ಕೊರೊನಾ ತಡೆಗಾಗಿ ಮಾಸ್ಕ್ ಹೊಲಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪತ್ನಿ! ಬಿಎಸ್‌ವೈ ಮೆಚ್ಚುಗೆ

ಬೆಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಬಳಸುವ ಮಾಸ್ಕ್‌ನ್ನು ಬಡವರಿಗಾಗಿ ಹೊಲಿದು ಕೊಟ್ಟ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಪತ್ನಿ ಸವಿತಾ ಕೋವಿಂದ್‌ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಿಎಂ ಅವರು ರಾಷ್ಟ್ರದ ಪ್ರಥಮ ಮಹಿಳೆಯ ಈ ಸೇವಾ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಕೊರೊನಾ ವೈರಸ್‌ ವಿರುದ್ಧ ದೇಶವೇ ಒಗ್ಗಟ್ಟಾಗಿದ್ದು ಸಾಕಷ್ಟು ಜನರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಹೋರಾಟದಲ್ಲಿ ಸಾಥ್ ನೀಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ರಾಷ್ಟ್ರಪತಿಗಳ ಅಧಿಕೃತ ಮನೆಯಲ್ಲೇ ಕುಳಿತು ಮಾಸ್ಕ್‌ಗಳನ್ನು ಹೊಲಿಯುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾರೂ ಬೇಕಾದರೂ ತಮ್ಮ ಕೈಲಾದ ಕೊಡುಗೆ ನೀಡಬಹುದಾಗಿದ್ದು, ಅದರಂತೆ ಮಾಸ್ಕ್‌ಗಳು ಸದ್ಯದ ತುರ್ತು ಅವಶ್ಯವಾಗಿದ್ದು, ನನ್ನ ಕೈಯಲ್ಲಿ ಸಾಧ್ಯವಾದಷ್ಟು ಮಾಸ್ಕ್‌ಗಳನ್ನು ತಯಾರಿಸಿದ್ದೇನೆ ಎಂದು ಹೇಳಿದ್ದಾರೆ. ಪ್ರಥಮ ಮಹಿಳೆಯ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಬಿಎಸ್‌ವೈ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ರಾಷ್ಟ್ರದ ಪ್ರಥಮ ಮಹಿಳೆ ಸವಿತಾ ಕೋವಿಂದ್ , ಕೊರೊನ ಸೋಂಕು ತಡೆಯ ಮಾಸ್ಕ್ ಗಳನ್ನು ತಯಾರಿಸಲು ಸ್ವತಃ ಮುಂದಾಗಿರುವ ಆದರ್ಶ ನಡೆ ಅನುಕರಣೀಯವಾದುದು. ಕೊರೊನ ವಿರುದ್ಧ ಸೆಣಸಾಡುತ್ತಿರುವ ನಮ್ಮ ಆರೋಗ್ಯ ಯೋಧರಿಗಾಗಿ ನೀವು ಮಾಡುತ್ತಿರುವ ಮೌಲ್ಯಯತ ಕೆಲಸ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೂಡಾ ಟ್ವೀಟ್‌ ಮಾಡಿದ್ದು “ನಿಜಕ್ಕೂ ಗ್ರೇಟ್! ನಮ್ಮ ದೇಶದ ಪ್ರಥಮ ಮಹಿಳೆ ಶ್ರೀಮತಿ ಸವಿತಾ ಕೋವಿಂದ್ ಅವರು ಕೊರೋನಾ ಸೋಂಕು ಸುರಕ್ಷತೆಗೆ ನಮ್ಮ ಆರೋಗ್ಯ ಯೋಧರಿಗಾಗಿ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಆದರ್ಶ ಮತ್ತು ಮೌಲ್ಯಗಳ ಸಾರ್ಥಕ ನಿದರ್ಶನದ ತಮ್ಮ ಪ್ರೇರಣೆಗೆ ಅಭಿವಂದನೆಗಳು” ಎಂದಿದ್ದಾರೆ.


from India & World News in Kannada | VK Polls https://ift.tt/3cJxTiy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...