ಕೊರಟಗೆರೆ: ಸಾಲದ ಬಾಧೆಯಿಂದ ಮನನೊಂದ ಪಣ್ಣೇನಹಳ್ಳಿ ಗ್ರಾಮದ ರೈತನೊರ್ವ ತನ್ನ ಜಮೀನಿನ ಸಮೀಪದ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಮಾಡಿಕೊಂಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ತಾಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ಪಣ್ಣೇನಹಳ್ಳಿ ಗ್ರಾಮದ ಲೇ.ಚೆನ್ನಿಗರಾಮಯ್ಯನ ಮಗನಾದ ಅಂಜೀನಪ್ಪ(70) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತನ್ನ ಮನೆಯಲ್ಲಿ ಯಾರು ಇಲ್ಲದೇ ವೇಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತ ಅಂಜಿನಪ್ಪ ಬೈರೇನಹಳ್ಳಿ ಕೆನರಾ ಬ್ಯಾಂಕಿನಲ್ಲಿ 2ಲಕ್ಷ 60ಸಾವಿರ ಮತ್ತು ಅಕ್ಕಿರಾಂಪುರದ ವಿಎಸ್‍ಎಸ್‍ಎನ್‍ನಲ್ಲಿ 25ಸಾವಿರ ಸಾಲ ಮಾಡಿದ್ದಾರೆ. ಸ್ಥಳಕ್ಕೆ ಪಿಎಸೈ ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕಿನ ಸಾಲ ತೀರಿಸಲು ಆಗದೇ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3o9xg7V