ಕೋವಿಡ್‌-19: ಜುಲೈ 1 ರವರೆಗೂ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಬಂದ್‌!

ಲಂಡನ್‌: ಇಡೀ ವಿಶ್ವದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರಮುಖವಾಗಿ ಇಂಗ್ಲೆಂಡ್‌ ಮೇಲೂ ಸಾಕಷ್ಟು ಪರಿಣಾಮ ಬಿರಿದ್ದು, ಈ ರಾಷ್ಟ್ರದಲ್ಲಿ ಇದುವರೆಗೂ 1.3 ಲಕ್ಷ ಜನರಲ್ಲಿ ಕೋವಿಡ್‌-19 ಸೋಂಕು ಪಾಸಿಟಿವ್‌ ಇರುವುದು ಕಂಡುಬಂದಿದೆ. ಕೊರೊನಾ ವೈರಸ್‌ನಿಂದಾಗಿ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಅಕಾಡೆಮಿ ಈ ಹಿಂದೆ ಮೇ.29ರವರೆಗೂ ಯಾವುದೇ ಅಧಿಕೃತ ಪಂದ್ಯಗಳ ಆಯೋಜನೆ ಇಲ್ಲ ಎಂದು ಹೇಳಿತ್ತು. ಇದೀಗ ಜುಲೈ 1ರ ವರೆಗೂ ಯಾವುದೇ ಬಗೆಯ ಅಧಿಕೃತ ಕ್ರಿಕೆಟ್‌ ಪಂದ್ಯಗಳನ್ನು ಆಯೋಜನೆ ಮಾಡುವುದಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದೆ. ಇದೇ ಕಾರಣಕ್ಕಾಗಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್‌ ಸರಣಿಯನ್ನು ಮುಂದೂಡಲಾಗಿದೆ. ಭಾರತ ವನಿತೆಯರ ಸೀಮಿತ ಓವರ್‌ಗಳ ಪ್ರವಾಸ ಕೂಡ ಮುಂದಕ್ಕೆ ಹಾಕಲಾಗಿದೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಇಸಿಬಿ ಮುಂದೂಡಿರುವ ಸರಣಿಗಳ ದಿನಾಂಕವನ್ನು ಮರುನಿಗದಿ ಮಾಡಲಾಗುವುದು ಎಂದು ತಿಳಿಸಿದೆ. ""ಈ ವರ್ಷದ ಆವೃತ್ತಿಯು ಸರ್ಕಾರ ಮತ್ತು ಆರೋಗ್ಯ ತಜ್ಞರ ನಿರಂತರ ಸಲಹೆಗೆ ಒಳಪಟ್ಟಿರುತ್ತದೆ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಸರಣಿ ಹಾಗೂ ಟೂರ್ನಿಗಳ ಪ್ರಸಾರ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ನಡೆಯ ಬಗ್ಗೆ ಸಮಾಲೋಚನೆ ಮಾಡಲಾಗುವುದು," ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ. "ಜುಲೈ ಪ್ರಾರಂಭವಾಗುವ ಹೊತ್ತಿಗೆ ಕೌಂಟಿ ಚಾಂಪಿಯನ್‌ಶಿಪ್‌ನ ಒಂಬತ್ತು ಸುತ್ತುಗಳು ಮುಗಿಯಬೇಕಾಗಿತ್ತು. ಆದರೆ, ಇಸಿಬಿಯ ವರದಿಗಳ ಪ್ರಕಾರ ಈ ಎಲ್ಲಾ ಪಂದ್ಯಗಳು ಖಂಡಿತವಾಗಿಯೂ ವೇಳಾಪಟ್ಟಿಯನ್ನು ಮರು ಪರಿಷ್ಕರಣೆ ಮಾಡಲಾಗುವುದು. ಈ ಋತುವಿನ ಕೊನೆಯಲ್ಲಿ ಟಿ-20 ಟೂರ್ನಿ ನಡೆಸುವ ಯೋಜನೆಯನ್ನು ಇಂಗ್ಲಿಷ್ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿದೆ. "ಮುಂದೂಡಿರುವ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಾಧ್ಯವಾದಷ್ಟು ಈ ಋತುವಿನ ಕೊನೆಯಲ್ಲಿ ಆಡಿಸಲು ಎಲ್ಲ ರೀತಿಯ ಯೋಜನೆಗಳನ್ನು ಸಿದ್ಧಪಡಿಸಲಾಗುವುದು. ಕಂಟಿ ಚಾಂಪಿಯನ್‌ಶಿಪ್‌ ಈ ಆವೃತ್ತಿಯ ಬಹುತೇಕ ಅವಧಿಯಲ್ಲಿ ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಅಂತಾರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿ ಆಧರಿಸಿ ಆಡಿಸಲು ಯೋಜನೆ ರೂಪಿಸಲಾಗುವುದು," ಎಂದು ಇಸಿಬಿ ಹೇಳಿದೆ. 100 ಟೂರ್ನಿಗಳ ಭವಿಷ್ಯದ ಕುರಿತು ನಿರ್ಧರಿಸಲು ಇಸಿಬಿ ಹೆಚ್ಚುವರಿಯಾಗಿ ಸಭೆ ನಡೆಸಲಿದೆ. ಈ ಉದ್ಘಾಟನಾ ಆವೃತ್ತಿಯ ನೂತನ ಮಾದರಿಯೊಂದಿಗಿನ ಈ ವಿಶೇಷ ಟೂರ್ನಿಯು ಇಲ್ಲಿನ ವಿವಿಧ ಸ್ಥಳಗಳಲ್ಲಿ ಆಯೋಜಿಸುವ ಯೋಜನೆ ಇತ್ತು. ಆದರ, ಸೋಂಕಿನಿಂದ ಇದು ಸದ್ಯದ ಮಟ್ಟಿಗೆ ನಿಂತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YfMtub

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...