ಆರ್‌ಸಿಬಿ Vs ಸಿಎಸ್‌ಕೆ ನಡುವಣ ಪ್ರಮುಖ ವ್ಯತ್ಯಾಸವೇನು?

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ () ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಂಡವು ಚೊಚ್ಚಲ ಕಿರೀಟದ ಹುಡುಕಾಟದಲ್ಲಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ಐಪಿಎಲ್ 2020 ನಡೆಯಬಹುದೋ ಇಲ್ಲವೋ ಎಂಬುದು ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಐಪಿಎಲ್ 13ನೇ ಆವೃತ್ತಿಗೆ ಲಗ್ಗೆಯಿಟ್ಟಿರುವಂತೆಯೇ ಆರ್‌ಸಿಬಿ ಇದುವರೆಗೆ ಕಪ್ ಗೆದ್ದಿಲ್ಲ. ಹಾಗಿದ್ದರೂ ಸಾಂಪ್ರದಾಯಿಕ ಬದ್ಧ ವೈರಿ ತಂಡದ ವಿರುದ್ಧ ಹಲವು ರೋಚಕ ಕದನಗಳಲ್ಲಿ ಭಾಗಿಯಾಗಿದೆ. ಚೆನ್ನೈ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಾರೆ. ಈ ಮಧ್ಯೆ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡದ ನಡುವಣ ವ್ಯತ್ಯಾಸದ ಬಗ್ಗೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ 2007ನೇ ಇಸವಿಯಲ್ಲಿ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಶತಕ ಸಾಧನೆ ಮಾಡಿರುವ ಮೆಕಲಮ್, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇದರಂತೆ ಇತ್ತಂಡಗಳ ಡ್ರೆಸ್ಸಿಂಗ್ ಕೊಠಡಿಯಲ್ಲಿ ಭಾಗಿಯಾಗಿರುವ ಮೆಕಲಮ್, ಬಲಾಬಲಗಳ ಬಗ್ಗೆ ಚೆನ್ನಾಗಿ ಬಲ್ಲವರಾಗಿದ್ದಾರೆ. ಹಾಗೆಯೇ ಎರಡೂ ಫ್ರಾಂಚೈಸಿಗಳ ಪ್ಲಸ್ ಹಾಗೂ ಮೈನಸ್ ಪಾಯಿಂಟ್‌ಗಳ ರಹಸ್ಯವನ್ನು ಬಯಲು ಮಾಡಿದ್ದಾರೆ. ಈ ಬಗ್ಗೆ ಕೇಳಿದಾಗ ''ಒಂದು ತಂಡವು ಸೆಲೆಕ್ಷನ್ ನಿಷ್ಠೆಯನ್ನು ತೋರಿಸುತ್ತದೆ ಮತ್ತು ತಮ್ಮಲ್ಲಿ ಹೊಂದಿರುವ ತಂಡದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇನ್ನೊಂದೆಡೆ ಮಗದೊಂದು ತಂಡವು ಪರಿಪೂರ್ಣ ತಂಡವನ್ನು ಬೆನ್ನಟ್ಟುತ್ತದೆ. ಆದರೆ ಹೇಗೆ ಆಡಬೇಕು ಎಂಬುದರ ಬಗ್ಗೆ ನೀಲನಕ್ಷೆಯನ್ನು ಹೊಂದಿಲ್ಲ'' ಎಂದು ವಿವರಿಸುತ್ತಾರೆ. ಇಲ್ಲಿ ಆರ್‌ಸಿಬಿ ತಂಡಕ್ಕೆ ಬ್ಲೂ ಪ್ರಿಂಟ್ ಕೊರತೆಯಿದೆ ಎಂದು ಮೆಕಲಮ್ ಬೊಟ್ಟು ಮಾಡುತ್ತಾರೆ. ಇದರಿಂದಲೇ ಆರ್‌ಸಿಬಿ ತಂಡವು ಕಪ್ ಏಕೆ ಇದುವರೆಗೆ ಕಪ್ ಗೆದ್ದಿಲ್ಲ ಎಂಬುದು ತಿಳಿದು ಬರುತ್ತದೆ. ಸರಿಯಾದ ಯೋಜನೆಯ ವಿವರವಾದ ರೂಪರೇಖೆ ಸಿದ್ಧಗೊಳಿಸುವುದರಲ್ಲಿ ಹಾಗೂ ಅದನ್ನು ಜಾರಿ ಮಾಡುವುದರಲ್ಲಿ ಆರ್‌ಸಿಬಿ ವಿಫಲವಾಗಿದೆ. ಅದೇ ಹೊತ್ತಿಗೆ ಸಿಎಸ್‌ಕೆ ತಂಡದಲ್ಲಿ ಸಮಾನ ತೀವ್ರತೆಯನ್ನು ಹೊಂದಿರುವ ಆಟಗಾರರ ಸಂಖ್ಯೆ ಕಡಿಮೆಯಾಗಿದೆ. ಆದರೆ ಆರ್‌ಸಿಬಿಯಲ್ಲಿ ಇದು ಜಾಸ್ತಿಯಾಗಿದ್ದರೂ, ಬ್ಲೂ ಪ್ರಿಂಟ್ ಅಭಾವ ಕಾಡುತ್ತದೆ ಎಂದು ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UEChro

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...