ಮೀನುಗಾರರ ಸಾಲ ಮನ್ನಾಗೆ 60 ಕೋಟಿ ರಿಲೀಸ್, 23 ಸಾವಿರ ಮಂದಿಗೆ ಅನುಕೂಲ

ಬೆಂಗಳೂರು: ದಕ್ಷಿಣ ಕನ್ನಡ, ಹಾಗೂ ಜಿಲ್ಲೆಗಳ ಅಂದಾಜು 23 ಸಾವಿರ ಸಂಬಂಧ ರಾಜ್ಯ ಸರಕಾರ ಶುಕ್ರವಾರ 60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಕಳೆದ ಒಂದು ವರ್ಷದಿಂದ ಬಾಕಿ ಇದ್ದ ಮೀನುಗಾರರ ಸಾಲ ಮನ್ನಾದ ಬಾಬ್ತಿನ ಹಣ ಬಿಡುಗಡೆಯಾಗುವ ಮೂಲಕ ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಮೀನುಗಾರರಿಗೆ ಇದರಿಂದ ಅನುಕೂಲ ಆಗಲಿದೆ. ಮೀನುಗಾರರು ತಮ್ಮ ತಮ್ಮ ಸೊಸೈಟಿಗಳ ಮೂಲಕ ಪಡೆದುಕೊಂಡ ಸಾಲಕ್ಕೆ ಪ್ರಮಾಣ ಪತ್ರ ಸಲ್ಲಿಕೆಯಾದ ಬಳಿಕ ಬ್ಯಾಂಕ್‌ಗಳಿಗೆ ಹಣ ಬಿಡುಗಡೆಯಾಗಲಿದೆ. ನಂತರ ಫಲಾನುಭವಿಗಳ ಖಾತೆಗೆ ಸಾಲ ಮನ್ನಾದ ಹಣ ಜಮಾ ಆಗಲಿದೆ. ಹಣ ಬಿಡುಗಡೆಗೆ ಸಹಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಅವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧನ್ಯವಾದಗಳನ್ನು ತಿಳಿಸಿದ್ದಾರೆ. ದಕ್ಷಿಣ ಒಳನಾಡಿನಲ್ಲಿಇನ್ನೆರಡು ದಿನ ಮಳೆ ರಾಜ್ಯದಲ್ಲಿ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಒಳನಾಡಿನ ಹಲವೆಡೆ ಮಳೆ ಮುಂದುವರಿದಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿಇನ್ನೆರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾಗಮಂಡಲದಲ್ಲಿ80 ಮಿ.ಮೀ., ಮಡಿಕೇರಿಯಲ್ಲಿ40 ಮಿ.ಮೀ., ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಕಳಸ, ಮಂಡ್ಯ, ಕೃಷ್ಣರಾಜಪೇಟೆ, ಚಿಕ್ಕಮಗಳೂರು, ಬೆಂಗಳೂರಿನ ಎಚ್‌‍ಎಎಲ್‌ನಲ್ಲಿ30 ಮಿ.ಮೀ., ಆನೇಕಲ್‌, ಬೆಂಗಳೂರು ನಗರ, ಯಳಂದೂರಿನಲ್ಲಿ20 ಮಿ.ಮೀ. ಮಳೆ ಸುರಿದಿದೆ. ಯೆಲ್ಲೋ ಅಲರ್ಟ್‌: ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ದ.ಕ.ಜಿಲ್ಲೆ, ಉಡುಪಿಯಲ್ಲಿ ಸೆಕೆ: ಜಿಲ್ಲೆಮತ್ತು ಉಡುಪಿಯಲ್ಲಿಕಳೆದ ಎರಡು ದಿನಗಳಿಂದ ಮಳೆಯಾಗಿಲ್ಲ. ಗ್ರಾಮೀಣ ಭಾಗದ ಕೆಲವು ಕಡೆ ತುಂತುರು ಮಳೆಯಾಗಿದೆ. ಇದರ ಪರಿಣಾಮ ಬಿಸಿಲು, ಸೆಕೆ ವಿಪರೀತ ಏರಿಕೆ ಕಂಡಿದೆ.


from India & World News in Kannada | VK Polls https://ift.tt/354UOBY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...