ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2008ರಲ್ಲಿ ಆರಂಭಿಸಲಾಗಿತ್ತು. ಆದರೆ, ಇಂಗ್ಲೆಂಡ್ ತಂಡದ ಯಾವೊಬ್ಬ ಆಟಗಾರ ಉದ್ಘಾಟನಾ ಆವೃತ್ತಿಯಲ್ಲಿ ಆಡಿರಲಿಲ್ಲ. ಇದಾದ ಬಳಿಕ, ಮುಂದಿನ ಆವೃತ್ತಿಯಲ್ಲಿ ಇಂಗ್ಲೆಂಡ್‌ನ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತ(7.5 ಕೋಟಿ ರೂ.)ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದರು. ನಂತರ, ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಆರ್‌ಸಿಬಿ ತಂಡದಲ್ಲಿ ಅತ್ಯುತ್ತಮ ಪ್ರಭಾವಿಯಾಗಿದ್ದ ಪೀಟರ್ಸನ್ ಅಂತಾರಾಷ್ಟ್ರೀಯ ಪಂದ್ಯದ ನಿಮಿತ್ತ ಬಹುಬೇಗ ಐಪಿಎಲ್‌ನಿಂದ ರಾಷ್ಟ್ರೀಯ ತಂಡಕ್ಕೆ ತೆರಳಿದ್ದರು. ನಂತರ, ಮುಂದಿನ ಆವೃತ್ತಿಯಲ್ಲೂ ಆರ್‌ಸಿಬಿ ಜೆರ್ಸಿ ಹಾಕಿಕೊಂಡಿದ್ದರು. ಅದರ ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್(ಈಗ ಕ್ಯಾಪಿಟಲ್ಸ್) ತಂಡದ ಪರ ಆಡಿದ್ದರು. ಐಪಿಎಲ್ ಟೂರ್ನಿಯ ವೇಳೆ ಇಂಗ್ಲೀಷ್ ಬ್ಯಾಟ್ಸ್‌ಮನ್ ಹಾಗೂ ಸೇರಿದಂತೆ ಹಲವು ಆಟಗಾರರ ಜತೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆದಿದ್ದರು. ಭಾರತದಲ್ಲಿ ಅನುಭವಿಸಿದ್ದ ಕ್ಷಣಗಳನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಬಹಿರಂಗಪಡಿಸಿದ್ದಾರೆ. "ಕ್ರಿಕೆಟ್ ಆಡುವಾಗ ಅತಿ ಹೆಚ್ಚು ಮೋಜಿನ ಕ್ಷಣಗಳನ್ನು ಅನುಭವಿಸಿದ್ದು ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಅವರ ಬಳಿ ಮಾತ್ರ. ಅವರು ನಿರಾಂತಕ ಭಾವದಿಂದ ಆಡುವುದನ್ನು ನೋಡಲು ಇಷ್ಟವಾಗುತ್ತದೆ. ಬೌಲರ್‌ಗಳು ರನ್ ಅಪ್ ತೆಗೆದುಕೊಂಡಾಗ ವಿರೇಂದ್ರ ಸೆಹ್ವಾಗ್ ಹಾಡು ಆಡುವ ಮೂಲಕ ಪಾರ್ಕ್ ಕಡೆ ಚೆಂಡು ಅಟ್ಟುವ ವಿಧಾನವನ್ನು ನಾನು ತುಂಬಾ ಇಷ್ಟಪಡುತ್ತೇನೆ. ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಯಾವಾಗಲೂ ಪಂದ್ಯದ ಸೂಪರ್ ಸ್ಟಾರ್," ಎಂದು ಬಣ್ಣಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ನೇಹದ ಬಗ್ಗೆ ಮಾತನಾಡಿ, "2009 ಮತ್ತು 2010ರ ಆವೃತ್ತಿಗಳಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆರ್‌ಸಿಬಿ ತಂಡದಲ್ಲಿದ್ದೆವು.. ವಿರಾಟ್ ಪಾಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಆರಂಭಿಕ ದಿನಗಳಾಗಿದ್ದವು. ಅಂದು ಕೊಹ್ಲಿ ಗುಂಡು-ಗುಂಡಾಗಿದ್ದರು. ಆ ಅವಧಿಯಲ್ಲಿ ನಮ್ಮಿಬ್ಬರ ನಡುವೆ ವಯಸ್ಸಿನಲ್ಲಿ ಭಾರಿ ಅಂತರವಿದ್ದರೂ ಬಾಂಧವ್ಯ ಮಾತ್ರ ಅತ್ಯುತ್ತಮವಾಗಿತ್ತು,'' ಎಂದು ಹೇಳಿದ್ದಾರೆ. "ವಿರಾಟ್ ಕೊಹ್ಲಿ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುತ್ತಾರೆಂದು ಅಂದೇ ತಿಳಿದಿತ್ತು. ಅವರ ಆಡುವ ಪರಿ, ಕಲಿಕೆಯಲ್ಲಿ ಅವರಿಗಿದ್ದ ಹಸಿವು, ಧೃಡನಿರ್ಧಾರ ಹಾಗೂ ಪಂದ್ಯದಲ್ಲಿನ ಅವರ ಏಕಾಗ್ರತೆ ಎಲ್ಲವೂ ಅವರ ಬ್ಯಾಟಿಂಗ್‌ನ ಶ್ರೇಷ್ಠತೆಯನ್ನು ಸಾರಿತ್ತು. ಆ ವೇಳೆ ನಾನು ಅಂದುಕೊಂಡ ಎಲ್ಲ ನಿರೀಕ್ಷೆಗಳು ಇಂದು ಸಕಾರವಾಗಿವೆ,'' ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ಪ್ರೇಕ್ಷಕರು ಮತ್ತು ಆಟದ ಹಲವಾರು ತಾರೆಗಳೊಂದಿಗಿನ ವಾತಾವರಣವು ಹೋಲಿಸಲಾಗದು ಎಂದು ಐಪಿಎಲ್ ಬಗ್ಗೆ ಕೆವಿನ್ ಪೀಟರ್ಸನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ufj53h