ಹೊಸದಿಲ್ಲಿ: ಕ್ರಿಕೆಟ್ ಪುನರಾರಂಭದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ, ಬದಲಿಗೆ ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸುವಂತಹ ಪ್ರಮುಖ ವಿಷಯಗಳಗಳ ಬಗ್ಗೆ ಹೆಚ್ಚು ಯೋಚಿಸುತ್ತೇನೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ. "ದೇಶದ ಈಗಿನ ಚಿತ್ರಣವನ್ನು ನೋಡುತ್ತಿದ್ದೇನೆ. ಪ್ರಸ್ತುತ ನಾವು ಮಾತನಾಡಬೇಕಾಗಿರುವ ವಿಷಯ ಕ್ರಿಕೆಟ್ ಸಮಸ್ಯೆ ಒಂದೇನಾ? ಶಾಲೆಗಳು ಮತ್ತು ಕಾಲೇಜುಗಳಿಗೆ ಹೋಗಲು ಸಾಧ್ಯವಾಗದ ಮಕ್ಕಳ ಬಗ್ಗೆ ನಾನು ಹೆಚ್ಚು ಚಿಂತೆ ಮಾಡುತ್ತೇನೆ. ಏಕೆಂದರೆ, ಅವರು ನಮ್ಮ ಯುವ ಪೀಳಿಗೆ. ಆದ್ದರಿಂದ, ಶಾಲೆಗಳು ಮೊದಲು ಮತ್ತೆ ತೆರೆಯಬೇಕೆಂದು ನಾನು ಬಯಸುತ್ತೇನೆ. ಕ್ರಿಕೆಟ್, ಫುಟ್ಬಾಲ್ ಸಾಮಾನ್ಯವಾಗಿ ಅಂತಿಮವಾಗಿ ಪುನಾರಂಭವಾಗುತ್ತವೆ," ಎಂದು ಸ್ಪೋರ್ಟ್ಸ್ ತಕ್‌ಗೆ ಅವರು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯ ಆಯೋಜಿಸಿ ಹಣವನ್ನು ಸಂಗ್ರಹಿಸುವ ಮಾರ್ಗವನ್ನು ಅಲ್ಲಗೆಳೆದರು. ಮಾರಣಾಂತಿಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಹಣವನ್ನು ಸಂಗ್ರಹಿಸಲು ನಮಗೆ ಇನ್ನೂ ಹಲವಾರು ಮಾರ್ಗಗಳಿವೆ ಎಂಬುದನ್ನು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ. "ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯಗಳು ನಡೆಯಬೇಕೆಂದು ಭಾವನಾತ್ಮಕವಾಗಿ ಹೇಳಬಹುದು. ಪ್ರಸ್ತುತ ಕಠಿಣ ಸನ್ನವೇಶದಲ್ಲಿ ಕ್ರಿಕೆಟ್ ಪಂದ್ಯವಾಡುವುದು ಪ್ರಮುಖ ಆದ್ಯತೆ ಅಲ್ಲ. ನಿಮಗೆ ಹಣ ಬೇಕಿದ್ದರೆ ಮೊದಲು ಗಡಿಭಾಗದಲ್ಲಿ ನೀವು ನಡೆಸುತ್ತರುವ ಚಟುವಟಿಕೆಗಳನ್ನು ನಿಲ್ಲಿಸಿ," ಎಂದು ಪಾಕಿಸ್ತಾನ ಮಾಜಿ ವೇಗಿ ನೀಡಿದ್ದ ಸಲಹೆಯನ್ನು ಕಪಿಲ್ ದೇವ್ ಅಲ್ಲಗೆಳೆದರು. "ನಾವು ಕ್ರಿಕೆಟ್ ಪಂದ್ಯಕ್ಕೆ ಖರ್ಚು ಮಾಡುವ ಹಣವನ್ನು ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಲು ಬಳಸಬಹುದು. ನಮ್ಮಲ್ಲಿರುವ ಅನೇಕ ಧಾರ್ಮಿಕ ಸಂಘಟನೆಗಳಿವೆ. ನಮಗೆ ನಿಜವಾಗಿಯೂ ಹಣದ ಅಗತ್ಯವಿದ್ದರೆ, ಅವರು ನೀಡಲು ಮುಂದೆ ಬರಬೇಕು. ಅದು ಅವರ ಜವಾಬ್ದಾರಿ. ಏಕೆಂದರೆ, ನಾವು ಧಾರ್ಮಿಕ ದೇವಾಲಯಗಳಿಗೆ ಭೇಟಿ ನೀಡಿದಾಗ ನಾವು ಹಣ ಸೇರಿದಂತೆ ವಿವಿಧ ಬಗೆಗಳನ್ನು ನೀಡಿದ್ದೇವೆ. ಆದ್ದರಿಂದ ಅವರು ಸರ್ಕಾರಕ್ಕೆ ಸಹಾಯ ಮಾಡಬೇಕು," ಎಂದು ಆಗ್ರಹಿಸಿದರು. ಕೊರೊನಾ ವೈರಸ್‌ನಂತಹ ಕಠಿಣ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸುವುದು ಒಳಿತು. ಏಕೆಂದರೆ, ಪಂದ್ಯದ ಪ್ರಸಾರದ ಹಣವು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಳಸಬಹುದು ಎಂದು ಈ ಹಿಂದೆ ಪಾಕಿಸ್ತಾನ ಮಾಜಿ ವೇಗಿ ಶೊಯೆಬ್ ಅಖ್ತರ್ ಸಲಹೆ ನೀಡಿದ್ದರು. "ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆಂಬುದನ್ನು ಕಪಿಲ್ ಭಾಯ್‌ಗೆ ಅರ್ಥವಾಗಿದೆ ಎಂಬ ಬಗ್ಗೆ ನನಗೆ ಸ್ಪಷ್ಟವಿಲ್ಲ. ಎಲ್ಲರೂ ಆರ್ಥಿಕವಾಗಿ ಕುಗ್ಗುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ನಾವು ಜತೆಯಾಗಿ ಹೆಚ್ಚಿನ ರೆವಿನ್ಯೂ ತರಬೇಕು. ನಾನು ದೊಡ್ಡ ದೃಷ್ಟಿಕೋನದಿಂದ, ಆರ್ಥಿಕ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಜಾಗತಿಕ ಪ್ರೇಕ್ಷಕರನ್ನು ಒಂದೇ ಪಂದ್ಯದಿಂದ ಕೊಂಡಿಯಾಗಿರಿಸಲಾಗುತ್ತದೆ ಹಾಗೂ ಅದು ಆದಾಯವನ್ನು ನೀಡುತ್ತದೆ. ಕಪಿಲ್ ಅವರಿಗೆ ಹಣದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನನ್ನ ಈ ಸಲಹೆ ಶೀಘ್ರದಲ್ಲೇ ಪರಿಗಣನೆಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ," ಎಂದು ಅಖ್ತರ್ ಆಜ್ ತಕ್‌ಗೆ ತಿಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2S7kRTR