ಸ್ಟೇ ಅಟ್ ಹೋಮ್ ಚಾಲೆಂಜ್; ಕೆಎಲ್ ರಾಹುಲ್ ದಿನಚರಿ ಹೇಗಿದೆ ನೋಡಿ!

ಬೆಂಗಳೂರು: ಬಹುಶ: ಸಮಕಾಲೀನ ಭಾರತ ಕ್ರಿಕೆಟ್ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿದರೆ ಕರ್ನಾಟಕದ ಅತಿ ಹೆಚ್ಚು ಬೇಡಿಕೆಯುಳ್ಳ ಆಟಗಾರನಾಗಿದ್ದಾರೆ. ಇತ್ತೀಚೆಗಿನ ಕೆಲವು ಸರಣಿಗಳಲ್ಲಿ ರಾಹುಲ್ ಪ್ರದರ್ಶನವೇ ಇದಕ್ಕೆ ಕಾರಣವಾಗಿದೆ. ಟೀಮ್ ಇಂಡಿಯಾಗೆ ಬ್ಯಾಟಿಂಗ್ ಸಾಮರ್ಥ್ಯವುಳ್ಳ ವಿಕೆಟ್ ಕೀಪರ್ ಕೊರತೆಯನ್ನು ಎದುರಿಸಿದಾಗ ಆ ಸ್ಥಾನವನ್ನು ಸಮರ್ಥವಾಗಿ ತುಂಬಿರುವ ಕೆಎಲ್ ರಾಹುಲ್, ಯಾವುದೇ ಸ್ಥಾನದಲ್ಲೂ ಬ್ಯಾಟಿಂಗ್ ಮಾಡಲು ಸೈ ಎನಿಸಿದ್ದಾರೆ. ವಿಕೆಟ್ ಹಿಂದುಗಡೆ ನಿಂತು ನಾಯಕನಿಗೆ ಉಪಯಕ್ತ ಸಲಹೆಯನ್ನು ನೀಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಅಷ್ಟೇ ಯಾಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವವನ್ನು ವಹಿಸಿ ತಂಡಕ್ಕೆ ಅಮೂಲ್ಯ ಗೆಲುವು ದೊರಕಿಸಿಕೊಡುವುದಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಾಧನೆಗೆ ಕೈಗನ್ನಡಿಯೆಂಬಂತೆ ವಿಶ್ವದ ಅತಿ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಪಟ್ಟ ವಹಿಸಿದ್ದಾರೆ. ಆದರೆ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಐಪಿಎಲ್ 2020 ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದೆ. ಈ ಮಧ್ಯೆ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೇ ಸರಕಾರವು ಮಾರ್ಗದರ್ಶನ ನೀಡಿದೆ. ಜನಸಂದಣಿಯ ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದ್ದು, ಮನೆಯಲ್ಲೇ ಇರುವಂತೆಯೇ ಮನವಿ ಮಾಡಲಾಗಿದೆ. ಕ್ರಿಕೆಟಿಗರು ಸಹ ಇದರಿಂದ ಹೊರತಾಗಿಲ್ಲ. ಕೆಎಲ್ ರಾಹುಲ್ ಕೂಡಾ ತಮ್ಮ ಸಮಯವನ್ನು ಮನೆಯಲ್ಲೇ ಕಳೆಯುತ್ತಾರೆ. ಈ ಮಧ್ಯೆ ಮನೆಯಲ್ಲಿ ಇದ್ದುಕೊಂಡು ತಾವು ಏನೆಲ್ಲ ಮಾಡುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ದಿನಚರಿ ವಿಡಿಯೋಯನ್ನು ಹಂಚಿದ್ದಾರೆ. ಕೆಲವು ಹೊತ್ತು ಬ್ಯಾಟ್‌ನಲ್ಲಿ ಚೆಂಡಿನಾಟವನ್ನು ಆಡುವ ರಾಹುಲ್, ಸ್ವಲ್ಪ ಹೊತ್ತು ವಿಡಿಯೋ ಗೇಮ್, ಇನ್ನು ಸ್ವಲ್ಪ ಹೊತ್ತು ಐಫೋನ್‌ನಲ್ಲಿ ಕಾಲ ಕಳೆಯುತ್ತಾರೆ. ಪುಸ್ತಕ ಓದುವುದನ್ನು ರಾಹುಲ್ ಹವ್ಯಾಸ ಮಾಡಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 5-0 ಅಂತರದ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿತ್ತು. ಐದು ಪಂದ್ಯಗಳಲ್ಲಾಗಿ 224 ರನ್ ಪೇರಿಸಿದ್ದ ಕೆಎಲ್ ರಾಹುಲ್ ನೂತನ ದಾಖಲೆ ಬರೆದಿದ್ದರು. ಅಲ್ಲದೆ ಟಿ20 ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಹಿರಿಮೆಗೆ ಭಾಜನವಾಗಿದ್ದರು. ಏಕದಿನ ಸರಣಿಯಲ್ಲೂ ಶತಕ ಸೇರಿದಂತೆ 204 ರನ್ ಗಳಿಸಿದ್ದರು. ಆದರೂ ಭಾರತ 0-3 ಅಂತರದ ಕ್ಲೀನ್‌ಸ್ವೀಪ್ ಮುಖಭಂಗಕ್ಕೊಳಗಾಗಿತ್ತು. ಏತನ್ಮಧ್ಯೆ ಬಾಲಿವುಡ್ ನಟಿ ಜೊತೆ ಕೆಎಲ್ ರಾಹುಲ್ ಡೇಟಿಂಗ್ ಬಗ್ಗೆ ಸುದ್ದಿಗಳು ಹರಡುತ್ತಿದೆ. ರಾಹುಲ್‌ಗಾಗಿ ಅಡುಗೆ ಕೋಣೆಗಿಳಿದಿರುವ ಆತಿಯಾ ಶೆಟ್ಟಿ ಬಾಳೆಹಣ್ಣಿನ ಬ್ರೆಡ್ ತಯಾರಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೂ ಡೇಟಿಂಗ್ ಬಗ್ಗೆ ಒಬ್ಬರನ್ನೊಬ್ಬರು ತುಟಿ ಬಿಚ್ಚಿಲ್ಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3b7cn6q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...