21 ದಿನ ಕೊರೊನಾ ಕರ್ಫ್ಯೂ: ಬಡವರು ಹೊಟ್ಟೆಗೇನು ತಿನ್ನೋದು? 'ನ್ಯಾಯ್' ಜಾರಿಗೆ 'ಕೈ' ಆಗ್ರಹ

ಹೊಸ ದಿಲ್ಲಿ: ಹರಡದಂತೆ ತಡೆಯಲು 21 ದಿನಗಳ ಕಾಲ ದೇಶಾದ್ಯಂತ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಸಂಘಟಿತ ವಲಯದ ಹಿತರಕ್ಷಣೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದೆ. ಬಡವರು, ಕೂಲಿ ಕೆಲಸಗಾರರು, ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು, ರೈತರು ಸೇರಿದಂತೆ ಹಲವರು ಆಯಾ ದಿನ ಕೆಲಸ ಮಾಡಿದರಷ್ಟೇ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಇವರಿಗೆ ಉದ್ಯೋಗವಿಲ್ಲದಂತಾದರೆ ಹೊಟ್ಟೆಪಾಡಿನ ಕಥೆ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಮೋದಿ ಸರ್ಕಾರವನ್ನು ತರಾಟೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ರೈತರ ವಿಚಾರದಲ್ಲಂತೂ ಒಂದೇ ಒಂದು ಅಕ್ಷರವನ್ನೂ ಪ್ರಧಾನಿ ಮೋದಿ ಮಾತನಾಡಿಲ್ಲ ಎಂದು ಹರಿಹಾಯ್ದರು. ರೈತರ ಸಾಲಮನ್ನಾ ಸೇರಿದಂತೆ ಹಲವು ವಿಚಾರಗಳ ಪ್ರಸ್ತಾಪವಾಗಬೇಕಿತ್ತು ಎಂದು ಸುರ್ಜೇವಾಲಾ ಆಗ್ರಹಿಸಿದರು. ‘ನ್ಯಾಯ್‌ ಯೋಜನೆ ಜಾರಿಗೆ ತನ್ನಿ’ ದೇಶದಲ್ಲಿ ಈಗ ‘ನ್ಯಾಯ್‌’ ಯೋಜನೆ ಜಾರಿಗೆ ಸಕಾಲ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಪ್ರತಿಪಾದಿಸಿದ್ದಾರೆ. 2019ರ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಯೋಜನೆಯನ್ನು ಘೋಷಿಸಿತ್ತು. ಬಡವರಿಗೆ ಕನಿಷ್ಟ ಆದಾಯ ನೀಡುವ ಯೋಜನೆ ಇದಾಗಿತ್ತು. ಇನ್ನು ಪ್ರಧಾನಿ ಮೋದಿ ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿಯ ರಕ್ಷಣೆಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದೂ ಕಾಂಗ್ರೆಸ್ ನಾಯಕ ಸುರ್ಜೇವಾಲ ಪ್ರಶ್ನಿಸಿದ್ದಾರೆ. ಎನ್‌ 95 ಮಾಸ್ಕ್‌ಗಳು ಸಾಮಾನ್ಯ ಜನರಿಗೆ ಇರಲಿ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೇ ಸಿಗುತ್ತಿಲ್ಲ ಎಂದು ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/33LMI0o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...