ರಾಜ್ಯದಲ್ಲಿವೆ ರಾಷ್ಟ್ರದಲ್ಲೇ ಅತಿಹೆಚ್ಚು ಕೊರೊನಾ ಸೋಂಕು ಪರೀಕ್ಷಾ ಕೇಂದ್ರಗಳು

ಬೆಂಗಳೂರು: ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರದಲ್ಲಿ ಮೊದಲ ಸಾವನ್ನು ಕಂಡ ಕರ್ನಾಟದಲ್ಲಿ ಅತಿಹೆಚ್ಚು ಸೋಂಕು ಪತ್ತೆ ಲ್ಯಾಬೋರೇಟರಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ 10 ಕೊರೊನಾ ಪೊಸಿಟಿವ್‌ ಪ್ರಕರಣಗಳು ದಾಖಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್‌(ಐಸಿಎಂಆರ್‌) ಬಿಡುಗಡೆ ಮಾಡಿದ ವರದಿ ಪ್ರಕಾರ ರಾಷ್ಟ್ರದಲ್ಲಿ 52 ಕೊವಿಡ್‌-19 ಪರೀಕ್ಷಾ ಕೇಂದ್ರಗಳಿವೆ. ಕರ್ನಾಟದಲ್ಲೇ ಅತಿಹೆಚ್ಚು ಲ್ಯಾಬೋರೇಟರಿಗಳಿವೆ. ಬೆಂಗಳೂರಿನಲ್ಲಿ ಬ್ಯಾಂಗಲೋರ್‌ ಮೆಡಿಕಲ್‌ ಕಾಲೇಜ್‌ ಆ್ಯಂಡ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌ (ಬಿಎಂಸಿ&ಆರ್‌ಐ) ಮತ್ತು ನ್ಯಾಷಿನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರೊಲಾಜಿ ಫೀಲ್ಡ್‌ ಯುನಿಟ್‌ನಲ್ಲಿ ಕೊವಿಡ್‌-19 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಇದರಂತೆ ಮೈಸೂರಿನಲ್ಲಿ ಮೈಸೂರ್‌ ಮೆಡಿಕಲ್‌ ಕಾಲೇಜ್‌ ಆ್ಯಂಡ್‌ ರೀಸರ್ಚ್‌ ಇನ್ಸ್‌ಟಿಟ್ಯೂಟ್‌, ಹಾಸನದಲ್ಲಿ ಹಾಸನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ಶಿವಮೊಗ್ಗದ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಕೊವಿಡ್‌-19 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಆಸಕ್ತಿಕರ ವಿಚಾರವೆಂದರೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಕೊವಿಡ್‌-19 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಆದರೆ ಇಲ್ಲಿರುವುದು ಕೇವಲ ಎರಡು ಪರೀಕ್ಷಾ ಕೇಂದ್ರಗಳು. ಕರ್ನಾಟಕವನ್ನು ಹೊರತು ಪಡಿಸಿದರೆ, ರಾಜಸ್ಥಾನದಲ್ಲಿ ನಾಲ್ಕು ಟೆಸ್ಟಿಂಗ್‌ ಸೆಂಟರ್‌ಗಳಿವೆ. ಮಹಾರಾಷ್ಟ್ರದಲ್ಲಿ ಹೆಚ್ಚು ಕೊವಿಡ್‌-19 ಪ್ರಕರಣಗಳನ್ನು ಪತ್ತೆಯಾದ್ದರಿಂದ ಹೆಚ್ಚಿನ ಲ್ಯಾಬೋರೇಟರಿಗಳನ್ನು ಸ್ಥಾಪಿಸಲು ಚಿಂತಿಸಲಾಗಿದೆ. ಪ್ರಸ್ತುತ ಏಳು ಲ್ಯಾಬೋರೇಟರಿಗಳಲ್ಲಿ ಕೊವಿಡ್‌-19 ಮಾದರಿಗಳನ್ನು ಸಂಗ್ರಹಿಸಿಡಲಾಗಿದೆ. ಅದರಂತೆ ತಮಿಳುನಾಡಿನಲ್ಲಿ ಕೊವಿಡ್‌-19 ಮಾದರಿಗಳನ್ನು ಸಂಗ್ರಹಿಸಿಡಲು ಏಳು ಲ್ಯಾಬೋರೇಟರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಪ್ರಸ್ತುತ ಎರಡು ಕೊವಿಡ್‌-19 ಮಾದರಿ ಸಂಗ್ರಹ ಕೇಂದ್ರಗಳಿವೆ. ಬಳ್ಳಾರಿಯಲ್ಲಿರುವ ವಿಜಯನಗರ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ಕಲಬುರಗಿಯಲ್ಲಿರುವ ಗುಲ್ಬರ್ಗ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಕೊವಿಡ್‌-19 ಮಾದರಿಗಳನ್ನು ಸಂಗ್ರಹಿಸಿಡಲಾಗುತ್ತಿದೆ.


from India & World News in Kannada | VK Polls https://ift.tt/33rqfpm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...