ವಿಟ್ಲ: ಯುವತಿಯ ನಗ್ನ ಚಿತ್ರ ತೆಗೆದು ಬ್ಲಾಕ್‌ಮೇಲ್‌, ಬಶೀರ್‌ ವಿರುದ್ಧ ದೂರು ದಾಖಲು

ವಿಟ್ಲ: ಯುವತಿಯೊಬ್ಬಳ ನಗ್ನ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ ಪುಣಚ ಲಕ್ಕೋನಿ ನಿವಾಸಿ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಂಬು ಬೆದ್ರಕಾಡು ನಿವಾಸಿ 19 ವರ್ಷದ ಅವಿವಾಹಿತ ಯುವತಿಯನ್ನು ಕಳೆದ ಸೆಪ್ಟೆಂಬರ್‌ನಿಂದ ಆಕೆಯ ಅಕ್ಕನ ಪತಿಯೇ(ಬಶೀರ್‌) ಬಲಾತ್ಕಾರವಾಗಿ ನಿರಂತರ ದೈಹಿಕ ಸಂಪರ್ಕ ಮಾಡಿದ್ದು, ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ತೆಗೆದುಕೊಂಡಿದ್ದ ಎನ್ನಲಾಗಿದೆ. ಈ ಚಿತ್ರಗಳನ್ನು ಇಟ್ಟುಕೊಂಡು ತನ್ನ ಬೇಡಿಕೆಗಳನ್ನು ಪೂರೈಸದೇ ಹೋದಲ್ಲಿ ಮೊಬೈಲ್‌ನಲ್ಲಿರುವ ಚಿತ್ರಗಳನ್ನು ವೈರಲ್‌ ಮಾಡುವ ಜತೆಗೆ ಜೀವ ಬೆದರಿಕೆಯನ್ನು ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಬಶೀರ್‌ ವಿರುದ್ಧ ಅತ್ಯಚಾರ ಸೇರಿ ಇನ್ನು ಹಲವು ಕೇಸ್‌ಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/388de8g

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...