ದಿಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರಿಗಾಗಿ ದೇಶಾದ್ಯಂತ ಹುಡುಕಾಟ ಆರಂಭ

ಹೊಸದಿಲ್ಲಿ: ದಿಲ್ಲಿ ಪ್ರದೇಶದಲ್ಲಿರುವ 'ಅಲಾಮಿ ಮಾರ್ಕಜ್‌ ಬಂಗ್ಲೇವಾಲಿ' ಮಸೀದಿಯಲ್ಲಿ ಮಾರ್ಚ್‌ನಲ್ಲಿತಬ್ಲಿಘ್‌-ಇ-ಜಮಾತ್‌ ಆಯೋಜಿಸಿದ್ದ ಧಾರ್ಮಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗಾಗಿ ದೇಶಾದ್ಯಂತ ಹುಡುಕಾಟ ಆರಂಭವಾಗಿದೆ. ಮಾರ್ಚ್ 13ರಿಂದ 15ರ ಅವಧಿಯಲ್ಲಿ ನಡೆದ ಸಮಾವೇಶದಲ್ಲಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ ಸೇರಿ ವಿವಿಧ ರಾಜ್ಯ/ಕೇಂದ್ರಾ­ಡಳಿತ ಪ್ರದೇಶಗಳಿಂದ ಸಾವಿರಾರು ಜನರು ಪಾಲ್ಗೊಂಡು ಬಳಿಕ ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ದೇಶಾದ್ಯಂತ 10 ಮಂದಿ ಸೋಂಕಿಗೆ ಬಲಿಯಾದವರು ಇದೇ ಸಮಾವೇಶದಲ್ಲಿ ಪಾಲ್ಗೊಂಡಿ­ರುವುದು ಬೆಳಕಿಗೆ ಬಂದಿದೆ. ಈ ರೀತಿ ಸೋಂಕು ಹರಡಲು ಮಸೀದಿ­ಯಲ್ಲಿ ನಡೆದ ಧಾರ್ಮಿಕ ಕಾರ‍್ಯ­ಕ್ರಮ ಕಾರಣ­ವಾಗಿದ್ದು, ಸಮಾವೇಶದಲ್ಲಿ ಪಾಲ್ಗೊಂಡಿದ್ದ­ವರ ಹುಡು­ಕಾಟಕ್ಕೆ ರಾಜ್ಯ ಸರಕಾರಗಳು ಕಾರಾರ‍ಯಚರಣೆ ತೀವ್ರಗೊಳಿಸಿವೆ. ಸವಾಲಿನ ಕೆಲಸ: ದಕ್ಷಿಣ ದಿಲ್ಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಸೂಫಿ ಸಂತ ನಿಜಾಮುದ್ದೀನ್‌ ಔಲಿಯಾ ದರ್ಗಾ ಸಮೀಪವೇ ಬಂಗ್ಲೇವಾಲಿ ಮಸೀದಿ ಇದೆ. ಚಿಕ್ಕ ಗೇಟು, ಕಿಷ್ಕಿಂಧೆಯಂತಹ ರಸ್ತೆಯಲ್ಲಿರುವ ಮಸೀದಿ ಕಟ್ಟಡ ನಾಲ್ಕು ಮಹಡಿಗಳನ್ನು ಹೊಂದಿದೆ. ಇದೊಂದು ಜನನಿಬಿಡ ಪ್ರದೇಶ. ಯಾರು ಒಳಹೋದರು, ಹೊರಬಂದರು ಎಂದು ಪತ್ತೆ ಹಚ್ಚುವುದೇ ಕಷ್ಟ. ಇಂತಹ ಕಟ್ಟಡದಲ್ಲಿ ಸೋಮವಾರದವರೆಗೂ 2000 ಜನ ಇದ್ದಿದ್ದರಿಂದ ಸೋಂಕು ಶರವೇಗದಲ್ಲಿ ಹರಡಿರುವ ಸಾಧ್ಯತೆಗಳಿವೆ. ಹೀಗಾಗಿ ಕಾರ‍್ಯಕ್ರಮದಲ್ಲಿ ಪಾಲ್ಗೊಂಡವರಿಗಾಗಿ ರಾಜ್ಯ ಸರಕಾರಗಳು ಹುಡುಕಾಟ ನಡೆಸಿದ್ದರೂ ಅದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯ: ಲಾಕ್‌ಡೌನ್‌ ಆದೇಶ ಜಾರಿಯಾದ ನಂತರವೇ ಇಲ್ಲಿ ಜನರ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ. ಅದಕ್ಕೂ ಮೊದಲೇ ಕೊರೊನಾ ಸೋಂಕು ತಗುಲಿಸಿಕೊಂಡಿದ್ದವರ ಪೈಕಿ ಕೆಲವರು ಈ ಕಾರ್ಯ­ಕ್ರಮದಲ್ಲಿ ಭಾಗಿಯಾಗಿದ್ದರೆಂಬುದು ಗೊತ್ತಾಗಿ­ದ್ದರೂ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದರು ಎಂಬ ಆರೋಪ ಕೇಳಿಬಂದಿದೆ. ವಿದೇಶಿಯರನ್ನು ಹೆಚ್ಚಿನ ರೀತಿಯಲ್ಲಿ ತಪಾಸಣೆಗೊಳ­ಪಡಿಸದೇ ಒಳಬಿಟ್ಟಿದ್ದರು ಎನ್ನಲಾಗಿದೆ. ಪ್ರದೇಶದಲ್ಲಿ ವೈದ್ಯಕೀಯ ಶಿಬಿರಗಳನ್ನೂ ತೆರೆಯಲಿಲ್ಲಎನ್ನಲಾಗಿದೆ. ಈಗ ಎಚ್ಚೆತ್ತುಕೊಂಡಿರುವ ದಿಲ್ಲಿ ಪಾಲಿಕೆ 30 ಸಾವಿರ ಲೀಟರ್‌ ಸೋಂಕು ನಿವಾರಕ ದ್ರಾವಣದಿಂದ ಪ್ರದೇಶ­ವನ್ನು ಸ್ವಚ್ಛಗೊಳಿಸಿದೆ.


from India & World News in Kannada | VK Polls https://ift.tt/2UF0uiA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...