
ಪಾಟ್ನಾ: ಮುಂಬರುವ ಅಕ್ಟೋಬರ್‌ನಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಿಎಂ ಅವರ ಜೆಡಿಯು ಹಾಗೂ ಬಿಜೆಪಿ ಜೊತೆಯಾಗಿ ಚುನಾವಣೆಗೆ ಹೋಗಬೇಕಿದೆ. ಇದುವರೆಗೂ ಯಾವುದೇ ತೊಂದರೆಗಳಿಲ್ಲದೇ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರ ಸರಾಗವಾಗಿ ಆಡಳಿತ ನಡೆಸುತ್ತಿದ್ದು, ವಿಧಾನಸಭೆ ಚುನಾವಣೆ ಸಮಯದವರೆಗೂ ಈ ದೋಸ್ತಿ ಮುಂದುವರೆಯಬೇಕಿದೆ. ಈ ಮಧ್ಯೆ ಕೊರೊನಾ ವೈರಸ್ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಣ್ಣದೊಂದು ಹಗ್ಗಜಗ್ಗಾಟ ನಡೆಯುತ್ತಿದ್ದು, ಕೇಳಿದಷ್ಟು ನೆರವು ನೀಡದ ಕೇಂದ್ರದ ಮೇಲೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೊಂಚ ಅಸಮಾಧಾನ ಹೊರಹಾಕಿದ್ದಾರೆ. ನಿನ್ನೆ(ಏ.3)ನಡೆದ ಪ್ರಧಾನಿ ಮೋದಿ ನೇತೃತ್ವದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ, ರಾಜ್ಯಕ್ಕೆ ಅಗತ್ಯ ವೈದ್ಯಕೀಯ ಸಲಕರಣೆಗಳು ಬಂದಿಲ್ಲ ಎಂದು ನಿತೀಶ್ ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಸುಮಾರು 5 ಲಕ್ಷ ವೈದ್ಯಕೀಯ ಸಲಕರಣೆಗಳಿಗಾಗಿ ನಾವು ಬೇಡಿಕೆ ಮಂಡಿಸಿದ್ದೇವು. ಆದರೆ ನಮಗೆ ಕೇವಲ 4 ಸಾವಿರ ಮೆಡಿಕಲ್ ಕಿಟ್‌ಗಳಷ್ಟೇ ಬಂದಿವೆ ಎಂದು ನಿತೀಶ್ ಪ್ರಧಾನಿ ಅವರಿಗೆ ದೂರು ನೀಡಿದರು. ಅಲ್ಲದೇ 10 ಲಕ್ಷ N-95 ಮಾಸ್ಕ್‌ಗಳಿಗೆ ಬೇಡಿಕೆ ಮಂಡಿಸಿದ್ದು, ಕೇವಲ 10 ಸಾವಿರ ಮಾಸ್ಕ್‌ಗಳಷ್ಟೇ ಬಮದಿವೆ ಎಂದು ನಿತೀಶ್ ಕುಮಾರ್ ಮಾಹಿತಿ ನೀಡಿದರು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಪ್ರಧಾನಿ ಮೋದಿ, ಲಭ್ಯತೆ ಹಾಗೂ ಬೇಡಿಕೆಯನ್ನು ಪರಿಗಣಿಸಿ ಸೂಕ್ತ ವೈದ್ಯಕೀಯ ಸಲಕರಣೆಗಳನ್ನು ಎಲ್ಲಾ ರಾಜ್ಯಗಳಿಗೆ ರವಾನಸಿಲಾಗುವುದು ಎಂದು ಭರವಸೆ ನೀಡಿದರು.
from India & World News in Kannada | VK Polls https://ift.tt/2UR2OBS