ಬೆಂಗಳೂರು: ಬಾರ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಬಲವಂತವಾಗಿ ತಬ್ಬಿಕೊಂಡು ಭುಜ ಕಚ್ಚಿ ವಿಕೃತಿ

ಬೆಂಗಳೂರು: ತಾಯಿ ಮತ್ತು ಸ್ನೇಹಿತರ ಜತೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ತೆರಳಿದ್ದ ಯುವತಿಯನ್ನು ಬಲವಂತವಾಗಿ ತಬ್ಬಿಕೊಂಡು ಭುಜ ಕಚ್ಚಿ ನೀಡಿದ ಆರೋಪದ ಮೇರೆಗೆ ಉದ್ಯಮಿ ಮಧುಸೂದನ್‌ ಚೆಲ್ಲಾರಾಮ್‌ (38) ನನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಮಾ.21ರ ರಾತ್ರಿ 11 ಗಂಟೆಗೆ ಚರ್ಚ್‌ಸ್ಟ್ರೀಟ್‌‌ನಲ್ಲಿರುವ ಮಿರಾಜ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಈ ಸಂಬಂಧ 24 ವರ್ಷದ ಸಂತ್ರಸ್ತ ದೂರು ನೀಡಿದ್ದರು.ತಾಯಿ ಮತ್ತು ಸ್ನೇಹಿತರ ಜತೆ ಮಿರಾಜ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ತೆರಳಿದ್ದೆ. ಅಲ್ಲಿಗೆ ಬಂದಿದ್ದ ಸ್ನೇಹಿತೆಯೊಬ್ಬರು, ತನ್ನ ಸ್ನೇಹಿತ ಮಧುಸೂಧನ್‌ ಚೆಲ್ಲಾರಾಮ್‌ನನ್ನು ಪರಿಚಯಿಸಿದರು. ರಾತ್ರಿ 11ರ ಸುಮಾರಿಗೆ ಆರೋಪಿ ಮಧುಸೂಧನ್‌ ಉದ್ದೇಶಪೂರ್ವಕವಾಗಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ ತಬ್ಬಿಕೊಂಡು ಭುಜ ಕಚ್ಚಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿ ಬಾಯಿಂದ ಕಚ್ಚಿ ಹಲ್ಲೆಮಾಡಿದ್ದಾಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ. ಲೈಂಗಿಕ ಕಿರುಕುಳ, ಹಲ್ಲೆಕೇಸ್‌ ದಾಖಲಿಸಿಕೊಂಡ ಕಬ್ಬನ್‌ಪಾರ್ಕ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


from India & World News in Kannada | VK Polls https://ift.tt/3cjYEN5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...