ಕೊರೊನಾ ವೈರಸ್‌ ಆರ್ಭಟ..! ವಿಶ್ವಾದ್ಯಂತ ಈವರೆಗೆ 11 ಸಾವಿರಕ್ಕೂ ಹೆಚ್ಚು ಮಂದಿ ಸಾವು..

ವಾಷಿಂಗ್ಟನ್ (ಅಮೆರಿಕ): ವಿಶ್ವಾದ್ಯಂತ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಇದೀಗ 11 ಸಾವಿರ ದಾಟಿದೆ. ಈವರೆಗೆ 11,310 ಮಂದಿ ವಿಶ್ವಾದ್ಯಂತ ಮಾರಕ ವೈರಸ್ ದಾಳಿಗೆ ಜೀವಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈವರೆಗೆ ಪ್ರಪಂಚದಾದ್ಯಂತ 2,72,000 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 80 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದರೆ, 5 ಸಾವಿರ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಜಾನ್ಸ್‌ ಹಾಪ್ಕಿನ್ಸನ್‌ ವಿವಿ ಕೈಗೊಂಡ ಸಮೀಕ್ಷೆ ಲೆಕ್ಕಾಚಾರದಲ್ಲಿ ಈ ಅಂಕಿ ಅಂಶಗಳು ಬಯಲಾಗಿವೆ. ಅಮೆರಿಕದ ಉಪಾಧ್ಯಕ್ಷರ ಕಚೇರಿ ಅಧಿಕಾರಿ ಕೂಡಾ ಕೊರೊನಾ ವೈರಸ್‌ ಸೋಂಕಿತ ಅನ್ನೋ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಆದ್ರೆ, ಸೋಂಕಿತನ ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಾಗಲೀ, ಉಪಾಧ್ಯಕ್ಷ ಪೆನ್ಸ್‌ ಅವರಾಗಲೀ ಸಂಪರ್ಕಕ್ಕೆ ಬಂದಿರಲಿಲ್ಲ ಅನ್ನೋದು ದೃಢಪಟ್ಟಿದೆ. ಇಟಲಿ ಒಂದರಲ್ಲೇ ಕಳೆದ 24 ಗಂಟೆಗಳಲ್ಲಿ 627 ಮಂದಿ ಜೀವಬಿಟ್ಟಿದ್ದಾರೆ. ಹೀಗಾಗಿ, ಇಟಲಿ ಸರ್ಕಾರ ಸೇನಾಪಡೆಗಳನ್ನು ರವಾನಿಸಿದ್ದು, ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿಸುವ ಕೆಲಸದಲ್ಲಿ ತೊಡಗಿದೆ. ಇತ್ತ, ಅಮೆರಿಕದ ನ್ಯೂಯಾರ್ಕ್‌ ನಗರದಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ 2 ಅಥವಾ 3 ವಾರಗಳಲ್ಲಿ ಔಷಧಗಳ ದಾಸ್ತಾನು ಖಾಲಿಯಾಗುವ ಭೀತಿ ಶುರುವಾಗಿದೆ. ಚೀನಾ ದೇಶ ಮೊದಲ ಹಂತದ ಕೊರೊನಾ ವೈರಸ್‌ ಹೊಡೆತದಿಂದ ಪಾರಾಗಿದ್ದರೂ ಕೂಡಾ, ವೈರಸ್ ಮರಳಿ ದೇಶವನ್ನು ಪ್ರವೇಶಿಸುವ ಆತಂಕದಲ್ಲಿದೆ. ಹೀಗಾಗಿ, ಮೊದಲ ಹಂತದಲ್ಲಿ ಸೋಂಕಿಗೆ ತುತ್ತಾಗಿ ಚೇತರಿಕೆ ಕಂಡವರು ಹಾಗೂ ಹೊರದೇಶಗಳಿಂದ ಹೊಸದಾಗಿ ಸೋಂಕು ಅಂಟಿಸಿಕೊಳ್ಳುವವರ ಮೇಲೆ ನಿಗಾ ಇರಿಸಿದೆ. ಭಾರತದಲ್ಲಿ ಈವರೆಗೆ 223 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಪೈಕಿ ನಾಲ್ವರು ಸಾವಿಗೀಡಾಗಿದ್ಧಾರೆ. ಬಹುತೇಕರು ಚೇತರಿಕೆ ಹಂತದಲ್ಲಿದ್ದಾರೆ.


from India & World News in Kannada | VK Polls https://ift.tt/3a9O1J8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...