ಡೆಹ್ರಾಡೂನ್: ವಿವಾದಾತ್ಮಕ ಹೇಳಿಕೆಗಳಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ಉತ್ತಾರಖಂಡ್ ಮುಖ್ಯಮಂತ್ರಿ , ಇದೀಗ ಮತ್ತೊಂದು ವಿವಾದಾತ್ಮಕ ಹೇಳಿ ಟೀಕೆಗೆ ಗುರಿಯಾಗಿದ್ದಾರೆ. ಕೊರೊನಾ ವೈರಸ್ ಹಾವಳಿ ತಡೆಗಟ್ಟುವಲ್ಲಿ ಭಾರತ ಮತ್ತು ಇತರ ದೇಶಗಳ ನಡುವಿನ ವ್ಯತ್ಯಾಸದ ಕುರಿತು ಮಾತನಾಡುತ್ತಿದ್ದ ತಿರತ್ ಸಿಂಗ್ ರಾವತ್, ಭಾರತವನ್ನು 200 ವರ್ಷಗಳ ಕಾಲ ಆಳಿದ ಅಮೆರಿಕ ಕೊರೊನಾ ಹಾವಳಿಯಿಂದ ತತ್ತರಿಸುತ್ತಿದೆ ಎಂದು ಹೇಳಿದ್ದಾರೆ. ಭಾರತವನ್ನು 200 ವರ್ಷಗಳ ಕಾಲ ಆಳಿದ್ದ ಹಾಗೂ ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ್ದ ಅಮೆರಿಕ, ಈಗ ಕೊರೊನಾ ಹಾವಳಿಯಿಂದ ತತ್ತರಿಸುತ್ತಿದೆ. ಇದಕ್ಕೆ ಆಡಳಿತದಲ್ಲಿ ಸಮರ್ಥ ನಾಯಕತ್ವ ಇರದೇ ಇರುವುದೇ ಕಾರಣ ಎಂದು ತಿರತ್ ಸಿಂಗ್ ರಾವತ್ ಹೇಳಿದ್ದಾರೆ. ಭಾರತದ ಆಡಳಿತ ಚುಕ್ಕಾಣಿಯನ್ನು ಮಸರ್ಥ ನಾಯಕತ್ವ ವಹಿಸಿಕೊಂಡಿದೆ. ಇದೇ ಕಾರಣಕ್ಕೆ ಮಹಾಮಾರಿ ಕೊರೊನಾ ವೈರಸ್‌ನ್ನು ಹತ್ತಿಕ್ಕಲು ನಮಗೆ ಸಾಧ್ಯವಾಯಿತು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವು ಕೊರೊನಾ ವೈರಸ್‌ನ್ನು ಯಶಸ್ವಿಯಾಗಿ ಮಟ್ಟ ಹಾಕಿದ್ದೇವೆ ಎಂದು ಅಭಿಪ್ರಾಯಪಟ್ಟರು. ಒಂದು ವೇಳೆ ಭಾರತಕ್ಕೆ ಪ್ರಧಾನಿ ಮೋದಿ ನಾಯಕತ್ವ ಸಿಗದೇ ಹೋಗಿದ್ದರೆ, ನಾವೂ ಕೂಡ ಕೊರೊಣಾ ಹಾವಳಿಯಿಂದ ತತ್ತರಿಸಬೇಕಾಗಿತ್ತು. ಆದರೆ ಮೋದಿ ನಮ್ಮನ್ನೆಲ್ಲಾ ಈ ಸಂಕಷ್ಟದಿಂದಪಾರು ಮಾಡಿದ ಶ್ರೇಷ್ಠ ವ್ಯಕ್ತಿ ಎಂದು ರಾವತ್ ಹೇಳಿದರು. ಆದರೆ ಮಾಆತಿನ ಭರದಲ್ಲಿ ರಾವತ್ ಭಾರತವನ್ನು 200 ವರ್ಷಗಳ ಕಾಲ ಅಮೆರಿಕ ಆಳಿತ್ತು ಎಂದು ಹೇಳುವ ಮೂಲಕ ಅಪಹಾಸ್ಯಕ್ಕೀಡಾಗಿದ್ದಾರೆ. ಬಹುಶ: ರಾವತ್ ಬ್ರಿಟನ್ ಉದಾಹರಣೆ ಕೊಡಲು ಹೋಗಿ ಅಮೆರಿಕ ಎಂದು ತಪ್ಪಾಗಿ ಹೇಳಿದ್ದಾರೆ ಎಂಬ ಅನಿಸಿಕೆಗಳು ವ್ಯಕ್ತವಾಗಿವೆ. ಸೂರ್ಯವೇ ಮುಳುಗದ ಸಾಮ್ರಾಜ್ಯ ಎಂದು ಅಮೆರಿಕ ಬೀಗುತ್ತಿತ್ತು ಎಂದು ರಾವತ್ ಹೇಳಿದ್ದು, ಬಹುಶ: ಅವರು ಬ್ರಿಟನ್ ಹೆಸರು ಉಲ್ಲೇಖಿಸುವ ಬದಲು ಅಮೆರಿಕದ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
from India & World News in Kannada | VK Polls https://ift.tt/3lEQlyw