ರಕ್ಷಣೆಗೆ ಬಂದ ವೈದ್ಯರ ಮುಖಕ್ಕೆ ಉಗಿದ ತಬ್ಲೀಗಿಗಳು: ಕ್ವಾರಂಟೈನ್‌ನ ಶಿಬಿರದೊಳಗೆ ಏನಾಗುತ್ತಿದೆ?

ನವದೆಹಲಿ: ಲಾಕ್‌ಡೌನ್ ಮಧ್ಯೆಯೂ ಧಾರ್ಮಿಕ ಸಭೆ ನಡೆಸಿ ಕೊರೊನಾ ವೈರಸ್ ಸೋಂಕು ಪಸರಿಸಿದ ಆರೋಪ ಎದುರಿಸುತ್ತಿರುವ ತಬ್ಲೀಗ್ ಜಮಾತ್ ಸದಸ್ಯರು, ತಮ್ಮ ರಕ್ಷಣೆಗೆ ಬಂದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ದೆಹಲಿಯ ಕ್ವಾರಂಟೈನ್‌ ಶಿಬಿರಗಳಲ್ಲಿ ಇರುವ ತಬ್ಲೀಗ್ ಜಮಾತ್ ಸದಸ್ಯರು ತಮ್ಮನ್ನು ಬಿಡುವಂತೆ ಒತ್ತಾಯಿಸಿದ್ದಾರಲ್ಲದೇ, ತಮಗೆ ಚಿಕಿತ್ಸೆ ನೀಡಲು ಬಂದ ವೈದ್ಯಕೀಯ ಸಿಬ್ಬಂದಿ ಮುಖಕ್ಕೆ ಉಗಿದು ಅಮಾನವೀಯ ವರ್ತನೆ ತೋರಿದ್ದಾರೆ. ದೆಹಲಿಯಲ್ಲಿರುವ ರೈಲ್ವೇ ಇಲಾಖೆಯ ಕ್ವಾರಂಟೈನ್‌ ಶಿಬಿರದಲ್ಲಿ ತಮ್ಮ ಆರೋಗ್ಯ ತಪಾಸಣೆಗೆ ಬಂದ ವೈದ್ಯಕೀಯ ಸಿಬ್ಬಂದಿ ಮುಖಕ್ಕೆ ಉಗಿದ ತಬ್ಲೀಗಿಗಳು, ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಊಟದ ವಿಚಾರವಾಗಿ ಮತ್ತೆ ತಗಾದೆ ತೆಗೆದ ಕೆಲವರು ಊಟದ ತಟ್ಟೆಯಲ್ಲೂ ಉಗುಳಿ ರಂಪಾಟ ಮಾಡಿದ್ದಾರೆ ಎಂದು ರೈಲ್ವೇ ಅಧಿಕಾರಿ ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಇನ್ನು ಕ್ವಾರಂಟೈನ್‌ನಲ್ಲಿ ತಬ್ಲೀಗಿಗಳ ರಂಪಾಟ ಕಂಡು ಸರ್ಕಾರ ಕ್ವಾರಂಟೈನ್‌ ಶಿಬಿರಗಳಿಗೆ ಶಸ್ತ್ರ ಸಜ್ಜಿತ ಸಿಆರ್‌ಪಿಎಫ್ ಯೋಧರನ್ನು ರವಾನಿಸಿದೆ. ಈ ಶಿಬಿರದಲ್ಲಿ ಒಟ್ಟು 167 ತಬ್ಲೀಗಿಗಳು ಕ್ವಾರಂಟೈನ್‌ಗೆ ಗುರಿಯಾಗಿದ್ದಾರೆ. ತಮ್ಮ ರಕ್ಷಣೆಗೆ ಬಂದ ವೈದ್ಯಕೀಯ ಸಿಬ್ಬಂದಿ ಮೇಲೆ ತಬ್ಲೀಗಿಗಳ ಅಮಾನವೀಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅವರ ಧರ್ಮ ಬೋಧನೆ ಸಭೆ ಹೀಗೆಯೇ ಇರುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/2UysG6S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...