
ನವದೆಹಲಿ: ನವದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘ್ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರನ್ನೂ ಪತ್ತೆ ಹಚ್ಚಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ನಾಗರಿಕರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಶಿಬಿರಗಳಲ್ಲಿ ಇರಿಸಲಾಗಿದೆ. ಅದರಂತೆ ದೆಹಲಿಯ ವಿವಿಧ ಭಾಗಗಳಲ್ಲಿರುವ ಕ್ವಾರಂಟೈನ್ ಶಿಬಿರಗಳಲ್ಲೂ ನೂರಾರು ಸಂಖ್ಯೆಯಲ್ಲಿ ತಬ್ಲಿಘಿಗಳನ್ನು ಇರಿಸಲಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಆದರೆ ಕ್ವಾರಂಟೈನ್ ಶಿಬಿರಗಳಲ್ಲಿರುವ ತಬ್ಲಿಘಿಗಳು ವೈದ್ಯಕೀಯ ಸಿಬ್ಬಂದಿಗೆ ತೀವ್ರ ತೊಂದರೆ ಕೊಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ದೆಹಲಿ ಸರ್ಕಾರ ಅಸಹಾಯಕತೆ ತೋಡಿಕೊಂಡಿದೆ. ತಬ್ಲಿಘಿಗಳು ವೈದ್ಯಕೀಯ ಸಿಬ್ಬಂದಿಗೆ ತೊಂದರೆ ಕೊಡುತ್ತಿದ್ದು, ಕ್ವಾರಂಟೈನ್ ಶಿಬಿರಗಳಿಗೆ ಹೆಚ್ಚಿನ ಭದ್ರತೆಯ ಅವಶ್ಯಕತೆ ಇದೆ ಎಂದು ದೆಹಲಿ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರೆ ಬರೆದಿರುವ ದೆಹಲಿ ಸರ್ಕಾರ, ಕೂಡಲೇ ತಬ್ಲಿಘಿಗಳು ಇರುವ ಕ್ವಾರಂಟೈನ್ ಶಿಬಿರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ. ಇದೇ ವೇಳೇ ಭದ್ರತೆಗಾಗಿ ದೆಹಲಿ ಪೊಲೀಸರಲ್ಲೂ ಮನವಿ ಮಾಡಿರುವ ಕೇಜ್ರಿವಾಲ್ ಸರ್ಕಾರ, ಈ ಶಿಬಿರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅವಶ್ಯಕತೆ ಇದೆ ಎಂದು ಹೇಳಿರುವುದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತದೆ. ಕ್ವಾರಂಟೈನ್ ಶಿಬಿರಗಳಲ್ಲಿರುವ ತಬ್ಲಿಘಿಗಳು ವೈದ್ಯಕೀಯ ಸಿಬ್ಬಂದಿಯ ಮುಖಕ್ಕೆ ಉಗಿದು ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಚಿಕಿತ್ಸೆಗೂ ಸೂಕ್ತವಾಗಿ ಸ್ಪಂದಿಸದೇ ತೊಂದರೆ ಸೃಷ್ಟಿಸುತ್ತಿದ್ದಾರೆ ಎನ್ನಲಾಗಿದೆ.
from India & World News in Kannada | VK Polls https://ift.tt/2wPeNbu