ದಾನೆ. ಬಳಿಕ ನೀರು ಕೊಡುವಂತೆ ಕೇಳಿದ್ದಾನೆ. ಯುವತಿ ನೀರು ತರುವ ವೇಳೆ ಬಟ್ಟೆ ಬಿಚ್ಚುವಂತೆ ಹೇಳಿದ್ದಾನೆ. ಯುವತಿ ನಿರಾಕರಿಸಿದಾಗ ಬೆಲ್ಟ್‌ನಿಂದ ಹೊಡೆದಿದ್ದಲ್ಲದೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ. ಬಳಿಕ ಯುವತಿಯ ವಿಡಿಯೋ ಮಾಡಿಕೊಂಡು ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಮೊಬೈಲ್‌ಗಳಿಗೆ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಯುವತಿಯಿಂದ 4 ತೊಲೆ ಚಿನ್ನದ ಸರ ಪಡೆದ ಆರೋಪಿಯು, ಯುವತಿಯ ತಾಯಿಗೆ 25 ಲಕ್ಷ ರೂ. ನೀಡಬೇಕು, ತಾನು ಹೇಳಿದವರ ಜತೆ ಕಳಿಸಬೇಕು ಎಂದು ಬ್ಲಾಕ್‌ಮೇಲ್‌ ಮಾಡಿದ್ದಲ್ಲದೆ, ವಿಡಿಯೋವನ್ನು ನನ್ನ ಹಾಗೂ ಮಗಳ ಮೊಬೈಲ್‌ಗೆ ಕಳಿಸಿದ್ದಾನೆ ಎಂದು ಯುವತಿಯ ತಾಯಿ ಮಂಗಳವಾರ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3reD4O8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...