ಹೊಸದಿಲ್ಲಿ: ವ್ಯಾಪಕವಾಗಿ ಹರಡುತ್ತಿರುವುದರಿಂದ ಜನ ಸಾಮಾನ್ಯರು ಅತಿ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಒಂದು ಹೊತ್ತಿನ ಆಹಾರಕ್ಕಾಗಿ ಕಷ್ಟಪಡುತ್ತಿದ್ದಾರೆ. ಕೇಂದ್ರ ಹಾಗೂ ಆಯಾ ರಾಜ್ಯ ಸರಕಾರಗಳು ಸಾಧ್ಯವಾದಷ್ಟು ಆಹಾರ, ಧ್ಯಾನಗಳನ್ನು ಪೂರೈಸುತ್ತಿದೆ. ಈ ಮಧ್ಯೆ ನೆರವಿನ ಹಸ್ತದೊಂದಿಗೆ ಮುಂದೆ ಬಂದಿರುವ ಏಷ್ಯಾದ ಅತಿ ದೊಡ್ಡ ರೈಲು ಜಾಲ ಸೇವೆಯಾಗಿರುವ , ದಿನಕ್ಕೆ 2.6 ಲಕ್ಷ ಊಟವನ್ನು ಪೂರೈಸುವ ಗುರಿಯನ್ನಿರಿಸಿದೆ. ರೈಲ್ವೆ ಕಿಚನ್ ಮೂಲಕ ತಲಾ 15 ರೂ.ಗಳಿಗೆ ಬೇಯಿಸಿದ ಊಟವನ್ನು ಆಯಾ ರಾಜ್ಯಗಳ ಜಿಲ್ಲಾಡಳಿತಗಳಿಗೆ ವಿತರಿಸಲು ರೈಲ್ವೆ ಸಚಿವಾಲಯ ಮುಂದಾಗಿದೆ. ವಲಯ ಮಟ್ಟದಲ್ಲಿ ಕಿಚನ್ ನಿರ್ವಹಣೆ ಬಗ್ಗೆ ಆಯಾ ಜಿಲ್ಲಾಡಳಿತ ಹಾಗೂ ರಾಜ್ಯಗಳಿಗೆ ಈಗಾಗಲೇ ರೈಲ್ವೆ ಮಾಹಿತಿ ಹಂಚಲಾಗಿದೆ. ಅಲ್ಲದೆ ಪಾವತಿಯನ್ನು ಬಳಿಕ ಮಾಡಬಹುದಾಗಿದೆ ಎಂಬುದನ್ನು ತಿಳಿಸಿದೆ. ನಿಗದಿಪಡಿಸಿದ ಸ್ಥಳಗಳಲ್ಲಿ ಅಡುಗೆ ಸಾಮರ್ಥ್ಯದ ಆಧಾರದಲ್ಲಿ 2.6 ಲಕ್ಷ ಊಟವನ್ನು ನೀಡುವ ಪ್ರಸ್ತಾಪಿಸಲಾಗಿದೆ. ಅಗತ್ಯವಿದ್ದರೆ ಪೂರೈಕೆಯನ್ನು ಹೆಚ್ಚಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿರುವ ಭಾರತೀಯ ರೈಲ್ವೆ, ಈಗಾಗಲೇ ಬೋಗಿಗಳನ್ನು ಐಸೋಲೇಷನ್ ಹಾಗೂ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಿದೆ. ಹಾಗೆಯೇ ವೈದ್ಯಕೀಯ ಸಿಬ್ಬಂದಿಗಳ ನೆರವಿಗೂ ಮುಂದಾಗಿರುವ ಭಾರತೀಯ ರೈಲ್ವೆ, ವೈಯಕ್ತಿಕ ರಕ್ಷಣಾ ಸಲಕರಣೆ ಕಿಟ್ ನಿರ್ಮಾಣದಲ್ಲೂ ತೊಡಗಿಸಿಕೊಂಡಿದೆ.
from India & World News in Kannada | VK Polls https://ift.tt/3bxfGV4