ವಿಕಲಚೇತನರಿಗೆ ಗುರುತಿನ ಚೀಟಿ: ಕುಂಟುತ್ತಾ ಸಾಗಿದ ಯುಡಿಐಡಿ ಅರ್ಜಿಗಳ ಪ್ರಗತಿ!

ಆದರ್ಶ ಕೋಡಿ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ: ಅಂಗವಿಕಲರ ಮಾಸಾಶನ ಹಾಗೂ ಸೌಲಭ್ಯಗಳ ದುರ್ಬಳಕೆ ತಪ್ಪಿಸಲು ಹಾಗೂ ಗ್ರಾಮ, ತಾಲೂಕು, ಜಿಲ್ಲಾ ವ್ಯಾಪ್ತಿಯ ಅಂಗವಿಕಲರಿಗೆ ಸೌಲಭ್ಯಗಳನ್ನು ಅವರ ಕೈಸೇರಿಸುವ ನಿಟ್ಟಿನಲ್ಲಿ ಅಂಗವಿಕಲರಿಗೆ 'ಅಂಗವೈಕಲ್ಯದ ವಿಶಿಷ್ಟ ಗುರುತಿನ ಚೀಟಿ(ಯುಡಿ ಐಡಿ ಕಾರ್ಡ್‌)' ಮೂಲಕ ಅಂಗವಿಕಲರನ್ನು ಗುರುತಿಸುವ ಕೆಲಸವಾಗುತ್ತಿದೆ. ಆದರೆ ಜಿಲ್ಲೆಯಲ್ಲಿರುವ 22,993 ಅಂಗವಿಕಲರ ಪೈಕಿ ಕೇವಲ 9,129 ಮಂದಿ ಮಾತ್ರ ಸಲ್ಲಿಸಿದ್ದು, ಅದರಲ್ಲಿ6,377 ಮಂದಿ ಮಾತ್ರ ಪಡೆದಿದ್ದರೆ, ಉಳಿದ ಅರ್ಜಿಗಳು ದಾಖಲೆಗಳ ಸಮಸ್ಯೆಯಿಂದಾಗಿ ತಿರಸ್ಕಾರಗೊಂಡಿದ್ದು. ಜಿಲ್ಲೆಯ ಶೇ.40ರಷ್ಟು ಅಂಗವಿಕಲರು ಮಾತ್ರ ಯುಡಿಐಡಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಯುಡಿಐಡಿ ಮಾಡಿಸಲು ನಿರಾಸಕ್ತಿ ಫೆ. 2019ರಲ್ಲಿ ರಾಜ್ಯದಲ್ಲಿ ಆರಂಭವಾದ ಯುಡಿಐಡಿ ಅರ್ಜಿಗಳ ಸಲ್ಲಿಕೆ ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿದೆ. ದೊಡ್ಡಬಳ್ಳಾಪುರ ತಾಲೂಕನ್ನು ಹೊರತುಪಡಿಸಿ ಜಿಲ್ಲೆಯ ಉಳಿದ 3 ತಾಲೂಕುಗಳಾದ ದೇವನಹಳ್ಳಿ, ಹೊಸಕೋಟೆ, ನೆಲಮಂಗಲದಲ್ಲಿ ಯುಡಿಐಡಿ ಅರ್ಜಿ ಸಲ್ಲಿಸಲು ಅಂಗವಿಕಲರು ನಿರಾಸಕ್ತಿ ತೋರುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ಹಳ್ಳಿಗಳಲ್ಲಿ ಅಂಗವಿಕಲರಿಗೆ ಯುಡಿಐಡಿ ಮಾಹಿತಿಯೇ ಇಲ್ಲದಿರುವುದು ವಿಪರ್ಯಾಸ. ಆದರೆ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ವಿಆರ್‌ಡಬ್ಲ್ಯುಗಳನ್ನು ನೇಮಕ ಮಾಡಲಾಗಿದ್ದು, ಅವರು ಮಾಹಿತಿ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. 2020 ಮಾರ್ಚ್ ನಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ಯುಡಿಐಡಿ ಅರ್ಜಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಲಾಕ್‌ಡೌನ್‌ ತೆರವಾದರೂ ಕೂಡ ವಿಕಲಚೇತನರು ಯುಡಿಐಡಿ ಕಾರ್ಡ್‌ ಮಾಡಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಜಿಲ್ಲೆಯಲ್ಲಿನ ಅಂಗವಿಕಲರು ದೊಡ್ಡಬಳ್ಳಾಪುರ 6864 ದೇವನಹಳ್ಳಿ 3604 ಹೊಸಕೋಟೆ 7466 ನೆಲಮಂಗಲ 4859 ಒಟ್ಟು 22,993 ಸಲ್ಲಿಸಿದ ಯುಡಿಐಡಿ ಅರ್ಜಿಗಳು ದೊಡ್ಡಬಳ್ಳಾಪುರ 3304 ಹೊಸಕೋಟೆ 1258 ದೇವನಹಳ್ಳಿ 906 ನೆಲಮಂಗಲ909 ಒಟ್ಟು 6,377 ತಿರಸ್ಕೃತ ಅರ್ಜಿಗಳು ದೊಡ್ಡಬಳ್ಳಾಪುರ 408 ಹೊಸಕೋಟೆ 56 ದೇವನಹಳ್ಳಿ 67 ನೆಲಮಂಗಲ 73 ಒಟ್ಟು 604 ಮಾಸಾಶನ ಟ್ರಬಲ್‌ ಅಂಗವಿಕಲರಿಗೆ ಸಹಾಯಕವಾಗಲೆಂದು ಸರಕಾರ ಜಾರಿಗೆ ತಂದ ಮಾಸಾಶನ ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್‌ ನಂತರ ಸಮರ್ಪಕವಾಗಿ ಅಂಗವಿಕಲರನ್ನು ತಲುಪಲು ವಿಫಲವಾಗಿದೆ. ಸುಮಾರು 4 ತಿಂಗಳಿಂದ ಜಿಲ್ಲೆಯ ಅನೇಕ ಅಂಗವಿಕಲರಿಗೆ ಮಾಸಾಶನ ಬಂದಿಲ್ಲ. ಕೆಲವರಿಗೆ ಕೇವಲ 1 ತಿಂಗಳ ವೇತನ ಮಾತ್ರ ಲಭಿಸಿದ್ದು, ಅದನ್ನೇ ನಂಬಿಕೊಂಡಿದ್ದ ಅಂಗವಿಕಲರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅರ್ಜಿ ಹಾಕಲು ಬೇಕಾಗುವ ದಾಖಲೆ ಆಧಾರ್‌ ಕಾರ್ಡ್‌ ಫೋಟೊ ಸಹಿ ಹಳೆಯ ಅಂಗವಿಕಲರ ಕಾರ್ಡ್ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-29787441ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. 5 ತಿಂಗಳಲ್ಲಿ 4,000ಕ್ಕೂ ಹೆಚ್ಚಿನ ಅಂಗವಿಕಲರಿಗೆ ಯುಡಿಐಡಿ ಕಾರ್ಡ್‌ ಮಾಡಿಸಲಾಗಿದೆ. ಗ್ರಾಮೀಣ ಭಾಗದ ಅಂಗವಿಕಲರಿಗೆ ಯುಡಿಐಡಿ ಕಾರ್ಡ್‌ ಮಾಹಿತಿ ನೀಡಲಾಗುತ್ತಿದ್ದು ಅದರ ಅನುಕೂಲತೆ ತಿಳಿಸಲಾಗಿದೆ. ಆದಷ್ಟು ಬೇಗ ಎಲ್ಲಅಂಗವಿಕಲರ ಯುಡಿಐಡಿ ಕಾರ್ಡ್‌ ಮಾಡಿಸಲು ಪ್ರಯತ್ನಿಸುತ್ತೇವೆ. ಜಗದೀಶ್‌, ಜಿಲ್ಲಾಅಂಗವಿಕಲರ ಕಲ್ಯಾಣಾಧಿಕಾರಿ ತಿಂಗಳಿಗೆ ಬರುತ್ತಿದ್ದ ಮಾಸಾಶನ 4 ತಿಂಗಳು ಕಳೆದರೂ ಬಂದಿಲ್ಲ. ಅದನ್ನೆ ನಂಬಿಕೊಂಡಿದ್ದ ನಮಗೆ ತುಂಬಾ ಸಮಸ್ಯೆ ಎದುರಾಗಿದೆ. ಹಳ್ಳಿ ಭಾಗದ ಜನರಿಗೆ ಯುಡಿಐಡಿ ಕಾರ್ಡ್‌ ಗಳ ಸರಿಯಾದ ಮಾಹಿತಿ ನೀಡುವ ಅವಶ್ಯಕತೆಯಿದೆ. ಕಿರಣ್‌, ವಿಶೇಷಚೇತನ, ದೊಡ್ಡಬಳ್ಳಾಪುರ


from India & World News in Kannada | VK Polls https://ift.tt/3b4iFH7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...