ಕೊರೊನಾ ಭೀತಿ: ಶೀಘ್ರದಲ್ಲೇ ಇಟಲಿಯಲ್ಲಿ ಸಿಲುಕಿರುವ 400 ಕನ್ನಡಿಗರ ಏರ್‌ಲಿಫ್ಟ್‌!

ಬೆಂಗಳೂರು: ಇಟಲಿಯಲ್ಲಿ ಸಿಲುಕಿಕೊಂಡು ತಾಯ್ನಾಡಿಗೆ ಮರಳಲು ಹಪಹಪಿಸುತ್ತಿರುವ 400 ಕನ್ನಡಿಗರನ್ನು ಏರ್‌ಲಿಫ್ಟ್‌ ಮೂಲಕ ಕರೆ ತರಲಾಗುವುದು. ಕೇಂದ್ರ ಸರಕಾರದ ನೆರವಿನೊಂದಿಗೆ ಶೀಘ್ರದಲ್ಲೇ ಎಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಸಿಎನ್‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಪ್ರಿಯಾಂಕ ಖರ್ಗೆ ಅವರು ಇಟಲಿಯಲ್ಲಿ ಸಿಕ್ಕಿಹಾಕಿಕೊಂಡಿರುವ 400ಕ್ಕೂ ಹೆಚ್ಚು ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕರೆ ತರಬೇಕು ಎಂದು ವಿನಂತಿಸಿದರು. ''ಇಟಲಿಯಲ್ಲಿ ವೈರಸ್‌ನಿಂದಾಗಿ ಅಲ್ಲಿ ನೆಲೆಸಿದ್ದ ಸಾವಿರಾರು ಭಾರತೀಯರು ಸ್ವದೇಶಕ್ಕೆ ಮರಳುತ್ತಿದ್ದಾರೆ. ಅವರಲ್ಲಿ 150 ವಿದ್ಯಾರ್ಥಿಗಳು ಸೇರಿದಂತೆ 400ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಸ್ವದೇಶಕ್ಕೆ ಮರಳಲು ವಿಮಾನದಲ್ಲಿ ಅವಕಾಶ ನೀಡುತ್ತಿಲ್ಲ. ರಾಯಭಾರಿ ಕಚೇರಿಯಿಂದಲೂ ನೆರವು ಸಿಗುತ್ತಿಲ್ಲ'' ಎಂದು ಪ್ರಿಯಾಂಕ ಖರ್ಗೆ ಗಮನಕ್ಕೆ ತಂದರು. ''ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತೀಯರನ್ನು ಮರಳಿ ಕರೆ ತರುವ ನಿಟ್ಟಿನಲ್ಲಿ ಪೂರ್ಣ ಗಮನ ಹರಿಸಿದೆ. ಮಿಲಾನ್‌ ಏರ್‌ಪೋರ್ಟ್‌ನಿಂದ ಕನ್ನಡಿಗರನ್ನು ವಾಪಸ್‌ ಕರೆತರಲಾಗಿದೆ. ಆದರೆ ರೋಮ್‌ನಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಪ್ರಯಾಣಿಕರ ರಕ್ತ ಮಾದರಿಯ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ನಿರೀಕ್ಷಿಸಲಾಗಿದೆ'' ಎಂದು ಡಿಸಿಎಂ ಹೇಳಿದರು. ರೋಮ್‌ನಲ್ಲಿ ಸಿಲುಕಿರುವ ಆನಂದ್‌ ಸಿಂಗ್‌ ಮಗಳು ರೋಮ್‌ ವಿಮಾನ ನಿಲ್ದಾಣದಲ್ಲಿರುವ 90 ವಿದ್ಯಾರ್ಥಿಗಳ ಪೈಕಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಮಗಳು ಇರುವುದಾಗಿ ತಿಳಿದು ಬಂದಿದೆ. ''ಸೋಮವಾರ ರಾತ್ರಿ ಮಗಳ ಜೊತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಆದರೆ ನಂತರ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ'' ಎಂದು ಆನಂದ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ವಿಶ್ವಾದ್ಯಂತ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 8,000ಕ್ಕೆ ಸಮೀಪಿಸಿದೆ. ಒಟ್ಟಾರೆ ಸೋಕಿತರ ಸಂಖ್ಯೆ 1,90,000 ದಾಟಿದೆ. ಭಾರತದಲ್ಲಿ ಕೊವಿನ್‌-19 ಸೋಂಕಿತರ ಸಂಖ್ಯೆ 139 ಇದೆ. ಕರ್ನಾದಲ್ಲಿ ಈಗಾಗಲೇ 10 ಮಂದಿಗೆ ಕೊರೊನಾ ತಗುಲಿರುವುದು ದೃಢ ಪಟ್ಟಿದೆ. ಒಟ್ಟಾರೆ ರಾಜ್ಯದಲ್ಲಿ 58 ಮಂದಿಯನ್ನು ಪ್ರತ್ಯೇಕ ವಿಭಾಗದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.


from India & World News in Kannada | VK Polls https://ift.tt/2x8SOvy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...